ಕುದುರೆ ಮೇಲೆ ಸ್ಟಂಟ್ ಮಾಡಲು ಹೋದ ವರನ ಸ್ಥಿತಿ ನೋಡಿ..!
Viral Video: ಕೆಲವರಿಗೆ ಸ್ಟಂಟ್‌ಗಳನ್ನು ಮಾಡುವುದೆಂದರೆ ತುಂಬಾ ಇಷ್ಟ. ಕೆಲವೊಮ್ಮೆ ಬೈಕಿನಲ್ಲಿ, ಕೆಲವೊಮ್ಮೆ ಕಾರಿನಲ್ಲಿ ಅಥವಾ ಏನೂ ಲಭ್ಯವಿಲ್ಲದಿದ್ದರೆ ಜನರು ಪ್ರಾಣಿಗಳೊಂದಿಗೆ ಸಾಹಸಗಳನ್ನು ಮಾಡಲು ಪ್ರಾರಂಭಿಸುತ್ತಾರೆ. ಆದರೆ ಕೆಲವೊಮ್ಮೆ ಈ ಸ್ಟಂಟ್ ಮಾಡಲು ಹೋಗಿ ಯಡವಟ್ಟು ಮಾಡಿಕೊಳ್ಳುತ್ತಾರೆ. ಇದೀಗ ಇಂತಹದ್ದೇ ಒಂದು ವಿಡಿಯೋವೊಂದು ಹೊರಬಿದ್ದಿದ್ದು, ಅದು ವರನಿಗೆ ಸಂಬಂಧಿಸಿದೆ. ವರನು ಕುದುರೆ ಮೇಲೆ ಕುಳಿತು ಹೇಗೆ ಸಾಹಸವನ್ನು ಪ್ರಾರಂಭಿಸುತ್ತಾನೆ ಎಂಬುದನ್ನು ಇದರಲ್ಲಿ ನೀವು ನೋಡಬಹುದು
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮದುವೆಯ ಮೆರವಣಿಗೆ ನಡೆಯುತ್ತಿದೆ. ಕುದುರೆಯ ಮೇಲೆ ಕುಳಿತು ವರ ಸ್ಟಂಟ್ ಮಾಡಲು ಪ್ರಾರಂಭಿಸುತ್ತಾನೆ. ಪ್ರಾರಂಭದಲ್ಲಿ ಎಲ್ಲವೂ ಸರಿ ಹೋದರೂ ಮರು ಕ್ಷಣವೇ ಯಡವಟ್ಟು ಸಂಭವಿಸುತ್ತದೆ. ಸ್ಟಂಟ್ ಮಾಡಲು ಹೋಗಿ ಜಾರಬೀಳುತ್ತಾನೆ. ವರ ಕುದುರೆ ಮೇಲೆ ಸುಮ್ಮನೆ ಕೂರದೆ ಸ್ಟಂಟ್ ಮಾಡಿ ಯಡವಟ್ಟು ಮಾಡಿಕೊಂಡ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಇದನ್ನು ನೋಡಿ ಅನೇಕರು ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದಾರೆ.