ಕಾರ್ಕಳ:ಆಕಸ್ಮಿಕ ಕಾಲುಜಾರಿ ಹೊಳೆಗೆ ಬಿದ್ದು ವ್ಯಕ್ತಿ ಸಾವು
Twitter
Facebook
LinkedIn
WhatsApp
![ms 010423 dam 1](https://urtv24.com/wp-content/uploads/2023/04/ms-010423-dam-1.jpg)
ಕಾರ್ಕಳ, ಏ 01 : ಮುಂಬೈಯಲ್ಲಿ ಹೋಟೆಲ್ ಉದ್ಯಮಿಯಾಗಿದ್ದ ಮುಂಡ್ಕೂರು ಗ್ರಾಮದ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ನಿವಾಸಿ ರಮೇಶ್ ಸಪಳಿಗ (68) ವರ್ಷ ಎಂಬವರ ಮೃತದೇಹ ಮುಂಡ್ಕೂರು ಶಾಂಭವಿ ಹೊಳೆಯಲ್ಲಿ ಪತ್ತೆಯಾಗಿದೆ.
ವಿಪರೀತ ಮಧ್ಯಪಾನದ ಚಟ ಹೊಂದಿದ್ದ ರಮೇಶ್ ಸಪಳಿಗ ಕೆಲವು ಸಮಯದ ಹಿಂದೆ ಸಹೋದರ ಅನಾರೋಗ್ಯದ ಪೀಡಿತರಾದ ಹಿನ್ನಲೆ ಊರಿಗೆ ಬಂದವರು ವಾಪಸು ಹೋಗಿರಲಿಲ್ಲ. ಮಾರ್ಚ್ 29 ರಂದು ರಾತ್ರಿ 9 ಗಂಟೆಗೆ ಮಧ್ಯಪಾನ ಮಾಡಲೆಂದು ಮನೆಯಿಂದ ಹೋದವರು ವಾಪಸ್ ಮನೆಗೆ ಬಂದಿರಲಿಲ್ಲ.
ಮಾ.31ರಂದು ಬೆಳಿಗ್ಗೆ ಮುಂಡ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನದ ಹಿಂಬದಿ ಇರುವ ನಾಗಬನದ ಹತ್ತಿರದ ಶಾಂಭವಿ ನದಿಯಲ್ಲಿ ಮೃತದೇಹ ಸಿಕ್ಕಿದೆ. ಮಧ್ಯಪಾನ ಮಾಡಿ ಬರುವಾಗ ಆಕಸ್ಮಿಕವಾಗಿ ಹೊಳೆಗೆ ಬಿದ್ದು ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ರಮೇಶ್ ಸಪಳಿಗ ಅವರ ಪುತ್ರ ಯೋಗಿಶ್ ಸಪಳಿಗ ನೀಡಿದ ದೂರಿನ ಪ್ರಕಾರ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.