![ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್](https://urtv24.com/wp-content/uploads/2024/12/WhatsApp-Image-2024-12-12-at-22.37.00-6787e1d3-300x169.jpg)
ಬೆಂಗಳೂರು: ‘ಎಚ್.ಡಿ ಕುಮಾರಸ್ವಾಮಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಏಕೆ ಸ್ಪರ್ಧೆ ಮಾಡಬೇಕು. ಈ ರೀತಿ ಸುದ್ದಿ ಏಕೆ ಹಬ್ಬಿಸುತ್ತಿದ್ದಾರೋ ನನಗೆ ತಿಳಿಯದು’ ಎಂದು ಮಾಜಿ ಪ್ರಧಾನಿ ಎಚ್ .ಡಿ ದೇವೇಗೌಡ ಪ್ರಶ್ನಿಸಿದ್ದಾರೆ.
‘ಕುಮಾರಸ್ವಾಮಿ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಅನ್ನೋ ನಿರ್ಧಾರ ನನ್ನದೂ ಅಲ್ಲ, ಅವರದೂ ಅಲ್ಲ. ಅದು ದೈವದ ನಿರ್ಧಾರ. ರಾಮನಗರ, ಚನ್ನಪಟ್ಟಣ ಬಿಟ್ಟು ಬೇರೆಡೆ ಏಕೆ ಹೋಗಬೇಕು, ಚನ್ನಪಟ್ಟಣ ಕ್ಷೇತ್ರದಿಂದ ಗೆದ್ದು ಮುಖ್ಯಮಂತ್ರಿಯಾಗಿದ್ದಾರೆ. ಹಾಗಾಗಿ, ಅಲ್ಲಿಂದಲೇ ಸ್ಪರ್ಧೆ ಮಾಡಲಿ ಅನ್ನೋದು ನನ್ನ ಅಭಿಮತ’ ಎಂದು ಸೋಮವಾರ ಬೆಂಗಳೂರಿನ ಜೆ.ಪಿ.ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಇಬ್ರಾಹಿಂಗೆ ತಕ್ಷಣ ಹುದ್ದೆ ಇಲ್ಲ ‘ಸಿಎಂ. ಇಬ್ರಾಹಿಂ ಜೆಡಿಎಸ್ ಗೆ ಬರುತ್ತಾರೆ ಎಂಬ ನಿರೀಕ್ಷೆ ಇದೆ. ಅವರು ಬಂದರೆ ಸಂತೋಷ. ಆದರೆ ಪಕ್ಷಕ್ಕೆ ಬಂದಾಕ್ಷಣ ಉನ್ನತ ಹುದ್ದೆ ಕೊಡುವುದು ಅಸಾಧ್ಯ’ ದೇವೇಗೌಡರು ಹೇಳಿದ್ದಾರೆ.
‘ಈಗಾಗಲೇ ಪಕ್ಷದಲ್ಲಿ ರಾಜ್ಯಧ್ಯಕ್ಷರು ಇದ್ದಾರೆ. ಅವರು ಸುಮಾರು 6 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದವರು. ಪಕ್ಷ ಸಂಘಟನೆಗೆ ಅವರ ಕೊಡುಗೆ ಬಹಳ ಇದೆ. ಅಂಥವರನ್ನು ರಾತ್ರೋ ರಾತ್ರಿ ಹುದ್ದೆಯಿಂದ ಇಳಿಸಲು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಅವರ ಪದವಿಯನ್ನು ಕಿತ್ತು, ಇಬ್ರಾಹಿಂ ಅವರಿಗೆ ಕೊಡಲು ಸಾಧ್ಯವಿಲ್ಲ ಅನ್ನೋದನ್ನು ಹೇಳು ಮೂಲಕ, ಇಬ್ರಾಹಿಂ ಜೆಡಿಎಸ್ ಪಕ್ಷಕ್ಕೆ ಹೋದರೆ ರಾಜ್ಯಾಧ್ಯಕ್ಷ ಸ್ಥಾನ ದೊರೆಯುತ್ತದೆ ಎಂಬ ನಿರೀಕ್ಷೆಯನ್ನು ಗೌಡರು ತಣ್ಣೀರು ಎರಚಿದರು.
ಇಬ್ರಾಹಿಂ ಜೊತೆ ಚರ್ಚೆ ನಿಜ ಹಾಗಂತ ಗೌಡರು ಇಬ್ರಾಹಿಂ ಜೊತೆ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆ ನಡೆಸಿಲ್ಲ ಅಂತ ಹೇಳಲಿಲ್ಲ. ‘ಆ ವಿಚಾರವಾಗಿ ನಾನು ಮಾತನಾಡಿದ್ದೇನೆ. ಆದರೆ, ಪಕ್ಷಕ್ಕೆ ಬಂದಾಕ್ಷಣ ಮಹತ್ವದ ಹುದ್ದೆ ನೀಡಲು ಆಗೋದಿಲ್ಲ. ಬದಲಿಗೆ ಚುನಾವಣೆ ಸಂದರ್ಭದಲ್ಲಿ ಪರಿಸ್ಥಿತಿಗೆ ಹೇಗೆ ಬರುತ್ತದೆ ಅನ್ನೋದನ್ನು ನೋಡಿಕೊಂಡು, ಪಕ್ಷದ ಎಲ್ಲರ ಜೊತೆ ಚರ್ಚಿಸಿ ನಿಮ್ಮನ್ನು ಪರಿಗಣಿಸುತ್ತೇವೆ’ ಎಂದು ಹೇಳಿದ್ದೇನೆ.
‘ಪಕ್ಷಬಿಟ್ಟು ಹೋಗಲು ಮನಸ್ಸು ಮಾಡುವವರಿಗೆ ಮನವಿ ಮಾಡ್ತೇನೆ. ನಾವೆಲ್ಲ ಸೇರಿ ಒಟ್ಟಿಗೆ ಕೆಲಸ ಮಾಡೋಣ. ಈಗಲೂ ಕಾಲ ಮಿಂಚಿಲ್ಲ ಎಂದು ಜಿ.ಟಿ ದೇವೇಗೌಡ ಹಾಗೂ ಶ್ರೀನಿವಾಸ ಮೂರ್ತಿಗೆ ಪರೋಕ್ಷವಾಗಿ’ ಮನವಿ ಮಾಡಿದರು.
‘ಹಾಸನ ಪಕ್ಷ ಸಂಘಟನೆ ಕಾರ್ಯಕ್ರಮದಲ್ಲಿ ಶಿವಲಿಂಗೇಗೌಡ, ಎ.ಟಿ. ರಾಮಸ್ವಾಮಿ ಬಂದಿರಲಿಲ್ಲ. ನಾನು ಅವರಿಗೆ ಪಕ್ಷದಲ್ಲಿ ಇರಲು ಆಗಲ್ಲ ಅಂದರೆ ಪಕ್ಷ ಬಿಟ್ಟು ಹೋಗಬಹುದು ಅಂತ ಹೇಳಿದ್ದೇನೆ
ಎಂದಿದ್ದಾರೆ.
ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ
ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮ
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist