ಸತ್ಯಮಂಗಲ (ತಮಿಳುನಾಡು): ಸತ್ಯಮಂಗಲ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ತೆರಳುತ್ತಿದ್ದ ಲಾರಿಯ ಚಾಲಕ ಕಾಡಾನೆಗೆ ಕಬ್ಬು ನೀಡಿದ ಕಾರಣ ತಮಿಳುನಾಡು ಅರಣ್ಯ ಇಲಾಖೆ 75 ಸಾವಿರ ರೂ. ದಂಡ ವಿಧಿಸಿದೆ
ಸತ್ಯಮಂಗಲ ತಾಲೂಕಿನ ಹಾಸನೂರು ಚೆಕ್ ಪೋಸ್ಟ್ ಸಮೀಪ ಲಾರಿ ಚಾಲಕ ನಂಜನಗೂಡು ತಾಲೂಕಿನ ಸಿದ್ದರಾಜು ಎಂಬಾತ ಕಾಡಾನೆಗೆ ಕಬ್ಬು ನೀಡಿದ್ದನ್ನು ಗಸ್ತಿನಲ್ಲಿದ್ದ ತಮಿಳುನಾಡು ಅರಣ್ಯ ಸಿಬ್ಬಂದಿ ಗಮನಿಸಿದ್ದಾರೆ. ನಂತರ ಮೇಲಧಿಕಾರಿಗಳ ಆದೇಶದಂತೆ ಚಾಲಕನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, 75 ಸಾವಿರ ರೂ. ದಂಡ ವಿಧಿಸಿದ್ದಾರೆ
ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ವನ್ಯಜೀವಿಗಳಿಗೆ ಆಹಾರ ನೀಡುವುದು ನಿಷಿದ್ಧ. ಮನುಷ್ಯರು ನೀಡುವ ಆಹಾರಗಳಿಂದ ವನ್ಯಜೀವಿಗಳ ಸಹಜ ಆಹಾರ ಪದ್ಧತಿಯ ಮೇಲೆ ಪರಿಣಾಮ ಬೀರಬಹುದು ಹಾಗೂ ಸೋಂಕು ತಗುಲಿ, ವನ್ಯಜೀವಿಗಳಿಗೆಲ್ಲ ಹರಡಬಹುದೆಂಬ ಕಾರಣದಿಂದ ಆಹಾರ ನೀಡುವಿಕೆಯನ್ನು ನಿಷೇಧಿಸಲಾಗಿದೆ.
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist