ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ನಿಂದ ರಾಮನಗರದಲ್ಲಿ ನಿಖಿಲ್ ಸೋತಿದ್ದು! ಎಚ್ ಡಿ ಕುಮಾರಸ್ವಾಮಿ

ಬೆಂಗಳೂರು: ಕಾಂಗ್ರೆಸ್ ಭರವಸೆ ನೀಡಿದ್ದ ಗ್ಯಾರಂಟಿ ಕಾರ್ಡ್ನಿಂದ ರಾಮನಗರದಲ್ಲಿ ನಿಖಿಲ್ ಸೋತಿದ್ದು! ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದರು. ಬೆಂಗಳೂರಿನ ಜೆಪಿ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, 42 ಕ್ಷೇತ್ರದಲ್ಲಿ 60 ಸಾವಿರ ಕಾರ್ಡ್ ಹಂಚಿಕೆ ಮಾಡಿದ್ದಾರೆ. ಗ್ಯಾರಂಟಿ ಕಾರ್ಡ್ ಜೊತೆ, ಐದು ಸಾವಿರ ರೂಪಾಯಿ ಗಿಫ್ಟ್ ಕಾರ್ಡ್ ಕೂಡಾ ಕೊಟ್ಟಿದ್ದಾರೆ. ರಾಮನಗರ, ಪಿರಿಯಾಪಟ್ಟಣ, ಆರ್.ಆರ್.ನಗರ,ಕುಣಿಗಲ್ ಸೇರಿದಂತೆ ಹಲವು ಕಡೆ ಹಂಚಿಕೆ ಮಾಡಿದ್ದಾರೆ ಎಂದು ಆರೋಪಿಸಿದರು.
ಪಾರದರ್ಶಕವಾದ ಚುನಾವಣೆ ನಡೆಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಆದರೆ ಈಗ ಯಾವ ರೀತಿ ಚುನಾವಣೆ ನಡೆಸಿದ್ದಾರೆ. ಸಿದ್ದರಾಮಯ್ಯ, ಡಿಕೆಶಿ ಅವರೇ ನೀವು ಎಷ್ಟು ಶೇಕಡಾವಾರು ಫಿಕ್ಸ್ ಮಾಡ್ತೀರಾ? ಇದಕ್ಕೆ ಉತ್ತರ ನೀಡುತ್ತೀರಾ? ಎಂದು ಪ್ರಶ್ನಿಸಿದರು.
ರಾಜ್ಯದ ಜನತೆ ಯಾವ ರೀತಿ ಮರಳು ಮಾಡಿದ್ದೀರಾ, ನಿರುದ್ಯೋಗ ಯುವಕರಿಗೆ 3 ಸಾವಿರ ರೂಪಾಯಿ ಕೊಡುತ್ತೇನೆ ಎಂದಿದ್ದರು. ಆದ್ರೆ ಈಗ 2022, 2023 ರ ಸಾಲಿನ ನಿರುದ್ಯೋಗಿ ಯುವಕರಿಗೆ ಎಂದು ಹೇಳಿದ್ದಾರೆ. ಈ ಕಾರ್ಡ್ನಿಂದ ರಾಮನಗರದಲ್ಲಿ ನಿಖಿಲ್ ಸೋತಿದ್ದು, ನ್ಯಾಯದ ರೀತಿ ಸೋಲಿಸಿಲ್ಲ ಎಂದರು. ಲೋಕಸಭೆ ಚುನಾವಣೆ ಬಳಿಕ ದೇಶದಲ್ಲಿ ಕಾಂಗ್ರೆಸ್ ಇರುತ್ತಾ ಇಲ್ವಾ ಎಂದು ದೇಶದ ಜನ ತೀರ್ಮಾನ ಮಾಡುತ್ತಾರೆ ಎಂದರು.ಬಿಜೆಪಿ ಸರ್ಕಾರದ ಅಕ್ರಮ ತನಿಖೆ ಮಾಡ್ತಾ ಇದ್ದಾರೆ. ಆದರೆ ಚುನಾವಣಾ ಸಂದರ್ಭದಲ್ಲಿ ಹಂಚಿದ ಕೂಪನ್ ಕಾರ್ಡ್‌ಗಳ ಬಗ್ಗೆ ತನಿಖೆ ಮಾಡ್ತೀರಾ? ಎಂದು ಪ್ರಶ್ನಿಸಿದರು. ಕಾಂಗ್ರೆಸ್ ನವರು ಐದು ಗ್ಯಾರಂಟಿ ಕಾರ್ಡ್ ಜಾರಿ ಮಾಡುವುದಿಲ್ಲ. ಅಂದು ಸಿದ್ದರಾಮಯ್ಯ ಕರೆಂಟ್ ಫ್ರೀ ಅಂದಿದ್ದರು. ಇವಾಗ ಕಾಂಗ್ರೆಸ್ ಸರ್ಕಾರ ಷರತ್ತು ಹಾಕಿದರೆ ನಾವು ಬೀದಿಗೆ ಇಳಿದು ಹೋರಾಟ ಮಾಡುತ್ತೇವೆ. ಯಾವುದೇ ಕಾರಣಕ್ಕಾಗಿ ಬಿಡಲ್ಲ ಎಂದು ಎಚ್ಚರಿಕೆ ನೀಡಿದರು.