ಕಾರ್ಕಳ: ಕಮರಿಗೆ ಬಿದ್ದ ಕಾರು - ಗೃಹ ಸಚಿವ ಅರಗ ಜ್ಞಾನೇಂದ್ರರಿಂದ ರಕ್ಷಣೆ
Twitter
Facebook
LinkedIn
WhatsApp
ಕಾರ್ಕಳ, ಜ 05 : ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಶಿವಮೊಗ್ಗ- ತೀರ್ಥಹಳ್ಳಿ ಮಾರ್ಗವಾಗಿ ಪ್ರಯಾಣಿಸುತಿದ್ದ ವೇಳೆ ಕುಡುಮಲ್ಲಿಗೆ ಸಮೀಪ ಕಾರೊಂದು ನಿಯಂತ್ರಣ ತಪ್ಪಿ ಕಮರಿಗೆ ಬಿದ್ದಿದ್ದು, ಸಚಿವರು ತಮ್ಮ ವಾಹನ ನಿಲ್ಲಿಸಿ, ಅಪಘಾತಕ್ಕೆ ಒಳಗಾದವರನ್ನು ಅಂಗರಕ್ಷಕ ಸಿಬಂದಿ, ಚಾಲಕ, ಆಪ್ತಸಹಾಯಕನ ನೆರವು ಪಡೆದು ರಕ್ಷಿಸಿದ್ದಾರೆ.
ಕಾರಿನಲ್ಲಿ ಓರ್ವ ವಿದ್ಯಾರ್ಥಿಯಿದ್ದು ಆತ ಕುಟುಂಬ ಸದಸ್ಯರ ಜತೆ ಕಾರ್ಕಳದಲ್ಲಿ ಕರಾಟೆ ಪರೀಕ್ಷೆಯೊಂದನ್ನು ಬರೆಯಲು ತೆರಳುತ್ತಿದ್ದಾಗ ಈ ಅಘಢದ ಸಂಭವಿಸಿದೆ. ಆದರೆ ಕಾರಿನಲ್ಲಿದ್ದವರಿಗೆ ಯಾವುದೇ ಗಾಯಗಳಾಗಿಲ್ಲ.
ಇನ್ನು ಸಚಿವರು ವಿದ್ಯಾರ್ಥಿ ಹಾಗೂ ಕುಟಂಬಕ್ಕೆ ಸಾಂತ್ವನ ಹೇಳಿ ಯುವಕನನ್ನು ಪರೀಕ್ಷೆ ಬರೆಯಲು ಕುಟುಂಬದ ಜತೆ ಕಳುಹಿಸಿಕೊಟ್ಟು ಮಾನವೀಯತೆ ತೋರಿದ್ದಾರೆ.