ಕೇಸರಿ ಬಿಳಿ ಹಸಿರು ಬಣ್ಣಗಳೊಂದಿಗೆ ಕಂಗೊಳಿಸುತ್ತಿದೆ ಮಂಗಳೂರಿನ ಪ್ರಸಿದ್ಧ ಈ ಆಸ್ಪತ್ರೆ

77ನೇ ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಫಾದರ್ ಮುಲ್ಲರ್ ಆಸ್ಪತ್ರೆ ಕಂಕನಾಡಿ ಕೇಸರಿ ಬಿಳಿ ಹಸಿರು ಬಣ್ಣಗಳೊಂದಿಗೆ ಕಂಗೊಳಿಸುತ್ತಿದೆ. ಫಾದರ್ ಮುಲ್ಲರ್ ಆಸ್ಪತ್ರೆ ಮಂಗಳೂರಿನ ಕಂಕನಾಡಿ ಪ್ರದೇಶದಲ್ಲಿ ಇದೆ. ಉಡುಪಿ, ಬೆಳ್ತಂಗಡಿ, ಮೂಡುಬಿದ್ರೆ, ಕಾರ್ಕಳ, ಸುಬ್ರಹ್ಮಣ್ಯ ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ರೋಗಿಗಳು ಈ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ.
ಎಲ್ಲಾ ರೀತಿಯ ಆಧುನಿಕ ಸೌಲಭ್ಯಗಳು ಈ ಆಸ್ಪತ್ರೆಯಲ್ಲಿ ದೊರೆಯುತ್ತವೆ. ಅತಿ ಪುರಾತನ ಆಸ್ಪತ್ರೆಗಳಲ್ಲಿ ಒಂದಾದ ಈ ಆಸ್ಪತ್ರೆಯಲ್ಲಿ ಎಲ್ಲಾ ನುರಿತ ಡಾಕ್ಟರ್ ಗಳು ತಮ್ಮ ಸೇವೆಯನ್ನು ನಿರಂತರ ನೀಡುತ್ತಿದ್ದಾರೆ. ಇಲ್ಲಿ ದಾದಿಯರು ರೋಗಿಗಳನ್ನು ವಿಶೇಷ ಪ್ರೀತಿಯಿಂದ ಹಾರೈಕೆ ಮಾಡುತ್ತಿದ್ದಾರೆ. ಇಎಸ್ಐ (ESI) ಸ್ಟಾರ್ ಹೆಲ್ತ್ Star Health) ಹಾಗೂ ಇತರ ಆರೋಗ್ಯ ಕಾರ್ಡ್ ಗಳ ಪ್ರಯೋಜನ ಈ ಆಸ್ಪತ್ರೆಯಲ್ಲಿ ಸಿಗುತ್ತದೆ. ಫಾದರ್ ಮುಲ್ಲರ್ ಆರೋಗ್ಯ ಕಾರ್ಡ್ ಮಾಡಿದ್ದಲ್ಲಿ ವಿಶೇಷ ಡಿಸ್ಕೌಂಟ್ ಲಭ್ಯವಿದೆ.
ಇಲ್ಲಿ ಲಭ್ಯವಿರುವ ಸೇವೆಗಳು
ಜನರಲ್ ಮೆಡಿಸಿನ್ (General Medicine),
ಸಾಮಾನ್ಯ ಶಸ್ತ್ರಚಿಕಿತ್ಸೆ (General Surgery)
ಪ್ರಸೂತಿ ಮತ್ತು ಸ್ತ್ರೀರೋಗ (OBGY),
ಮಕ್ಕಳ ಶಸ್ತ್ರಚಿಕಿತ್ಸೆ (Paediatrics0,
ಮೂಳೆಚಿಕಿತ್ಸೆ (Orthopedics),
ಕಿವಿ ಮೂಗು ಗಂಟಲು ಚಿಕಿತ್ಸೆ (ENT),
ನೇತ್ರ ಚಿಕಿತ್ಸೆ (Ophthalmology)
ಚರ್ಮರೋಗ (Dermatology),
ಅರಿವಳಿಕೆ ಶಾಸ್ತ್ರ (Anaesthesiology),
ಮನೋವೈದ್ಯಶಾಸ್ತ್ರ (Psychiatry),
ರೋಗಶಾಸ್ತ್ರ (Pathology),
Radio Diagnosis,
Microbiology,
Biochemistry,
Forensic Medicine,
Physiotherapy
ಇಲ್ಲಿವೆ ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದೇಶಗಳು:
ಆಗಸ್ಟ್ 15… ಪ್ರತಿ ಭಾರತೀಯರ ಪಾಲಿನ ಹೆಮ್ಮೆಯ ದಿನ. ಬ್ರಿಟಿಷರ ಆಳ್ವಿಕೆ ಎಂಬ ಬಂಧನದ ಬೇಡಿ ಕಳಚಿಕೊಂಡ ದಿನ ಇದು. ಈ ಸುದಿನದ ಹಿಂದೆ ಅದೆಷ್ಟೋ ಕೆಚ್ಚೆದೆಯ ವೀರರ ಬಲಿದಾನಗಳಿವೆ, ತ್ಯಾಗದ ಕಥೆಗಳಿವೆ. ಸ್ವಾತಂತ್ರ್ಯದ ಕಿಚ್ಚು ದೇಶದೆಲ್ಲೆಡೆ ವ್ಯಾಪಿಸಿದಾಗ ಕೊನೆಗೆ ಬ್ರಿಟಿಷರೇ ನಡುಗಿ ಹೋಗಬೇಕಾಯಿತು. ಈ ಮಹತ್ವದ ದಿನಕ್ಕಾಗಿ ಅಸಂಖ್ಯಾತ ಹೋರಾಟಗಾರರು ಸಂಕಲ್ಪ ತೊಟ್ಟಿದ್ದರು. ಧೈರ್ಯದಿಂದ ಹೋರಾಡಿದ್ದರು, ಕಠಿಣ ಹಾದಿಯನ್ನು ಶ್ರಮಿಸಿ ದೇಶ ಪ್ರೇಮದ ಕಿಚ್ಚು ಹಚ್ಚಿದ್ದರು
ಹಾಗಂತ, ಸ್ವಾತಂತ್ರ್ಯ ಪಡೆಯಬೇಕೆಂಬ ಕೆಚ್ಚೆದೆಯ ಹೋರಾಟದ ಹಾದಿ ಸುಲಭದ್ದಾಗಿರಲಿಲ್ಲ. ಸ್ವಾತಂತ್ರ್ಯ ಸಂಗ್ರಾಮದ ರಕ್ತಸಿಕ್ತ ಇತಿಹಾಸಕ್ಕೆ ಸಾಕ್ಷಿಯಾದ ಸಾಕಷ್ಟು ತಾಣಗಳು, ದಾಖಲೆಗಳು ಭಾರತದಲ್ಲಿ ಇವೆ. ಇವೆಲ್ಲಾ ನಮ್ಮ ಹಿರಿಯರ ಹೋರಾಟದ ಕಿಚ್ಚಿಗೆ ಸಾಕ್ಷಿಯಾಗಿದೆ. ತಮ್ಮ ಬದುಕನ್ನೇ ದೇಶಕ್ಕಾಗಿ ಮುಡಿಪಾಗಿಟ್ಟು, ಧೈರ್ಯದಿಂದ ದೇಶಕ್ಕಾಗಿ ಪ್ರಾಣವನ್ನು ತ್ಯಾಗ ಮಾಡಿದ ಅದೆಷ್ಟೋ ಮಹನೀಯರ ಕಥೆಗಳನ್ನು ಕೇಳಿದಾಗ ಮೈಯೆಲ್ಲಾ ರೋಮಾಂಚನಗೊಳ್ಳುತ್ತದೆ. ಈ ಸಾಧಕರ ಪ್ರಯತ್ನ, ಬದುಕಿನ ದಾರಿಯೇ ನಮಗೆಲ್ಲರಿಗೂ ಸ್ಫೂರ್ತಿ.