ಕುಡಿದ ಮತ್ತಿನಲ್ಲಿ ರಸ್ತೆ ಮಧ್ಯೆದಲ್ಲೇ ರಿಕ್ಷಾ ಚಾಲಕರ ಡ್ಯಾನ್ಸ್! ಸಾಮಾಜಿಕ ಜಾಣತನದಲ್ಲಿ ವೈರಲ್
Twitter
Facebook
LinkedIn
WhatsApp
ಮಧ್ಯಪ್ರದೇಶ: ಕುಡಿದ ಮತ್ತಿನಲ್ಲಿ ರಿಕ್ಷಾ ಚಾಲಕರು ರಸ್ತೆಯ ಮಧ್ಯೆ ಬಾಲಿವುಡ್ ನ “ಚುಮ್ಮಾ ಚುಮ್ಮಾ ದೇ…” ಹಾಡನ್ನು ಹಾಡುತ್ತ ಕುಣಿಯುತ್ತಿರುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಘಟನೆ ಮಧ್ಯಪ್ರದೇಶದ ಜಬಲ್ ಪುರ್ ನಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ರಸ್ತೆ ಮಧ್ಯದಲ್ಲಿ ರಿಕ್ಷಾ ನಿಲ್ಲಿಸಿ ಜೋರಾದ ಶಬ್ದದೊಂದಿಗೆ ಬಾಲಿವುಡ್ ನ ಚುಮ್ಮಾ ಚುಮ್ಮಾ ಹಾಡನ್ನು ಹಾಕಿ , ಮದ್ಯಪಾನ ಮಾಡುತ್ತ ಕುಣಿಯುತ್ತಿದ್ದರು.
ರಾಜು ಎಂಬ ಹೆಸರಿನ ರಿಕ್ಷಾ ಚಾಲಕ ಮೊದಲಿಗೆ ಕುಡಿದ ಮತ್ತಿನಲ್ಲಿ ಬಾಲಿವುಡ್ ಹಾಡನ್ನು ಹಾಕಿ ಕುಣಿಯಲು ಆರಂಭಿಸಿದ್ದು, ನಂತರ ಉಳಿದ ರಿಕ್ಷಾ ಚಾಲಕರು ಆತನಿಗೆ ಸಾಥ್ ನೀಡಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣವೇ ಸ್ಥಳಕ್ಕೆ ಆಗಮಿಸಿ, ಲಾಠಿ ಏಟಿನ ರುಚಿ ತೋರಿಸಿ, ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ರಿಕ್ಷಾ ಚಾಲಕರನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ವರದಿ ತಿಳಿಸಿದೆ.