ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!
ಬೆಂಗಳೂರು/ಉಡುಪಿ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ (KSRTC Bus) ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ತಲೆಯು ಲಾಕ್ ಆದ ಘಟನೆ ನಡೆದಿದೆ. ಕಿಟಿಕಿಯಲ್ಲಿ ತಲೆ ಸಿಕ್ಕಿಸಿಕೊಂಡ ಪರಿಣಾಮ ಮಹಿಳೆ ಕೆಲಕಾಲ ಪರದಾಡಬೇಕಾಯಿತು.
ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಎಂಜಲು ಉಗುಳಲು ಬಸ್‌ನ ಕಿಟಿಕಿಯ ಸಣ್ಣ ಸಂದಿಯೊಳಗೆ ತಲೆಯನ್ನು ಹೊರಹಾಕಿದ್ದರು. ಹೀಗೆ ಹೊರ ಹಾಕಿದ ತಲೆಯು ವಾಪಸ್ ಹಿಂದಕ್ಕೆ ಬಾರದೇ ಅಲ್ಲೆ ಲಾಕ್ ಆಗಿತ್ತು. ಕಾರಣ ಕಿಟಕಿಯ ಸಣ್ಣ ಜಾಗಕ್ಕೆ ನುಗ್ಗಿದ ಪರಿಣಾಮ ಅರ್ಧ ಗಂಟೆಗೂ ಹೆಚ್ಚು ಕಾಲ ತಲೆ ಲಾಕ್ ಆಗಿತ್ತು.
ಈ ವೇಳೆ ಮಹಿಳೆಯ ಪರದಾಟ ಹಾಗೂ ಕೂಗಾಟ ಕಂಡು ಸಹ ಪ್ರಯಾಣಿಕರು ಸಹಾಯಕ್ಕೆ ಧಾವಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಬಳಿಕ ಮಹಿಳೆ ತಲೆ ಲಾಕ್ ಆಗಿರುವುದು ಗಮನಕ್ಕೆ ಬಂದಾಕ್ಷಣ ಕೆಎಸ್‌ಆರ್‌ಟಿಸಿ ಬಸ್ಸಿನ ಚಾಲಕ ಹಾಗೂ ನಿರ್ವಾಹಕರು ಬಸ್ ನಿಲ್ಲಿಸಿದ್ದಾರೆ. ಬಳಿಕ 15 ನಿಮಿಷಗಳ ಕಾರ್ಯಾಚರಣೆ ಮಾಡಿ, ಜಾಗರೂಕತೆಯಿಂದ ಮಹಿಳೆಯ ತಲೆಯನ್ನು ಕಿಟಿಕಿಯಿಂದ ಬಿಡಿಸಿ, ರಕ್ಷಿಸಿದ್ದಾರೆ.
ಇತ್ತ ಮಹಿಳೆಯು ಬದುಕಿತು ಬಡ ಜೀವ ಎಂಬಂತೆ ತಲೆಯನ್ನು ಒಳಗೆ ಎಳೆದುಕೊಂಡಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳೆಗೆ ಯಾಕ್ ಬೇಕಿತ್ತು ಈ ಅವಾಂತರ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.