ಜಮ್ಮು&ಕಾಶ್ಮೀರ : ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರ ಶಿರಚ್ಛೇದವನ್ನು ಚಿತ್ರಿಸುವ ವೀಡಿಯೊಗಾಗಿ ಕಾಶ್ಮೀರ ಮೂಲದ ಯೂಟ್ಯೂಬರ್ ಫೈಸಲ್ ವಾನಿ ಅವರನ್ನು ಬಂಧಿಸಲಾಗಿದೆ.
ತನ್ನ ವೀಡಿಯೋಗಾಗಿ ಕ್ಷಮೆಯಾಚಿಸಿದ ವಾನಿಯನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ. ಅವರು ಯೂಟ್ಯೂಬ್‌ನಲ್ಲಿ ಡೀಪ್ ಪೇನ್ ಫಿಟ್‌ನೆಸ್ ಎಂಬ ಫಿಟ್‌ನೆಸ್ ಚಾನೆಲ್ ಅನ್ನು ನಡೆಸುತ್ತಿದ್ದ ಎನ್ನಲಾಗುತ್ತಿದೆ.
ಯುಟ್ಯೂಬರ್ ಫೈಸಲ್ ವಾನಿ ಎಂಬಾತ ನೂಪುರ್ ಶರ್ಮಾ ಪ್ರವಾದಿ ಮಹಮ್ಮದರ ಬಗ್ಗೆ ಮಾಡಿದ್ದ ವಿವಾದ ಭುಗಿಲೆದ್ದ ನಂತರ ಅವರ ಮೇಲೆ ಆಕ್ರೋಶಗೊಂಡು ಕೊಡಲಿಯಿಂದ ತಲೆ ಕತ್ತರಿಸುವ ರೀತಿ ಹಿಂಸಾತ್ಮಕ ವಿಎಫ್‌ಎಕ್ಸ್ ವಿಡಿಯೊ ಹಾಕಿದ್ದ. Deep Pain Fitness ಎಂಬ ಚಾನಲ್‌ನಲ್ಲಿ ವಿಡಿಯೊ ಹಾಕಿ ನೂಪುರ್ ಮಾಡಿದ ತಪ್ಪಿಗೆ ತಲೆತೆಗೆಯುವುದೇ ಪರಿಹಾರ ಎಂಬ ಒಕ್ಕಣಿಕೆ ಸೇರಿಸಿದ್ದ.
ಈ ವಿಡಿಯೊ ಸಾಕಷ್ಟು ವೈರಲ್ ಕೂಡ ಆಗಿತ್ತು. ಫೈಸಲ್ ವಾನಿ ತಾನು ತಪ್ಪು ಮಾಡಿದ್ದೇನೆ. ನನ್ನ ವಿಡಿಯೊ ಹಿಂಸೆಗೆ ಪ್ರಚೋಧನೆ ನೀಡುವಂತದ್ದಾಗಿದೆ. ಅದನ್ನು ನಾನು ಅಳಿಸಿ ಹಾಕಿದ್ದೇನೆ. ನಾನು ಮಾಡಿದ ತಪ್ಪಿಗೆ ನನ್ನನ್ನು ದಯವಿಟ್ಟು ಕ್ಷಮಿಸಿ. ನೂಪುರ್ ಶರ್ಮಾ ಪ್ರವಾದಿ ಮಹಮ್ಮದ್‌ರ ಬಗ್ಗೆ ನೀಡಿದ್ದ ಹೇಳಿಕೆಯನ್ನು ನಾನು ಕ್ಷಮಿಸುತ್ತೇನೆ. ಏಕೆಂದರೆ ನನಗೆ ಇಸ್ಲಾಂ ಧರ್ಮ ಸಹಿಷ್ಣುತೆಯನ್ನು ಕಲಿಸಿದೆ ಎಂದು ಹೇಳಿದ್ದಾರೆ.
ಇನ್ನೊಂದೆಡೆ ನೂಪುರ್ ಶರ್ಮಾ ಅವರ ವಿರುದ್ಧ ದೇಶದ ಹಲವೆಡೆ ಭಾರೀ ಪ್ರತಿಭಟನೆಗಳನ್ನು ಮುಸ್ಲಿಂ ಸಮುದಾಯದವರು ನಡೆಸುತ್ತಿದ್ದಾರೆ. ಈ ವೇಳೆ ಉತ್ತರ ಪ್ರದೇಶದ ಪ್ರಯಾಗರಾಜ್ ಹಾಗೂ ರಾಂಚಿಯಲ್ಲಿ ವ್ಯಾಪಕ ಹಿಂಸಾಚಾರಗಳು ನಡೆದಿವೆ. ಶರ್ಮಾ ವಿರುದ್ಧ ಕೆಲವರು ಜೀವ ಬೆದರಿಕೆ ಹಾಕಿದ್ದರೆ, ಇನ್ನೂ ಕೆಲವರು ಅನೇಕ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿದ್ದಾರೆ.
ಮೇ ಅಂತ್ಯದ ವೇಳೆಗೆ, ಆಗ ಆಡಳಿತಾರೂಢ ಬಿಜೆಪಿಯ ವಕ್ತಾರರಾಗಿದ್ದ ನೂಪುರ್ ಶರ್ಮಾ ಅವರು ಟಿವಿ ಚರ್ಚೆಯೊಂದರಲ್ಲಿ ಪ್ರವಾದಿ ಮುಹಮ್ಮದ್ ಕುರಿತು ಕಾಮೆಂಟ್ ಮಾಡಿ, ಜಾಗತಿಕವಾಗಿ ಭಾರೀ ಆಕ್ರೋಶವನ್ನು ಹುಟ್ಟುಹಾಕಿದರು. ಚರ್ಚೆಯ ಕ್ಲಿಪ್ ವೈರಲ್ ಆಗುತ್ತಿದ್ದಂತೆ, ಕತಾರ್, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಸೇರಿದಂತೆ ಕನಿಷ್ಠ 14 ರಾಷ್ಟ್ರಗಳು ಕಾಮೆಂಟ್‌ಗಳ ಕುರಿತು ಭಾರತವನ್ನು ದೂಷಿಸಿದವು.
ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ
ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮ
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist