ಭಾನುವಾರ, ಮೇ 19, 2024
ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!-ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ-Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕುಂಭಮೇಳದಲ್ಲಿ ಮನಸೂರೆಗೊಂಡ ಪುನೀತ್ ಲೇಸರ್ ಶೋ – ಗಂಗಾರತಿ ಕಂಡು ಪುಳಕಿತರಾದ ಭಕ್ತರು

Twitter
Facebook
LinkedIn
WhatsApp
ಕುಂಭಮೇಳದಲ್ಲಿ ಮನಸೂರೆಗೊಂಡ ಪುನೀತ್ ಲೇಸರ್ ಶೋ – ಗಂಗಾರತಿ ಕಂಡು ಪುಳಕಿತರಾದ ಭಕ್ತರು

ಮಂಡ್ಯ: ಪವಾಡ ಪುರಷ ಮಲೆ ಮಹದೇಶ್ವರರ ಮೂಲ ಪವಾಡ ಸ್ಥಳವದಾ ತ್ರಿವೇಣಿ ಸಂಗಮದಲ್ಲಿ ಮಹಾ ಕುಂಭ ಮೇಳ (Maha Kumbh Mela) ಮೇಳೈಸುತ್ತಿದೆ. ಇಂದು ರಾತ್ರಿ ನಡೆದ ಗಂಗಾ ಆರತಿ (Gangarathi) ಹಾಗೂ ಲೇಸರ್ ಲೈಟ್ ಶೋ ಭಕ್ತರನ್ನು ಮನಸೂರೆಗೊಳಿಸಿದೆ.

 

ಕಳೆದ ಎರಡು ದಿನಗಳಿಂದ ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಕೆಆರ್‌ಪೇಟೆ ತಾಲೂಕಿನ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳ ಲಕ್ಷಾಂತರ ಜನರನ್ನು ತನ್ನತ್ತ ಸೆಳೆಯುತ್ತಿದೆ. ಅದ್ರಲ್ಲೂ ಇಂದು ತ್ರಿವೇಣಿ ಸಂಗಮದ ದಡದಲ್ಲಿ ನಡೆದ ಕಾಶಿ ಮಾದರಿಯ ಗಂಗಾರತಿ ಭಕ್ತರ ಮನಸ್ಸಿನಲ್ಲಿ ಭಕ್ತಿ ಸುದೆಯನ್ನು ಹರಿಸಿತು. ವಾರಾಣಸಿ ಮೂಲದ ರಣದೀರ್ ಪಾಂಡೆ ನೇತೃತ್ವದ 7 ಮಂದಿಯ ತಂಡ ನಾಗಾರತಿ ಹಾಗೂ ಗಂಗಾರತಿಯನ್ನು ನೆರವೇರಿಸಿ ಕೊಟ್ಟರು.

ಇದಕ್ಕೂ ಮುನ್ನ ನಡೆದ ನೀರಿನ ಲೇಸರ್ ಶೋ ಅಂತು ನೋಡುಗರನ್ನು ಇಮ್ಮಡಿಗೊಳಿತು. ಒಂದು ಬಾರಿ ಧಾರ್ಮಿಕ ಹಿನ್ನೆಲೆ, ಇನ್ನೊಂದು ದೈವಿಕ ಅಂಶದ ವರ್ಣನೆ, ಮಗದೊಮ್ಮೆ ನಮ್ಮ ದೇಶದ ಇತಿಹಾಸವನ್ನು ಸಂಗೀತದ ಜೊತೆ ಜೊತೆಗೆ ನೀರಿನ ಮೇಲೆ ಲೇಸರ್ ಬಿಟ್ಟು ಜನರನ್ನು ಆಕರ್ಷಿಸಲಾಯಿತು. ಪವರ್ ಸ್ಟಾರ್ ಡಾ.ಪುನೀತ್ ರಾಜ್‍ಕುಮಾರ್ ಅವರ ಲೇಸರ್ ಶೋ ಜನರಲ್ಲಿ ಅಪ್ಪುವಿನ ನೆನಪನ್ನು ಮರುಕಳಿಸುವಂತೆ ಮಾಡಿತು.

 

ಶನಿವಾರ ಕುಂಭ ಮೇಳದ ಮೂರನೇ ದಿನವಾಗಿದ್ದು, ಬೆಳಗ್ಗೆ 6 ಗಂಟೆಯಿಂದಲೇ ಪೂಜಾ ಕೈಂಕರ್ಯಗಳು ಜರುಗಲಿವೆ. 11 ಗಂಟೆಗೆ ಧಾರ್ಮಿಕ ಸಮ್ಮೇಳನ ಜರುಗಲಿದ್ದು, ಇದ್ರಲ್ಲಿ ರಾಜ್ಯವಲ್ಲದೇ ದೇಶದ ನಾನಾ ಮೂಲೆಳಿಂದ ಸ್ವಾಮೀಜಿಗಳು ಧಾರ್ಮಿಕ ಸಮ್ಮೇಳನದಲ್ಲಿ ಪಾಲ್ಗೊಂಡು ಧರ್ಮದ ವಿಚಾರಗಳನ್ನು ಜನರಿಗೆ ಸಾರಲಿದ್ದಾರೆ. ಸಂಜೆ 4 ಗಂಟೆಗೆ ಮಲೆ ಮಹದೇಶ್ವರರ ಚರಿತ್ರೆ ಕುರಿತು ನಾಟಕ ನಡೆಯಲಿದ್ದು, ಸಂಜೆ 7 ಗಂಟೆಗೆ ನಾಳೆಯೂ ಸಹ ವಿಭಿನ್ನವಾದ ಲೇಸರ್ ಶೋ ಹಾಗೂ ಗಂಗಾರತಿಯನ್ನು ಆಯೋಜನೆ ಮಾಡಲಾಗಿದೆ.

ಒಟ್ಟಾರೆ ಪವಾಡ ಪುರುಷರು ನಡೆಸಿದ ಪವಾಡ ಸ್ಥಳದಲ್ಲಿ ತ್ರೀವೇಣಿ ಸಂಗಮದಲ್ಲಿ ಕುಂಭ ಮೇಳೆ ಸಂಭ್ರಮ ಮನೆ ಮಾಡುತ್ತಿದೆ. ಈ ಸಂಭ್ರಮದಲ್ಲಿ ಲಕ್ಷಾಂತರ ಜನರ ಪಾಲ್ಗೊಂಡು ಮಾದಪ್ಪನಿಗೆ ಉಘೇ ಉಘೇ ಎನ್ನುತ್ತಿದ್ದಾರೆ.

ವೇಣೂರು ಯುವ ವಾಹಿನಿ ಘಟಕದ ಅತಿಥ್ಯದಲ್ಲಿ ಅಕ್ಟೋಬರ್ 9 ಆದಿತ್ಯವಾರ ನಡೆಯಲಿದೆ ಕೆಸರುಡೊಂಜಿ ದಿನ ಕಾರ್ಯಕ್ರಮ
ಅಂಗಾಂಗ ದಾನ ಮಾಡಿ 9 ಜೀವಗಳನ್ನು ಉಳಿಸಿದ ಮದನ್‌ ಕುಮಾರ್‌

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.! Twitter Facebook LinkedIn WhatsApp ಉಡುಪಿ: ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ

ಅಂಕಣ