ಶನಿವಾರ, ಮಾರ್ಚ್ 15, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಕಿತ್ತಳೆ ಹಣ್ಣಿನ ಸೇವನೆಯಿಂದ ಇರುವ ಉಪಯೋಗಗಳು

Twitter
Facebook
LinkedIn
WhatsApp

ಮನುಷ್ಯನು ಸೇವಿಸುವ ಎಲ್ಲ ಬಗೆಯ ಹಣ್ಣುಗಳೂ ಪೌಷ್ಟಿಕ ಸತ್ವಗಳನ್ನು ಒಳಗೊಂಡು ಆರೋಗ್ಯಕ್ಕೆ ಸಕಾರಾತ್ಮಕವಾಗಿ ಪರಿಣಾಮ ಬೀರಿ ಕೆಲಸ ಮಾಡುತ್ತವೆ. ಬಣ್ಣದಿಂದಲೇ ಹೆಸರು ಪಡೆದುಕೊಂಡ ಹಣ್ಣು ಕಿತ್ತಳೆ. ತನ್ನೊಳಗಿನ 8 – 10 ರಸಭರಿತ ತೊಳೆಗಳ ಸಮಾಗಮದಿಂದ ಸ್ವಲ್ಪ ಸಿಹಿ ಸ್ವಲ್ಪ ಹುಳಿ ಮಿಶ್ರಣಗೊಂಡ ಚಳಿಗಾಲದ ಹಣ್ಣಾಗಿ ಕಿತ್ತಳೆ ಎಲ್ಲರ ಕಣ್ಮನ ತಂಪಾಗಿಸುತ್ತದೆ. ವರ್ಷ ಪೂರ್ತಿ ಕಾದು ಕೊನೆಗೆ ವರ್ಷದ ಅಂತ್ಯದಲ್ಲಿ ಚಳಿಗಾಲದ ಆರಂಭದಲ್ಲಿ ಜನರಿಗೆ ಕಿತ್ತಳೆ ಹಣ್ಣುಗಳು ತಿನ್ನಲು ಲಭ್ಯವಾಗುತ್ತವೆ.ಸ್ವಲ್ಪ ಹುಳಿ ಎನಿಸಿದರೂ ಸಿಹಿಯಾದ ಹಣ್ಣು ಕಿತ್ತಳೆ. ಇತ್ತ ವೈದ್ಯರು ಆಯಾ ಕಾಲಕ್ಕೆ ಸಿಗುವ ಹಣ್ಣುಗಳನ್ನು ಸೇವಿಸುವುದು ಒಳ್ಳೆಯದು ಎನ್ನುತ್ತಾರೆ. ಸಾಮಾನ್ಯವಾಗಿ ನವೆಂಬರ್ ನಿಂದ ಜನವರಿ, ಮಾರ್ಚ್ ವರೆಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಕಿತ್ತಳೆಯನ್ನು ಇಂದೇ ಮನೆಗೆ ತೆಗೆದುಕೊಂಡು ಬಂದು ಆರೋಗ್ಯದ ಲಾಭ ಪಡೆಯಿರಿ.

ಕಿತ್ತಳೆ ಹಣ್ಣಿನ ಸೇವನೆಯಿಂದ ಇರುವ ಉಪಯೋಗಗಳು

ಚಿಕ್ಕ ವಯಸ್ಸಿಗೆ ವಯಸ್ಸಾದವರಂತೆ ಕಾಣುತ್ತಿದ್ದರೆ ಅಥವಾ ಚರ್ಮದ ಯಾವುದೇ ಸಮಸ್ಯೆಗಳಿದ್ದರೆ ಕಿತ್ತಳೆ ಸೇವಿಸಿ. ಕಿತ್ತಳೆ ಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಮತ್ತು ವಿಟಮಿನ್ ಸಿ ಸಮೃದ್ಧವಾಗಿದ್ದು, ನಿಮಗೆ ವಯಸ್ಸಾಗಿದ್ದರೆ ಅಥವಾ ವಯಸ್ಸಾದವರಂತೆ ಕಾಣುತ್ತಿದ್ದರೆ ಅದು ನೀವಿನ್ನು ಚಿಕ್ಕವರಂತೆ ಕಾಣುವಂತೆ ಮಾಡುತ್ತದೆ. ಜೊತೆಗೆ ಚರ್ಮದ ಹೊಳಪಿಗಾಗಿಯೂ ನೀವು ಈ ಹಣ್ಣನ್ನು ಸೇವಿಸಬಹುದು.

ಕಿತ್ತಳೆ ಹಣ್ಣು ಅತ್ಯಧಿಕ ಫೈಬರನ್ನು ಹೊಂದಿದೆ, ಇದು ತೂಕ ಇಳಿಸಲು ಮಾತ್ರವಲ್ಲ, ಜೀರ್ಣಕ್ರೀಯೆಯನ್ನು ಕೂಡ ಸುಧಾರಿಸುತ್ತದೆ. ಅದರಲ್ಲಿರುವ ಕರಗುವ ಫೈಬರ್‍ಗಳು ಬೇಗನೆ ಹಸಿವಾಗುವುದನ್ನು ತಡೆಯುತ್ತವೆ, ಹಾಗಾಗಿ ಕ್ಯಾಲೊರಿ ಸೇವನೆಯ ಪ್ರಮಾಣ ಕಡಿಮೆಯಾಗಿ, ತೂಕ ಇಳಿಸಲು ಸಹಾಯವಾಗುತ್ತದೆ. ಕಿತ್ತಳೆ ಹಣ್ಣಿನ ತಿರುಳಿನಲ್ಲಿ ಹೆಚ್ಚು ಫೈಬರ್ ಇರುತ್ತದೆ.

ಕಿತ್ತಳೆ ಹಣ್ಣಿನ ಸೇವನೆಯಿಂದ ಇರುವ ಉಪಯೋಗಗಳು

ಹೆಚ್ಚಿನ ಜನರು ಹೃದ್ರೋಗದಿಂದ ಬಳಲುತ್ತಿರುವುದಕ್ಕೆ ಮುಖ್ಯ ಕಾರಣವೆಂದರೆ ಅನಾರೋಗ್ಯಕರ ಜೀವನಶೈಲಿ ಮತ್ತು ಜಂಕ್ ಫುಡ್ ಸೇವನೆ. ಇಂತಹ ಆಹಾರ ಸೇವೆನೆಯಿಂದ ಅಪಧಮನಿ ನಿರ್ಬಂಧಿಸ ಲ್ಪಡುತ್ತದೆ. ಆದರೆ ಕಿತ್ತಳೆ ಹಸ್ಪೆರಿಡಿನ್ ನಂತಹ ಫ್ಲೇವೊನೈಡ್ ಗಳನ್ನು ಹೊಂದಿದ್ದು, ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ, ಅಷ್ಟೇ ಅಲ್ಲ, ಅಪಧಮನಿಯನ್ನು ನಿರ್ಬಂಧಿಸದಂತೆ ತಡೆಯುತ್ತದೆ. ಹೃದಯಾಘಾತ ಮತ್ತು ಇತರ ಹೃದಯ ಸಂಬಂಧಿ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ.

ಕಿತ್ತಳೆ ಹಣ್ಣು ನಾರಿನ ಉತ್ತಮ ಮೂಲವಾಗಿದ್ದು, ಅದು ನಿಮ್ಮ ಹೊಟ್ಟೆ ಮತ್ತು ಕರುಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಫೈಬರ್ ಸಮೃದ್ಧವಾಗಿರುವ ಕಿತ್ತಳೆಯು ಹೊಟ್ಟೆಯ ಹುಣ್ಣು ಮತ್ತು ಮಲಬದ್ಧತೆಯಂತಹ ಕಾಯಿಲೆಗಳಿಂದ ನಿಮಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತದೆ.

ಕಿತ್ತಳೆ ಹಣ್ಣಿನ ಸೇವನೆಯಿಂದ ಇರುವ ಉಪಯೋಗಗಳು
  • ಕಿತ್ತಳೆ ಹಣ್ಣಿನಲ್ಲಿ ಸುಮಾರು ಶೇಕಡ 87 ರಷ್ಟು ನೀರಿನ ಅಂಶ ಸೇರಿರುತ್ತದೆ. ಚಳಿಗಾಲದಲ್ಲಿ ಸಾಮಾನ್ಯವಾಗಿ ನಾವು ನೀರು ಕಡಿಮೆ ಕುಡಿಯುತ್ತೇವೆ. ಇಂತಹ ಸಮಯದಲ್ಲಿ ಕಿತ್ತಳೆ ಹಣ್ಣು ಸೇವನೆ ನಮ್ಮ ದೇಹದಲ್ಲಿ ನೀರಿನ ಅಂಶದ ಸಮತೋಲನ ಕಾಪಾಡುತ್ತದೆ.
  • ಆದರೆ ಕಿತ್ತಳೆ ಹಸ್ಪೆರಿಡಿನ್ ನಂತಹ ಫ್ಲೇವೊನೈಡ್ ಗಳನ್ನು ಹೊಂದಿದ್ದು, ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ, ಅಷ್ಟೇ ಅಲ್ಲ, ಅಪಧಮನಿಯನ್ನು ನಿರ್ಬಂಧಿಸದಂತೆ ತಡೆಯುತ್ತದೆ. ಹೃದಯಾಘಾತ ಮತ್ತು ಇತರ ಹೃದಯ ಸಂಬಂಧಿ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ.
  • ಕಿತ್ತಳೆ ಹಣ್ಣಿನ ಜ್ಯೂಸ್ ನಲ್ಲಿ ವಿಟಮಿನ್ ಡಿ, ಕ್ಯಾಲ್ಸಿಯಂ ಅಂಶವು ಉತ್ತಮ ಪ್ರಮಾಣದಲ್ಲಿದ್ದು, ಇದು ಮೂಳೆಗಳಿಗೆ ಸಹಕಾರಿ. ಕಿತ್ತಳೆ ಹಣ್ಣಿನ ಜ್ಯೂಸ್ ಸೇವನೆ ಮಾಡಿದರೆ ಅದು ಅಸ್ಥಿರಂಧ್ರತೆ ಸಮಸ್ಯೆಯಿಂದ ದೂರ ಮಾಡುವುದು.
  • ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ, ಚರ್ಮ ಶುಷ್ಕವಾಗಿರುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯು ದುರ್ಬಲವಾಗಿರುತ್ತದೆ. ಈ ಸಮಸ್ಯೆಗಳನ್ನು ನಿವಾರಿಸಲು ಕಿತ್ತಳೆ ಹಣ್ಣಿನ ಸೇವನೆ ಅತ್ಯಂತ ಪ್ರಯೋಜನಕಾರಿ.
  • ಮೂತ್ರಪಿಂಡದ ಕಲ್ಲುಗಳು ಹುಟ್ಟಿಕೊಳ್ಳಲು ಮೂತ್ರದಲ್ಲಿನ ಸಿಟ್ರೆಟ್ ಕೊರತೆ ಕಾರಣ ಆಗಬಹುದು. ಸಿಟ್ರೆಟ್ ಎಂದರೆ, ಸಾಮಾನ್ಯವಾಗಿ ಕಿತ್ತಳೆ ಹಣ್ಣಿನಂತಹ ಸಿಟ್ರೆಸ್ ಹಣ್ಣುಗಳಲ್ಲಿ ಕಂಡು ಬರುವ ಸಿಟ್ರಿಕ್ ಆಮ್ಲ. ಮೂತ್ರಪಿಂಡದಲ್ಲಿ ಚಿಕ್ಕ ಕಲ್ಲುಗಳನ್ನು ಹೊಂದಿರುವ ರೋಗಿಗಳಿಗೆ ಸಾಮಾನ್ಯವಾಗಿ ಒಂದು ಲೋಟ ಕಿತ್ತಳೆ ಹಣ್ಣಿನ ರಸವನ್ನು ಕುಡಿಯಲು ಶಿಫಾರಸು ಮಾಡಲಾಗುತ್ತದೆ. ಕಿತ್ತಳೆ ರಸವು ಮೂತ್ರದಲ್ಲಿ ಸಿಟ್ರೆಟ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಕಿಡ್ನಿಯಲ್ಲಿ ಕಲ್ಲುಗಳಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
  • ಗರ್ಭಿಣಿಯರು ಆರು ತಿಂಗಳ ನಂತರ ನಿತ್ಯ ಕಿತ್ತಳೆ ಹಣ್ಣು ಸೇವಿಸಿದರೆ ಹೆರಿಗೆ ಸಮಯದಲ್ಲಿ ಅನುಕೂಲ ಹೆಚ್ಚು, ಜತೆಗೆ ಆರೋಗ್ಯ ವೃದ್ಧಿಸುತ್ತದೆ.
  • ಕೆಮ್ಮು ಹಾಗೂ ಸೀತ ನಿವಾರಣೆಗೆ ನಿತ್ಯ ಒಂದು ಕಪ್ ಕಿತ್ತಳೆ ಹಣ್ಣಿನ ರಸ ಹಾಗೂ ಐದು ಚಮಚ ಜೇನು ತುಪ್ಪ ಸೇರಿಸಿ ಸೇವಿಸುವುದರಿಂದ ಸಮಸ್ಯೆ ನಿವಾರಣೆ ಆಗುತ್ತದೆ.
  • ಕಿತ್ತಳೆ ಹಣ್ಣಿನ ಸೇವನೆಯಿಂದ ಹೃದಯ ಸಂಬಂಧಿ ರೋಗಗಳು ದೂರಾಗಲು ಸಾಧ್ಯ.
  • ಗರ್ಭಿಣಿಯರಿಗೆ ನಿತ್ಯವೂ ಕನಿಷ್ಠ ಎಂಭತ್ತೈದು ಮಿಲಿಗ್ರಾಂ ವಿಟಮಿನ್ ಸಿ ಅಗತ್ಯವಿದೆ. ಇದಕ್ಕಿಂತಲೂ ಕಡಿಮೆಯಾದರೆ ಮಗುವಿನ ಮೆದುಳಿನ ಬೆಳವಣಿಗೆ ಕುಂಠಿತಗೊಳ್ಳಬಹುದು. ಆದ್ದರಿಂದ ಗರ್ಭಾವಸ್ಥೆಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಕಿತ್ತಳೆಯ ಸೇವನೆ ಗರ್ಭಿಣಿಯರಿಗೆ ಉತ್ತಮ
ಕಿತ್ತಳೆ ಹಣ್ಣಿನ ಸೇವನೆಯಿಂದ ಇರುವ ಉಪಯೋಗಗಳು

ದಿನಕ್ಕೆ ಒಂದು ಕಿತ್ತಳೆ ಸೇವಿಸುವುದರಿಂದ ಕಾಯಿಲೆಗಳನ್ನು ದೂರ ಇಡಬಹುದು. ಕಿತ್ತಳೆ ಹಣ್ಣಿನಲ್ಲಿ ನೀರಿನ ಅಂಶ ಹೆಚ್ಚಾಗಿದ್ದು ದೇಹದಲ್ಲಿ ಜಲಸಂಚಯನವನ್ನು ಸುಧಾರಿಸುತ್ತದೆ ಮತ್ತು ಗ್ಲೂಕೋಸ್, ಅಮೈನೋ ಆಮ್ಲಗಳು, ಜೀವಸತ್ವಗಳು ಮತ್ತು ಖನಿಜಗಳಂತಹ ಸೂಕ್ಷ್ಮ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ ಮತ್ತು ಕರುಳಿನ ಚಲನೆಯನ್ನು ಸುಗಮಗೊಳಿಸುತ್ತದೆ.

ವೇಣೂರು ಯುವ ವಾಹಿನಿ ಘಟಕದ ಅತಿಥ್ಯದಲ್ಲಿ ಅಕ್ಟೋಬರ್ 9 ಆದಿತ್ಯವಾರ ನಡೆಯಲಿದೆ ಕೆಸರುಡೊಂಜಿ ದಿನ ಕಾರ್ಯಕ್ರಮ
ಅಂಗಾಂಗ ದಾನ ಮಾಡಿ 9 ಜೀವಗಳನ್ನು ಉಳಿಸಿದ ಮದನ್‌ ಕುಮಾರ್‌

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಮುರುಡೇಶ್ವರ

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ

ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು:  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್‌ ಚಂಡಮಾರುತದ ಪರಿಣಾಮ

ಅಂಕಣ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist