ಮಂಗಳೂರಿಗೆ (Mangaluru) ಹೋಗಿ ಬರುತ್ತಿದ್ದ ದರ್ಶನ್ಗೆ ಮಂಗಳೂರಿನ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪೂರ್ವಿಕಾ ನಡುವೆ ಸ್ನೇಹವಾಗಿತ್ತು. ಸ್ನೇಹ ಪ್ರೀತಿಗೆ ತಿರುಗಿತ್ತು. ವಿಷಯ ಮನೆಯವರಿಗೆ ತಿಳಿದು 5 ವರ್ಷದ ಬಳಿಕ ಮದುವೆ ಮಾಡುತ್ತೇವೆ ಎಂದಿದ್ದರು. ಆದರೆ, ಒಂದು ತಿಂಗಳ ಹಿಂದೆ ದರ್ಶನ್ ವಿರುದ್ಧ ತಾಲೂಕಿನ ಮಲ್ಲಂದೂರು ಠಾಣೆಯಲ್ಲಿ ಹುಡುಗಿಯೊಬ್ಬಳು ನನಗೆ ದರ್ಶನ್ನಿಂದ ಅನ್ಯಾಯವಾಗಿದೆ. ನಾನು ಗರ್ಭಿಣಿ ಇದ್ದೇನೆ. ಈಗ ಮದುವೆ ಆಗೋಕೆ ಒಪ್ಪುತ್ತಿಲ್ಲ. ನನಗೆ ನ್ಯಾಯ ಕೊಡಿಸಿ ಎಂದು ದೂರು ನೀಡಿದ್ದಳು. ಈ ಕೇಸ್ ಪ್ರೇಮಿಗಳ ಮಧ್ಯೆ ಬಿರುಕು ಮೂಡಿಸಿತ್ತು. ಅಷ್ಟೇ ಅಲ್ಲದೇ 6 ವರ್ಷದಿಂದ ಪ್ರೀತಿಸುತ್ತಿದ್ದ ಹುಡುಗಿ ಪೂರ್ವಿಕಾಳನ್ನೇ ಮದುವೆ ಆಗೋದಾಗಿ ಹೇಳಿದ್ದ ದರ್ಶನ್ ದೂರುಕೊಟ್ಟ ಹುಡುಗಿಯನ್ನೇ ಮದುವೆಯಾಗೋ ಸಂದರ್ಭವೂ ಎದುರಾಗಿತ್ತು.
ಈ ವಿಚಾರ ಗೊತ್ತಾಗುತ್ತಿದ್ದಂತೆ ಪೂರ್ವಿಕ ಸಿಟ್ಟಾಗಿದ್ದಳು. ದರ್ಶನ್ ಎಲ್ಲಾ ರೀತಿಯಲ್ಲೂ ಪೂರ್ವಿಕಾಳ ಮನವೊಲಿಸುವ ಪ್ರಯತ್ನ ಮಾಡಿದ್ದಳು. ಡಿ.ಎನ್.ಎ. ಟೆಸ್ಟ್ ಬೇಕಾದರೂ ಮಾಡಿಸು ಎಂದು ಬೇಡಿಕೊಂಡಿದ್ದ. ಆದರೆ, 3 ದಿನದ ಹಿಂದೆ ಮಂಗಳೂರಿನಿಂದ ಬಂದ ಪೂರ್ವಿಕಾ, ದರ್ಶನ್ನನ್ನು ಭೇಟಿಯಾಗಿ ಮಾತನಾಡಿದ್ದಾಳೆ. ಆ ವೇಳೆ ಇಬ್ಬರ ನಡುವೆ ಏನಾಯ್ತೋ ಗೊತಿಲ್ಲ. ಏನು ಮಾತನಾಡಿಕೊಂಡರೋ ಅದೂ ಗೊತ್ತಿಲ್ಲ. ಆದರೆ, ಅಪ್ಪ-ಅಮ್ಮನಿಗೆ ಕ್ಷಮಿಸಿ, ಅವನನ್ನ ಬಿಟ್ಟು ಇರೋಕೆ ಆಗುತ್ತಿಲ್ಲ ಎಂದು ವಾಯ್ಸ್ ಮೆಸೇಜ್ ಕಳಿಸಿ ಪೂರ್ವಿಕಾ ತನ್ನ ಪ್ರೇಮಿ ಜೊತೆ ನೇಣಿಗೆ ಕೊರಳೊಡ್ಡಿದ್ದಾಳೆ.
ಬದುಕಿದ್ದರೆ ದೂರುಕೊಟ್ಟ ಹುಡುಗಿಯನ್ನೇ ಮದುವೆ ಆಗಬೇಕು ಎಂಬ ಭಯವೋ ಅಥವಾ 6 ವರ್ಷದ ಪ್ರೀತಿಗೆ ಮೋಸ ಮಾಡುವ ಅಳುಕೋ ಗೊತ್ತಿಲ್ಲ. ಇಬ್ಬರು ಒಂದೇ ಮರಕ್ಕೆ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಲ್ದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist