ಕುಂದಾಪುರ: ಮದ್ಯಪಾನಕ್ಕೆ ಹಣ ನೀಡದಕ್ಕೆ ವ್ಯಕ್ತಿ ಆತ್ಮಹತ್ಯೆ
Twitter
Facebook
LinkedIn
WhatsApp
ಕುಂದಾಪುರ, ಜ 27 : ಮದ್ಯಪಾನ ಮಾಡಲು ಹಣ ನೀಡದ ಕಾರಣಕ್ಕೆ ವ್ಯಕ್ತಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರದಲ್ಲಿ ನಡೆದಿದೆ.
ವಿಟ್ಟಲ (48) ಆತ್ಮಹತ್ಯೆಗೈದ ವ್ಯಕ್ತಿ. ಗೋವಾದಲ್ಲಿ ಹೊಟೇಲ್ ನಡೆಸುತ್ತಿರುವ ಚಂದಮ್ಮ ಶೆಟ್ಟಿ ಸಳ್ವಾಡಿ ಅವರ ಪುತ್ರನ ಹೊಟೇಲ್‌ನಲ್ಲಿ ವಿಟ್ಟಲ ಕೆಲಸ ಮಾಡಿಕೊಂಡಿದ್ದ. ಬಳಿಕ ಚಂದಮ್ಮ ಶೆಟ್ಟಿ ಅವರನ್ನು ನೋಡಿಕೊಳ್ಳಲೆಂದ ವಿಟ್ಟಲನನ್ನು ಮನೆಯಲ್ಲಿ ಇರುವಂತೆ ಹೇಳಲಾಗಿತ್ತು.
ಆದರೆ ಕಳೆದ ಐದು ವರ್ಷಗಳಿಂದ ವಿಟ್ಟಲ ಕುಡಿತದ ಚಟ ಹೊಂದಿದ್ದ. ಮದ್ಯಪಾನ ಮಾಡಲು ಹಣ ನೀಡಿಲ್ಲವೆಂಬ ಕಾರಣಕ್ಕೆ ಮನೆ ಸಮೀಪದ ಕೊಟ್ಟಿಗೆಯಲ್ಲಿ ಆತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಮೀಪದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ – 9152987821