ಕಾಸರಗೋಡು : ನಿಯಂತ್ರಣ ತಪ್ಪಿ ಹೊಂಡಕ್ಕೆ ಉರುಳಿದ ಕಾರು - ಮೂವರು ಸಾವು
Twitter
Facebook
LinkedIn
WhatsApp

ಕಾಸರಗೋಡು, ಏ. 23 : ಕಾರು ನಿಯಂತ್ರಣ ತಪ್ಪಿ ಹೊಂಡಕ್ಕೆ ಉರುಳಿದ ಪರಿಣಾಮ ಕಾಸರಗೋಡಿನ ವಿದ್ಯಾರ್ಥಿನಿ ಸೇರಿದಂತೆ ಮೂವರು ಮೃತ ಪಟ್ಟ ಘಟನೆ ಆದಿತ್ಯವಾರ ಸಂಜೆ ವಯನಾಡ್ ಕಲ್ಪಟ್ಟ ಸಮೀಪ ನಡೆದಿದೆ. ಅಪಘಾತದಲ್ಲಿ ಮೂವರು ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಕಾಸರಗೋಡು ವೆಳ್ಳರಿಕಂಡು ವಿನ ಸ್ನೇಹಾ ಜೋಸ್ (20), ಜಿಸ್ನಾ ಮೇರಿ ಜೋಸೆಫ್(20) ಮತ್ತು ಅಡೋನ್ ಬೆಸ್ಟಿ (20) ಮೃತ ಪಟ್ಟವರು. ಇವರು ಕಣ್ಣೂರು ಅಂಗಾಡಿ ಕಡವು ಡೋನ್ ಬೋಸ್ಕೊ ಕಾಲೇಜಿನ ಮೂರನೇ ವರ್ಷದ ಪದವಿ ವಿದ್ಯಾರ್ಥಿಗಳಾಗಿದ್ದರು.
ಅಡೋನ ಸಹೋದರಿ ಡಿಯೋನಾ ಬೆಸ್ಟಿ, ಸ್ನೇಹಾಲ ಸಹೋದರಿ ಸೋನಾ ಜೋಸೆಫ್ ಮತ್ತು ಸಾಂಜೋ ಜೋಸ್ ಗಾಯಗೊಂಡಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದಿತ್ಯವಾರ ಸಂಜೆ ಮಲಯಾಟೂರಿಗೆ ತೆರಳಿ ಮರಳುತ್ತಿದ್ದಾಗ ಈ ಅಪಘಾತ ನಡೆದಿದ್ದು, ನಿಯಂತ್ರಣ ತಪ್ಪಿದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬಳಿಕ ರಸ್ತೆ ಬದಿಯ ಹೊಂಡಕ್ಕೆ ಉರುಳಿ ಬಿದ್ದು ಈ ಅವಘಡ ನಡೆದಿದೆ.