ಪಂಜಾಬ್ ಚುನಾವಣೆ ಫಲಿತಾಂಶ ರಾಷ್ಟ್ರದ ರಾಜಕೀಯ ಇತಿಹಾಸದಲ್ಲಿ ಮಹತ್ವದ ತಿರುವು ನೀಡಿದೆ.
ಇದುವರೆಗೆ ವಿರೋಧಪಕ್ಷದ ನಾಯಕನಾಗಿ ಬಹುತೇಕ ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ನ ಸ್ಥಾನವನ್ನು ಕ್ರಮೇಣವಾಗಿ ಆಮ್ ಆದ್ಮಿ ಪಕ್ಷ ವಶಪಡಿಸಿಕೊಳ್ಳುವ ಸೂಚನೆಯನ್ನು ನೀಡಿದೆ.
ಈಗ ಆಮ್ ಆದ್ಮಿ ಪಕ್ಷ ಎರಡು ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಕಾಂಗ್ರೆಸ್ ಬಿಟ್ಟು ಎರಡು ರಾಜ್ಯದಲ್ಲಿ ಅಧಿಕಾರದಲ್ಲಿರುವ ಇನ್ನೊಂದು ವಿರೋಧಪಕ್ಷವಾಗಿ ಆಮ್ ಆದ್ಮಿ ಹೊರಹೊಮ್ಮಿದೆ.
ಆ ಮೂಲಕ ಪ್ರಾದೇಶಿಕ ಪಕ್ಷದ ತನ್ನ ಟ್ಯಾಗ್ಲೈನ್ ನನ್ನ ಕಳಚಿಕೊಂಡಿದೆ ಆದ್ಮಿ ಪಕ್ಷ. ಈಗ ರಾಷ್ಟ್ರೀಯ ಪಕ್ಷವಾಗಿ ರೂಪಗೊಂಡಿದೆ.
ಭ್ರಷ್ಟಾಚಾರ ದ ವಿರುದ್ಧ ಹೋರಾಟ ಹಾಗೂ ಅಭಿವೃದ್ಧಿ ಎಂಬ ಧ್ಯೇಯವಾಕ್ಯದೊಂದಿಗೆ ಮುನ್ನುಗ್ಗುತ್ತಿರುವ ಆಮ್ ಆದ್ಮಿ ಪಕ್ಷ ಪಂಜಾಬಿನಲ್ಲಿ ಸರ್ವರು ಬೆರಗಾಗುವಂತೆ ಫಲಿತಾಂಶವನ್ನು ನೀಡಿ ರಾಷ್ಟ್ರೀಯ ಪಕ್ಷ ಕಾಂಗ್ರೆಸಿಗೆ ಟಕ್ಕರ್ ನೀಡಿದೆ.
ಸ್ವಜನ ಹಿತಾಸಕ್ತಿ, ಅನರ್ಹರಿಗೆ ಪಕ್ಷದ ಹುದ್ದೆಗಳನ್ನು ಹಂಚುವುದು, ಬೆಂಬಲಿಗರಿಗೆ ಸ್ಥಾನಮಾನ ನೀಡುವ ಕಾಂಗ್ರೆಸ್ನ ಸಂಸ್ಕೃತಿಯ ವಿರುದ್ಧ ಜನರು ಹಾಗೂ ಕಾರ್ಯಕರ್ತರು ರೋಸಿಹೋಗಿದ್ದಾರೆ ಆ ಮೂಲಕ ಬದಲಿ ವಿರೋಧ ಪಕ್ಷವನ್ನು ದೇಶದ ಜನ ಎದುರುನೋಡುತ್ತಿದ್ದಾರೆ ಎಂಬುದು ಪಂಜಾಬಿನ ಚುನಾವಣೆ ಫಲಿತಾಂಶ ಸಾಬೀತುಪಡಿಸಿದೆ.
ಪಂಜಾಬಿನ ಚುನಾವಣೆ ಫಲಿತಾಂಶ ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ದುರ್ಬಲ ವಾಗುವಂತೆ ಮಾಡಿದೆ ಎನ್ನುತ್ತಾರೆ ವಿಶ್ಲೇಷಕರು. ಯಾವೊಂದು ರಾಜ್ಯದಲ್ಲೂ ಕಾಂಗ್ರೆಸ್ ಅಧಿಕಾರ ಪಡೆಯದೆ ಇರದಿರುವುದು ಆ ಪಕ್ಷ ದ ಸ್ಥಾನದಲ್ಲಿ ಆಮ್ ಆದ್ಮಿ ಪಕ್ಷ ಬರುವುದು ಖಚಿತ ಎಂಬುದು ರಾಜಕೀಯ ವಿಶ್ಲೇಷಕರ ಸ್ಪಷ್ಟ ಅಭಿಪ್ರಾಯ.
ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ
ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮ
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist