ಬುಧವಾರ, ಫೆಬ್ರವರಿ 5, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಕೆಎಸ್ ಆರ್ ಟಿಸಿ ಬಸ್ಸಿನಲ್ಲಿ ಮಗು ಹೆತ್ತ ಮಹಿಳೆ; ಬಸ್ಸನ್ನು ಆಸ್ಪತ್ರೆಗೆ ಕೊಂಡೊಯ್ದ ಚಾಲಕ

Twitter
Facebook
LinkedIn
WhatsApp
ಕೆಎಸ್ ಆರ್ ಟಿಸಿ ಬಸ್ಸಿನಲ್ಲಿ ಮಗು ಹೆತ್ತ ಮಹಿಳೆ; ಬಸ್ಸನ್ನು ಆಸ್ಪತ್ರೆಗೆ ಕೊಂಡೊಯ್ದ ಚಾಲಕ

ತ್ರಿಶೂರ್: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ತುಂಬು ಗರ್ಭಿಣಿ ಯೊಬ್ಬಳು ಬಸ್ಸಿನಲ್ಲೇ ಹೆಣ್ಣುಮಗುವಿಗೆ ಜನ್ಮ ನೀಡಿದ ಘಟನೆ ಕೇರಳದ ತ್ರಿಶೂರ್ ನಗರದಲ್ಲಿ ನಡೆದಿದೆ. ಈ ಮಹಿಳೆ, ತನ್ನ ಗಂಡನೊಂದಿಗೆ ಕೇರಳದ ತೊಟ್ಟಿಲಪಾಲಂ ಎಂಬಲ್ಲಿಗೆ ಪ್ರಯಾಣಿಸುತ್ತಿದ್ದ ಳು. ಬಸ್ಸು ಪರಮಂಗಲಂ ಎಂಬ ಹಳ್ಳಿಯ ಕಡೆಯಿಂದ ಸಾಗುತ್ತಿದ್ದಾಗ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಅದನ್ನು ಚಾಲಕನ ಗಮನಕ್ಕೆ ತರಲಾಯಿತು. ಈ ಸಂದರ್ಭದಲ್ಲಿ ಚಾಲಕನು ತಡಮಾಡದೆ ಬಸ್ಸನ್ನು ಪುನಃ ತ್ರಿಶೂರ್ ನಗರದ ಕಡೆಗೆ ತಿರುಗಿಸಿದ್ದಾನೆ.

ತ್ರಿಶೂರ್ ನಗರದ ಅಮಲಾ ಆಸ್ಪತ್ರೆಗೆ ಆಕೆಯನ್ನು ಕರೆದೊಯ್ಯುವುದು ಆತನ ಉದ್ದೇಶವಾಗಿತ್ತು. ಆದರೆ, ಬಸ್ಸು ಆಸ್ಪತ್ರೆ ಮುಂದೆ ಬರುವಷ್ಟರಲ್ಲಿ ಆಕೆಯು ಮಗುವನ್ನು ಪ್ರಸವಿಸುವ ಮಟ್ಟಕ್ಕೆ ತಲುಪಿದ್ದಳು. ಅಂಥ ಸ್ಥಿತಿಯಲ್ಲಿ ಆಕೆಯನ್ನು ಬಸ್ಸಿನಿಂದ ಕೆಳಕ್ಕೆ ಇಳಿಸಿ ಆಸ್ಪತ್ರೆಗೆ ದಾಖಲಿಸುವುದು ಕಷ್ಟಕರ ಹಾಗೂ ಅಪಾಯಕಾರಿಯಾಗಿತ್ತು.

ಕೂಡಲೇ ಚಾಲಕ ಹಾಗೂ ಇತರ ಪ್ರಯಾಣಿಕರು ಅಸ್ಪ್ಟ್ರೆಯೊಳಕ್ಕೆ ಹೋಗಿ ವೈದ್ಯರನ್ನು ಕರೆದುಕೊಂಡು ಬಂದರು. ಗರ್ಭಿಣಿಯನ್ನು ತಪಾಸಣೆ ಮಾಡಿದ ವೈದ್ಯರು ಬಸ್ಸಿನಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಹೊರಕ್ಕೆ ಕಳಿಸಿ ಆಕೆಗೆ ಬಸ್ಸಿನಲ್ಲೇ ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ. ಹೆರಿಗೆಯ ನಂತರ ತಾಯಿ ಮತ್ತು ಮಗುವನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಈಗ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ವೈದ್ಯ ಡಾ. ಯಾಸೀರ್ ಸುಲೈಮಾನ್, ಆಸ್ಪತ್ರೆಯ ಬಳಿ ಬಸ್ ಬಂದು ನಿಂತಾಗ ಗರ್ಭಿಣಿ ಮಹಿಳೆಯು ಪ್ರಸವದ ಸಮಯ ತುಂಬಾ ಸನ್ನಿಹಿತವಾಗಿತ್ತು. ಕಾಯಲು ಪುರುಸೊತ್ತು ಇರಲಿಲ್ಲ. ಹಾಗಾಗಿ ನಾವು ಆಕೆಗೆ ಬಸ್ಸಿನಲ್ಲೇ ಹೆರಿಗೆ ಮಾಡಿಸಲು ಸಿದ್ದವಾದೆವು. ಇದೊಂದು ಸವಾಲಿನ ಕೆಲಸವಾಗಿತ್ತಲ್ಲದೆ, ತುರ್ತು ಸಂದರ್ಭಗಳಲ್ಲಿ ಸುರಕ್ಷಿತ ಹೆರಿಗೆ ಮಾಡಿಸುವ ವಿಧಾನಗಳನ್ನು ಪ್ರಾಯೋಗಿಕವಾಗಿಯೂ ಕಲಿತಂತಾಯಿತು. ಈಗ ತಾಯಿ, ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಅವರು ಹೇಳಿದರು.
 
ಸೋಷಿಯಲ್ ಮೀಡಿಯಾದಲ್ಲಿ ಚಾಲಕನಿಗೆ ಪ್ರಸಂಶೆ!
ಬಸ್ಸಿನಲ್ಲಿದ್ದ ಮಹಿಳೆಗೆ ಹೆರಿಗೆ ಮಾಡಿಸಲು ವೈದ್ಯರು ಹಾಗೂ ಶುಶ್ರೂಷಾ ಕೀಯರು ಓಡಾಡುತ್ತಿದ್ದುದು ಹಾಗೂ ಬಸ್ಸಿನೊಳಕ್ಕೆ ಪ್ರಸವಕ್ಕೆ ಬೇಕಾದ ಉಪಕರಣಗಳನ್ನು ಕೊಂಡೊಯ್ಯುತ್ತಿರುವುದು ಇತ್ಯಾದಿ ದೃಶ್ಯಗಳನ್ನು ಅಲ್ಲಿದ್ದ ಸಾರ್ವಜನಿಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಡ್ಡಿದ್ದರ್ಲ್ಲದೆ, ಒಬ್ಬ ಮಹಿಳೆಗೆ ಸಹಾಯ ಮಾಡಿದ ಬಸ್ಸಿನ ಚಾಲಕನ ಸಮಯ ಪ್ರಜ್ಞೆಯನ್ನು ಹಾಡಿ ಹೊಗಳಿದ್ದಾರೆ. ಶಭಾಷ್ ಎಂದಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist