ಕಾರು – ಬಸ್ ಡಿಕ್ಕಿ: ಐವರು ಮೆಡಿಕಲ್ ವಿದ್ಯಾರ್ಥಿಗಳ ದುರ್ಮರಣ

ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದ್ದು, ವಾಹನವನ್ನು ಒಡೆದು ಒಳಗಿದ್ದವರನ್ನು ಹೊರ ತೆಗೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸೋಮವಾರ ರಾತ್ರಿ ಕೇರಳದ ಅಲಪ್ಪುಳದಲ್ಲಿ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಬಸ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಐವರು ಯುವಕರು, ಎಲ್ಲಾ ಎಂಬಿಬಿಎಸ್ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.
ತಿರುವನಂತಪುರಂ: ಸಾರಿಗೆ ಬಸ್‌ಗೆ ಕಾರೊಂದು ಡಿಕ್ಕಿ (ಕಾರು – ಬಸ್ ಡಿಕ್ಕಿ) ಹೊಡೆದ ಪರಿಣಾಮ ಐವರು ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಕೇರಳದ (Kerala) ಅಲಪುಝಾ (Alappuzha) ಜಿಲ್ಲೆಯಲ್ಲಿ ನಡೆದಿದೆ.
ಸಂದೀಪ್ ವಲ್ಸನ್, ಆಯೂಷ್ ಶಾಜಿ, ಮಹಮ್ಮದ್ ಇಬ್ರಾಹಿಂ ಪಿಪಿ, ದೇವನಂದನ್, ಮಹಮ್ಮದ್ ಅಬ್ದುಲ್ ಜಬ್ಬರ್ ಮೃತ ವಿದ್ಯಾರ್ಥಿಗಳು. ಇವರು ಪ್ರಥಮ ವರ್ಷದ ವೈದ್ಯಕೀಯ ಕೋರ್ಸ್ ಓದುತ್ತಿದ್ದರು. ಕರ್ಲಕೋಡ್ ಪ್ರದೇಶದಲ್ಲಿ ಸೋಮವಾರ ತಡರಾತ್ರಿ 10 ಗಂಟೆಯ ಸುಮಾರಿಗೆ ಅಪಘಾತ ಸಂಭವಿಸಿದೆ. ಭೀಕರ ಅಪಘಾತದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದೆ.
ಘಟನೆಯಲ್ಲಿ ಕಾರಿನಲ್ಲಿದ್ದ ಇಬ್ಬರು ಹಾಗೂ ಬಸ್‌ನಲ್ಲಿದ್ದ ಕೆಲ ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ರೈಲು ನಿಲ್ದಾಣದ ಟಾಯ್ಲೆಟ್ ಹೊರಗೆ ಹಸುಗೂಸನ್ನು ಎಸೆದು ಹೋದ ತಾಯಿ:
ಆಗ್ರಾ: ಉತ್ತರ ಪ್ರದೇಶದ ಆಗ್ರಾ ಕ್ಯಾಂಟ್ ರೈಲು ನಿಲ್ದಾಣದಲ್ಲಿ ಇಂದು ನವಜಾತ ಶಿಶುವನ್ನು ರೈಲ್ವೆ ನಿಲ್ದಾಣದ ಟಾಯ್ಲೆಟ್ ಹೊರಗೆ ಬಿಟ್ಟು ಹೋದ ಅಮಾನವೀಯ ಘಟನೆ ಪತ್ತೆಯಾಗಿದೆ. ನಿರೀಕ್ಷಣಾ ಕೊಠಡಿಯಲ್ಲಿ ನೆಲದ ಮೇಲೆ ಬಿದ್ದಿದ್ದ ಮಗುವನ್ನು ಜನರು ಕಂಡು ಹೊಕ್ಕುಳಬಳ್ಳಿ ಇನ್ನೂ ಹಾಗೇ ಇದ್ದ ಕಾರಣ ಮಗು ಕೆಲವೇ ಕ್ಷಣಗಳ ಹಿಂದೆ ಜನಿಸಿದೆ ಎಂದು ಪತ್ತೆಹಚ್ಚಿದ್ದಾರೆ. ಮಗುವಿನ ತಾಯಿ ನವಜಾತ ಶಿಶುವನ್ನು ನಿಲ್ದಾಣದಲ್ಲಿ ಮಗುವನ್ನು ನೆಲದ ಮೇಲೆ ಬಿಟ್ಟು ನಾಪತ್ತೆಯಾಗಿದ್ದಾಳೆ.
ಮಗುವಿನ ಅಳುವಿನ ಶಬ್ದ ಕೇಳಿ ರೈಲ್ವೇ ನಿಲ್ದಾಣದಲ್ಲಿದ್ದ ಜನರು ಆಶ್ಚರ್ಯಚಕಿತರಾದರು. ಅವರು ಮಗುವನ್ನು ಹುಡುಕಲು ಪ್ರಾರಂಭಿಸಿದರು. ಆದರೆ ರೈಲು ನಿಲ್ದಾಣದ ಟಾಯ್ಲೆಟ್ ಹೊರಗೆ ಮಗು ಮಲಗಿರುವುದನ್ನು ನೋಡಿ ಅವರು ಆಘಾತಕ್ಕೊಳಗಾದರು. ನಂತರ ಮಹಿಳಾ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮಗುವನ್ನು ತಮ್ಮ ವಶಕ್ಕೆ ತೆಗೆದುಕೊಂಡರು.
ಅವರು ಮಗುವನ್ನು ಎಸ್‌ಎನ್ ವೈದ್ಯಕೀಯ ಕಾಲೇಜಿಗೆ ಕರೆದೊಯ್ದರು, ಅಲ್ಲಿ ಶಿಶುವಿನ ಹೊಕ್ಕುಳ ಬಳ್ಳಿಯನ್ನು ಕತ್ತರಿಸಲಾಯಿತು. ಮಗುವನ್ನು ಆಸ್ಪತ್ರೆಯ ಐಸಿಯು ವಾರ್ಡ್ಗೆ ದಾಖಲಿಸಲಾಗಿದ್ದು, ನವಜಾತ ಶಿಶು ಆರೋಗ್ಯವಾಗಿದೆ.
ಭಾನುವಾರ ರಾತ್ರಿ ಅಪರಿಚಿತ ಮಹಿಳೆ ನಿರೀಕ್ಷಣಾ ಕೊಠಡಿಯ ಶೌಚಾಲಯದ ಹೊರಗೆ ಮಗುವಿಗೆ ಜನ್ಮ ನೀಡಿದ ಘಟನೆ ಸಂಭವಿಸಿದೆ ಎಂದು ಪತ್ತೆಯಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನವಜಾತ ಶಿಶುವಿನ ತಾಯಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ಮಹಿಳಾ ಪೊಲೀಸ್ ಅಧಿಕಾರಿಗಳು ಮಗುವನ್ನು ತಮ್ಮ ಆರೈಕೆಗೆ ತೆಗೆದುಕೊಂಡಿದ್ದಾರೆ.
ಜಿಆರ್‌ಪಿ ಮಹಿಳಾ ಪೊಲೀಸ್ ಅಧಿಕಾರಿಗಳು ಮಗುವನ್ನು ತಮ್ಮ ತೋಳುಗಳಲ್ಲಿ ಹಿಡಿದುಕೊಂಡು ನವಜಾತ ಶಿಶುವನ್ನು ತಕ್ಷಣದ ವೈದ್ಯಕೀಯ ಸಹಾಯಕ್ಕಾಗಿ ಆಸ್ಪತ್ರೆಗೆ ಕೊಂಡೊಯ್ಯುತ್ತಿರುವ ವೀಡಿಯೊ ಅಂತರ್ಜಾಲದಲ್ಲಿ ಕಾಣಿಸಿಕೊಂಡಿದೆ. ರೈಲ್ವೇ ನಿಲ್ದಾಣದಲ್ಲಿ ನೆರೆದಿದ್ದ ಜನರು ಮಗುವಿನ ಆರೈಕೆಯಲ್ಲಿ ಆಸಕ್ತಿ ತೋರಿ ಮಗುವನ್ನು ತಮಗೆ ಒಪ್ಪಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು. ಆದರೆ, ಆ ಮಗುವನ್ನು ಯಾರಿಗೂ ಕೊಡಲಿಲ್ಲ.