
ಕೊಚ್ಚಿ(ಮೇ.12): ಈಗಲೂ ದೇಶದಲ್ಲಿ ಅತಿಹೆಚ್ಚು ಕೋವಿಡ್ ಸೋಂಕು ಮತ್ತು ಸಾವು ದಾಖಲಾಗುತ್ತಿರುವ ಕೇರಳದಲ್ಲಿ ಇದೀಗ ಟೊಮೆಟೊ ಜ್ವರ ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಅದರಲ್ಲೂ 5 ವರ್ಷಕ್ಕಿಂತ ಚಿಕ್ಕ ವಯಸ್ಸಿನ 80 ಮಕ್ಕಳಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ, ಪೋಷಕರಲ್ಲಿ ಆತಂಕ ಮನೆ ಮಾಡಿದೆ. ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ವೈರಾಣು ಜ್ವರವಾದ ಇದು ಹೇಗೆ ಸೃಷ್ಟಿಯಾಗಿದೆ, ಕಾರಣ ಏನು? ಎಂಬ ಮಾಹಿತಿ ಇಲ್ಲ. ಈ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ ಎಂದು ತಜ್ಞರು ಹೇಳಿದ್ದಾರೆ. ಆದರೆ ಆತಂಕ ಪಡುವ ಅಗತ್ಯವಿಲ್ಲ. ಇದು ಮಾರಣಾಂತಿಕವಲ್ಲ. ಸೂಕ್ತ ಚಕಿತ್ಸೆ ಹಾಗೂ ಮುಂಜಾಗ್ರತಾ ಕ್ರಮ ಕೈಗೊಂಡು ರೋಗದಿಂದ ರಕ್ಷಣೆ ಪಡೆಯಬಹುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಏನಿದು ಜ್ವರ?:ಇದೊಂದು ಅಪರೂಪದ ವೈರಲ್ ಜ್ವರವಾಗಿದ್ದು, ಮೈ ಮೇಲೆ ದದ್ದು (ರಾರಯಷಸ್), ಚರ್ಮದ ಉರಿ ಮತ್ತು ನಿರ್ಜಲೀಕರಣದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ದದ್ದುಗಳು ಕೆಂಪನೆಯ ಬಣ್ಣವಿದ್ದು, ಟೊಮೆಟೊಗೆ ಹೋಲುವ ಕಾರಣ, ಇದಕ್ಕೆ ಟೊಮೆಟೊ ಜ್ವರವೆಂದು ಹೆಸರು ಇದೆ. ಜ್ವರ ಕಾಣಿಸಿಕೊಂಡವರಲ್ಲಿ ಟೊಮೆಟೊ ರೀತಿಯ ಗುಳ್ಳೆ, ಜ್ವರ, ಮೈಕೈ ನೋವು, ಸಂಧುಗಳಲ್ಲಿ ನೋವು, ಆಯಾಸ, ಬಳಲಿಕೆ ಕಾಣಿಸಿಕೊಳ್ಳುತ್ತದೆ. ಇದುವರೆಗೆ ಪತ್ತೆಯಾದ ಎಲ್ಲಾ 80 ಪ್ರಕರಣಗಳು ಕೇವಲ ಕೊಲ್ಲಂ ಜಿಲ್ಲೆಯೊಂದರಲ್ಲೇ ಕಾಣಿಸಿಕೊಂಡಿದೆ.
ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ
ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮ
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist