ಶುಕ್ರವಾರ, ಏಪ್ರಿಲ್ 19, 2024
ಇಂದು ಮೊದಲ ಹಂತದ ಲೋಕಸಭಾ ಚುನಾವಣೆ ಆರಂಭ ; ಯಾವೆಲ್ಲಾ ರಾಜ್ಯಗಳಲ್ಲಿ.!-ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!-ಹಾಡಹಗಲೇ ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿಯನ್ನು ಚಾಕುವಿನಿಂದ ಇರಿದು ಬರ್ಬರ ಕೊಲೆ..!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ ; ಇಲ್ಲಿದೆ ಚಿನ್ನದ ದರದ ವಿವರ-ಅಕ್ಕಾ ಸ್ವಲ್ಪ ಎಕ್ಟ್ರಾ ಪೆಗ್ ಹೊಡೆದು ಮಳ್ಕೊಳಿ; ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಶಾಸಕನ ಹೇಳಿಕೆಗೆ ಕಾರ್ಯಕರ್ತೆಯರಿಂದ ಪ್ರತಿಭಟನೆ.!-ನಾನು ಮುಖ್ಯಮಂತ್ರಿ ಆದರೆ ಪ್ರತಿ ಕುಟುಂಬಕ್ಕೆ ಐದು ಸಾವಿರ ಕೊಡುತ್ತೇನೆ; ಶಾಸಕ ಬಸನಗೌಡ ಯತ್ನಾಳ್-ನಟ ಸಲ್ಮಾನ್ ಖಾನ್ ಮನೆ ಮುಂದೆ ಬೆಳ್ಳಂಬೆಳಗ್ಗೆ ಗುಂಡಿನ ದಾಳಿ..!-ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಪ್ರಣಾಳಿಕೆ ಬಿಡುಗಡೆ; ಗ್ಯಾರಂಟಿಯಲ್ಲಿ ಏನಿದೆ?-ಇಸ್ರೇಲ್-ಇರಾನ್ ನಡುವೆ ಯುದ್ಧ ಆರಂಭ?-ನಾಳೆ ಮಂಗಳೂರಿನಲ್ಲಿ ಮೋದಿ ರೋಡ್ ಶೋ ; ವಾಹನ ಸಂಚಾರದಲ್ಲಿ ಬದಲಾವಣೆ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕಾಳು ಮೆಣಸಿನ ಕೃಷಿ; ತಿಳಿದುಕೊಳ್ಳಿ ಕಾಳು ಮೆಣಸಿನ ಔಷಧೀಯ ಗುಣಗಳನ್ನು!

Twitter
Facebook
LinkedIn
WhatsApp
WhatsApp Image 2022 08 26 at 7.58.47 AM

ಕಾಳು ಮೆಣಸು ಅಥವಾ ಕರಿಮೆಣಸು ಭಾರತದಲ್ಲಿ ಅತಿ ಹೆಚ್ಚು ರೈತರು ಈ ಕೃಷಿಯನ್ನು ಮಾಡುತ್ತಾರೆ. ಮುಖ್ಯವಾಗಿ ಸಾಂಬಾರ ಬೆಳೆಯಾಗಿದ್ದು. ವೈದ್ಯಶಾಸ್ತ್ರದಲ್ಲೂ ಕೂಡ ಇದರ ಉಪಯೋಗ ಅಪಾರ. ಇವು ಮರಗಳನ್ನೆ ಆಧಾರವಾಗಿಸಿಕೊಂಡು ಬಳ್ಳಿಗಳಾಗಿ ಎತ್ತರಕ್ಕೆ ಹಬ್ಬುತ್ತಾ ಹೋಗುತ್ತದೆ. ಬಳ್ಳಿಗಳು ಅಲ್ಲಲ್ಲಿ ಗಂಟು ಗಂಟಾಗಿರುತ್ತವೆ. ಮರದ ಅಪ್ಪುಗೆಯಿಂದ ಬೆಳೆಯುವುದರಿಂದ ಇದನ್ನು ‘ಅಪ್ಪು ಸಸ್ಯ’ ಎಂತಲೂ ಕರೆಯುತ್ತಾರೆ. ಇದರ ಬಳ್ಳಿ, ಎಲೆಗಳು ನೋಡೊಕೆ ವಿಳ್ಯದೆಲೆಯ ಆಕಾರವನ್ನೆ ಹೊಂದಿರುತ್ತದೆ.

2fe9efb675ace25d1567857b1fcd8646

ಕರ್ನಾಟಕದಲ್ಲಿ ಹೆಚ್ಚಾಗಿ ಅಡಕೆ, ಕಾಫಿ ತೋಟದಲ್ಲಿ ಕಾಳು ಮೆಣಸು ಬೆಳೆಯಬಹುದು. ಕಾಳು ಮೆಣಸು ಬೆಳೆಯಲು ಬೇರೆ ಭೂಮಿ ಬೇಕಿಲ್ಲ. ಇದ್ದ ಗಿಡ, ಮರಗಳಲ್ಲಿಯೇ ಬೆಳೆಸಬಹುದು. ಕಾಫಿ ತೋಟದಲ್ಲಿ ಒಂದು ಎಕರೆಗೆ 250 ಕಾಳು ಮೆಣಸು ಗಿಡ ಬೆಳೆಸಬಹುದು. ಒಟ್ಟಾರೆ ಒಂದು ಎಕರೆಯಲ್ಲಿ 250ರಿಂದ 300 ಕೆ.ಜಿ. ಕಾಳು ಮೆಣಸು ಪಡೆಯಬಹುದು. ಕಾಳು ಮೆಣಸಿನ ಪನ್ಯೂರ್ 1 ಎಂಬ ತಳಿ ಅತಿ ಹೆಚ್ಚು ಇಳುವರಿಯನ್ನು ನೀಡುತ್ತದೆ. ಕರ್ನಾಟಕದಲ್ಲಿ ಈ ತಳಿ ಹೆಚ್ಚು ಪ್ರಚಲಿತದಲ್ಲಿದೆ. ಆದರೆ, ಈ ತಳಿಯ ಬೆಳೆಗೆ ಬಿಸಿಲು ಬೇಕು. ನೆರಳಿನಲ್ಲಿದ್ದರೆ ಇಳುವರಿ ಕಡಿಮೆಯಾಗುತ್ತದೆ.
ಅಡಕೆ ಮರಕ್ಕೆ (ಬುಡದಲ್ಲಿ) ನೆಟ್ಟರೆ ನೆರಳು ಜಾಸ್ತಿಯಾಗಿ ಇಳುವರಿ ಕಡಿಮೆಯಾಗುತ್ತದೆ. ಅದಕ್ಕೆ ಬೆಳಕಿನ ವ್ಯವಸ್ಥೆ ಮಾಡಿದರೆ ಇಳುವರಿ ಚೆನ್ನಾಗಿ ಪಡೆಯಬಹುದು. ಏಪ್ರಿಲ್, ಮೇ ನಲ್ಲಿ ನೀರು ಕೊಟ್ಟರೆ, ಜೂನ್ ನಲ್ಲಿ ಗಂಡು ಹೂ ಬಿಟ್ಟು ಪ್ರತಿ ಕೊನೆಯಲ್ಲಿ ಕಾಳುಗಳು 80, 100 ಬರುತ್ತವೆ. ಗೊಬ್ಬರ, ಕೀಟ ನಿರ್ಹಣೆ ಸರಿಯಾದ ಸಮಯಕ್ಕೆ ಮಾಡಬೇಕು.

ಕಾಳು ಮೆಣಸು ಬಳ್ಳಿಗೆ ಮಾರ್ಚ್ ಕೊನೆಯ ವಾರದಿಂದ, ಏಪ್ರಿಲ್ ಮತ್ತು ಮೇ ಮೊದಲನೆ ವಾರದವರೆಗೆ ವಾರಕ್ಕೊಮ್ಮೆ ಪ್ರತಿ ಬಳ್ಳಿಗೆ 40 ರಿಂದ 50 ಲೀಟರ್ ನೀರನ್ನು ಬುಡಕ್ಕೆ ಹಾಕಿದರೆ ಇಳುವರಿ ಹೆಚ್ಚಾಗುತ್ತದೆ. ನೀರನ್ನು ಕೊಡದೆ, ಏಪ್ರಿಲ್/ಮೇನಲ್ಲಿ ಮಳೆ ಬಾರದೇ ಜೂನ್‌ನಲ್ಲಿ ಬಂದರೆ ಕಾಳುಮೆಣಸು ಬಳ್ಳಿಯೂ ಜುಲೈ ಅಥವಾ ಆಗಸ್ಟ್‌ನಲ್ಲಿ ಹೂ ಬಿಡುತ್ತದೆ. ಜುಲೈನಲ್ಲಿ ಬಂದ ಹೂವುಗಳಲ್ಲಿ ಹೆಚ್ಚು ಹೆಣ್ಣು ಹೂವುಗಳಿದ್ದು ಗಂಡು ಮತ್ತು ಹೆಣ್ಣು ಹೂವುಗಳು ತುಂಬ ಕಡಿಮೆಯಾಗಿರು ತ್ತವೆ. ಇದರಿಂದ ಸರಿಯಾಗಿ ಪರಾಗಸ್ವರ್ಶ ವಾಗದೆ ಕೊತ್ತು ಬೀಳುವುದು ಸಾಮಾನ್ಯ ವಾಗುತ್ತದೆ ಅಥವಾ ದಾಟು ಮಣಿಯಿಂದ ಕೂಡಿದ ಗೊಂಚಲನ್ನು ಗಮನಿಸ ಬಹುದು. ರೋಗ ಬಾಧೆಯಿಂದ ಬಳಲಿ ಸತ್ತು ಹೋದ ಬಳ್ಳಿಗಳನ್ನು ಬೇರು ಸಮೇತ ಕಿತ್ತು ತೋಟದಿಂದ ಹೊರಗೊಯ್ದು ನಾಶಪಡಿಸಬೇಕು. ತೋಟಗಳಲ್ಲಿ ಕನಿಷ್ಠ ಶೇ.20 ರಿಂದ 25ರಷ್ಟು ನೆರಳಿರುವ ಹಾಗೆ ನೋಡಿಕೊಳ್ಳಬೇಕು. ಬಳ್ಳಿಯ ಸುತ್ತಲು ಹಸಿರು ಎಲೆ, ಒಣ ಎಲೆ ಅಥವಾ ಸಾವಯವ ಪದಾರ್ಥಗಳ ಹೊದಿಕೆ ಮಾಡಬೇಕು. ಇದರಿಂದ ಬಳ್ಳಿಯ ಬುಡ ಬೇಗ ಒಣಗದಂತೆ ತಡೆಗಟ್ಟಬಹುದು.

ಕಾಳು ಮೆಣಸನ್ನು ಸೂರ್ಯನ ಶಾಖದಲ್ಲಿ ಒಣಗಿಸುವುದು ಸಾಂಪ್ರದಾಯಿಕವಾದ ವಿಧಾನವಾಗಿದೆ. ಕಾಳುಗಳನ್ನು ಸಿಮೆಂಟ್‌ ನೆಲದ ಮೇಲೆ ಹರಡಿ ಸೂರ್ಯನ ಶಾಖದಲ್ಲಿ 3-5 ದಿನಗಳವರೆಗೆ ಒಣಗಿಸಿಬೇಕು, ಹೆಚ್ಚು ತೇವಾಂಶವಿದ್ದರೆ ಶಿಲೀಂಧ್ರದ ಬೆಳವಣೆಗೆಗೆ ಕಾರಣವಾಗುತ್ತದೆ. ಶಿಲೀಂಧ್ರಗಳು. ಮೈಕೋಟಾಕ್ಸಿನ್ಸ್‌ ಎಂಬ ವಿಷವನ್ನು ಉತ್ಪತ್ತಿಮಾಡಿ ಕಾಳುಮೆಣಸು ಮಾನವನ ಬಳಕೆಗೆ ಯೋಗ್ಯವಲ್ಲದ ಹಾಗೆ ಮಾಡುತ್ತವೆ.

ಮೊದಲನೇ ವರ್ಷ ಯಾವುದೇ ಬೆಳೆ ಬರುವುದಿಲ್ಲ. ಎರಡನೇ ವರ್ಷದಲ್ಲಿ ಒಂದು ಗಿಡಕ್ಕೆ ಕಾಲು ಕೆಜಿಯಷ್ಟು ಇಳುವರಿ ಬರಬಹುದು. ಹಾಗೆಯೇ ಮೂರನೇ ವರ್ಷದಲ್ಲಿ ಪ್ರತಿ ಬಳ್ಳಿಯಲ್ಲಿ ಒಂದು ಕೆಜಿಯಷ್ಟು ಇಳುವರಿ ಹೆಚ್ಚುತ್ತದೆ. ತದನಂತರ ಮುಂದಿನ ವರ್ಷಗಳಲ್ಲಿ ಇಳುವರಿ ಹೆಚ್ಚುತ್ತಾ ಹೋಗಬಹುದು.

black pepper drying field2

ಕಾಳುಮೆಣಸಿನ ಔಷಧೀಯ ಗುಣ:

  • ಅಡುಗೆ ಪದಾರ್ಥಗಳಲ್ಲಿ ರುಚಿ, ವಾಸನೆಗಾಗಿ ಬಳಸುತ್ತಾರೆ.
  • ಜೀರಿಗೆ, ಶುಂಠಿಯೊಂದಿಗೆ ಕಾಳುಮೆಣಸನ್ನು ಸಮಪ್ರಮಾಣದಲ್ಲಿ ಸೇರಿಸಿ ಕಷಾಯ ಮಾಡಿ ಸೇವಿಸಿದರೆ, ಗಂಟಲುಕೆರೆತ, ಗಂಟಲು ನೋವು, ಕೆಮ್ಮು ನಿಲ್ಲುತ್ತದೆ.
  • ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಸಂಬಂಧಿಸಿದ ಖಾಯಿಲೆಗಳಿಗೂ ಇದು ಪರಿಹಾರಕ.
  • ಬಿಸಿಹಾಲಿಗೆ ಅರಿಶಿಣ, ಕಾಳುಮೆಣಸುಪುಡಿ, ಸಕ್ಕರೆ ಹಾಕಿ ಕುಡಿಯುವುದರಿಂದ ಗಂಟಲುನೋವು ಗುಣವಾಗುತ್ತದೆ.
  • ಅನ್ನಕ್ಕೆ ಉಪ್ಪು, ಬಿಸಿ ತುಪ್ಪ ಹಾಗೂ ಕಾಳುಮೆಣಸಿನ ಪುಡಿ ಕಲೆಸಿ, ತಿನ್ನುಪುದರಿಂದ ಅಜೀರ್ಣದಿಂದಾದ ಸಮಸ್ಯೆ ವಾಸಿಯಾಗುತ್ತದೆ.
  • ಖಾರ ಮತ್ತು ಕಹಿ ಗುಣವನ್ನು ಹೊಂದಿರುವ ಇದು ಕಫ, ವಾತ ದೋಷಗಳನ್ನು ಕಡಿಮೆ ಮಾಡುತ್ತದೆ.
  • ಹಲ್ಲುನೋವಿದ್ದರೆ ಇದರ ಪುಡಿಯೊಂದಿಗೆ, ಸ್ವಲ್ಪ ಉಪ್ಪನ್ನು ಸೇರಿಸಿ ನೋವಿನ ಜಾಗದಲ್ಲಿಟ್ಟರೆ ಕಡಿಮೆಯಾಗುತ್ತದೆ.
  • ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಸಂಬಂಧಿಸಿದ ಖಾಯಿಲೆಗಳಿಗೂ ಇದು ಪರಿಹಾರಕ.
  • ಜೇನುತುಪ್ಪದ ಜೊತೆಗೆ ಕರಿಮೆಣಸಿನ ಪುಡಿಯನ್ನು ಸೇರಿಸಿ ಸೇವನೆ ಮಾಡುವುದರಿಂದ ಕೆಮ್ಮು ನಿವಾರಣೆಯಾಗುತ್ತದೆ.
  • ಕಾಳುಮೆಣಸನ್ನು ಸ್ವಲ್ಪ ನೀರಿನ ಜೊತೆಗೆ ಕಲ್ಲಿನ ಮೇಲೆ ಉಜ್ಜಿ ಮೈಮೇಲೆ ಹಚ್ಚಿದರೆ ಕಜ್ಜಿ, ಗುಳ್ಳೆಗಳಂತ ರೋಗಗಳು ಹೋಗುತ್ತವೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.! Twitter Facebook LinkedIn WhatsApp ಉಡುಪಿ: ಈ ಋತುಮಾನದಲ್ಲಿ ಮೊದಲ ಬಾರಿ ಕಡಲು ಅಬ್ಬರಿಸಿದ್ದು, ಮೊದಲ ಕಡಲಿನ ಅಬ್ಬರವೇ ಓರ್ವನನ್ನು ಬಲಿಪಡಿದಿದೆ.

ಮಂಗಳೂರು: ಎಳನೀರು ಕುಡಿದು ವಾಂತಿ ಭೇದಿ ಪ್ರಕರಣ ; ಕಾಲಾರ ವದಂತಿಗಳಿಗೆ ಕಿವಿಗೊಡಬೇಡಿ: ದಿನೇಶ್ ಗುಂಡುರಾವ್

ಮಂಗಳೂರು: ಎಳನೀರು ಕುಡಿದು ವಾಂತಿ ಭೇದಿ ಪ್ರಕರಣ ; ಕಾಲಾರ ವದಂತಿಗಳಿಗೆ ಕಿವಿಗೊಡಬೇಡಿ: ದಿನೇಶ್ ಗುಂಡುರಾವ್

ಮಂಗಳೂರು: ಎಳನೀರು ಕುಡಿದು ವಾಂತಿ ಭೇದಿ ಪ್ರಕರಣ ; ಕಾಲಾರ ವದಂತಿಗಳಿಗೆ ಕಿವಿಗೊಡಬೇಡಿ: ದಿನೇಶ್ ಗುಂಡುರಾವ್ Twitter Facebook LinkedIn WhatsApp ಮಂಗಳೂರು: ಮಂಗಳೂರು ನಗರದ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾಲರಾ ಭೀತಿ ಎಂದು ತಪ್ಪು

ಅಂಕಣ