ಗುರುವಾರ, ಏಪ್ರಿಲ್ 25, 2024
ಚುನಾವಣೆ ಭಾಷಣ ಮಾಡುವಾಗ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ.!-EVM: ಇವಿಎಂ ಕುರಿತು ಚುನಾವಣಾ ಆಯೋಗದಿಂದ ಸ್ಪಷ್ಟನೆ ಕೇಳಿದ ಸುಪ್ರೀಂ ಕೋರ್ಟ್.!-ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ; ಹಾಸನದಲ್ಲಿ ಬಿಜೆಪಿಯ ಕೆಲವರ ಸಹಾಯವಿಲ್ಲ :ದೇವೇಗೌಡ-HSRP ನಂಬರ್ ಪ್ಲೇಟ್ ಅಳವಡಿಸಲು ಮೇ 31ರ ವರೆಗೆ ಗಡುವು; ಎಷ್ಟು ಬೀಳಲಿದೆ ದಂಡ.!-Gold Rate: ಬಹಳ ದಿನಗಳ ಬಳಿಕ ಕೊಂಚ ಇಳಿಕೆ ಕಂಡ ಚಿನ್ನದ ದರ.!-ಶುಕ್ರವಾರ ಮತದಾನದಂದು ಮತಗಟ್ಟೆಯಲ್ಲಿ ಮೊಬೈಲ್ ಫೋನ್ ಕೊಂಡೊಯ್ಯಲು ನಿಷೇಧ..!-164.53 ಕೋಟಿ ರೂ. ಮೌಲ್ಯದ ಆಸ್ತಿ ಘೋಷಿಕೊಂಡ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್!-ರಾಮನ ಚಿತ್ರವಿದ್ದ ಪೇಪರ್ ಪ್ಲೇಟ್‌ನಲ್ಲಿ ನಾನ್‌ವೆಜ್‌ ಬಿರಿಯಾನಿ ಮಾರಾಟ; ಆಕ್ರೋಶದ ಬಳಿಕ ಮಾಲೀಕ ಅರೆಸ್ಟ್.!-ನನ್ನ ತಾಯಿ ದೇಶಕ್ಕಾಗಿ ಮಾಂಗಲ್ಯವನ್ನೇ ತ್ಯಾಗಮಾಡಿದ್ದಾರೆ; ಮೋದಿಗೆ ಮಾಂಗಲ್ಯದ ಬೆಲೆಯೇ ಗೊತ್ತಿಲ್ಲ: ಪ್ರಿಯಾಂಕಾ ಗಾಂಧಿ-ಬರ್ತ್ ಡೇ ಕೇಕ್ ತಿಂದು ಬಾಲಕಿ ಸಾವು ಪ್ರಕರಣ: ಅಸಲಿ ಕಾರಣ ಬಯಲು.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕಸದ ಬೀಡಾಗುತ್ತಿರುವ ರಸ್ತೆ ಬದಿ ಚರಂಡಿಗಳು.. ತನಗೂ - ಪ್ರಕೃತಿಗೂ ಸಂಬಂಧವಿಲ್ಲದಂತೆ ವರ್ತಿಸುವ ನಾಗರಿಕ!

Twitter
Facebook
LinkedIn
WhatsApp
ಕಸದ ಬೀಡಾಗುತ್ತಿರುವ ರಸ್ತೆ ಬದಿ ಚರಂಡಿಗಳು.. ತನಗೂ - ಪ್ರಕೃತಿಗೂ ಸಂಬಂಧವಿಲ್ಲದಂತೆ ವರ್ತಿಸುವ ನಾಗರಿಕ!

ಹೌದು, ಈಗ ಎಲ್ಲೆಡೆ ನೋಡಿದರು ಪ್ಲಾಸ್ಟಿಕ್ ತ್ಯಾಜ್ಯ ರಸ್ತೆ ಬದಿಯ ಚರಂಡಿ ಸೇರುತ್ತಿದೆ. ಯಾವ ರಸ್ತೆಯಲ್ಲಿ ಹೋದರು ನಮಗಿಗ ಪ್ಲಾಸ್ಟಿಕ್ ಮತ್ತು ಇತರ ತ್ಯಾಜ್ಯಗಳು ರಾಶಿ‌ ರಾಶಿ ರಸ್ತೆಯ ಬದಿಯ ಚರಂಡಿಗಳಲ್ಲಿ ಕಾಣಸಿಗುತ್ತವೆ. ಪರಿಸರ ಸ್ವಚ್ಛವಾಗಿಡಬೇಕಾದ ಮನುಷ್ಯನೇ ತನ್ನ ಪರಮ ಕರ್ತವ್ಯವನ್ನು ಮರೆತು ಕಸವನ್ನು, ಪ್ಲಾಸ್ಟಿಕ್ ಚೀಲಗಳನ್ನು ರಸ್ತೆ ಬದಿಗೆ ಎಸೆದು ತನಗೂ ಈ ಪ್ರಕೃತಿ ಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾನೆ. ಇದಕ್ಕೆ‌ ನಿದರ್ಶನ ಎಂಬಂತೆ ಕೆಲವು‌ ಕೋಳಿ ಅಂಗಡಿಯವರು ಕೋಳಿ ತ್ಯಾಜ್ಯಗಳನ್ನು‌ ಸರಿಯಾಗಿ ವಿಲೇವಾರಿ ಮಾಡದೇ ರಸ್ತೆ ಬದಿ ಎಸೆದು ಹೋಗುತ್ತಿದ್ದಾರೆ. ಇದನ್ನು ಪ್ರಾಣಿಗಳು ರಸ್ತೆಯಲ್ಲೆಲ್ಲಾ ಚೆಲ್ಲಾಡಿ ಪರಿಸರದಲ್ಲಿ ದುರ್ನಾತಕ್ಕೆ ಕಾರಣವಾಗುತ್ತಿವೆ. ಇದನ್ನು ನಾವೆಲ್ಲಾ ಗಂಭೀರವಾಗಿ ಪರಿಗಣಿಸಬೇಕಾದ ಅವಶ್ಯಕತೆ ಇದೆ. ಮಾನವ ಪ್ಲಾಸ್ಟಿಕ್ ನ ಗುಲಾಮನಾಗುತ್ತಿದ್ದಾನೆ .

ಬಳಸಿದ ಪ್ಲಾಸ್ಟಿಕನ್ನು ವಿಲೇವಾರಿ ಮಾಡೋಕೆ ಸರಿಯಾದ ವ್ಯವಸ್ಥೆ ಇಲ್ಲದೆ ಜನರು ಕಸವನ್ನು ರಸ್ತೆ ಬದಿ‌ ಎಸೆದು ತಮಗೇನೂ ಸಂಭಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಈ‌ ಸಮಸ್ಯೆ ಗ್ರಾಮೀಣ ಭಾಗದಲ್ಲಿ ಮಾತ್ರ ಅಲ್ಲದೇ, ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲೂ ವ್ಯಾಪಕವಾಗಿ ಹರಡಿದೆ. ಹಾಗಾಗೀ ಶಿಕ್ಷಿತರಾದ ನಾವೆಲ್ಲರೂ ಇದರ ನಿರ್ಮೂಲನೆಗೆ ಪಣತೊಡಬೇಕಾಗಿದೆ. ಸ್ಥಳೀಯ ಆಡಳಿತ ವು ಇದರ ಬಗ್ಗೆ ಗಂಭಿರವಾಗಿ ಯೋಚಿಸದೇ ರಸ್ತೆ ಬದಿ ಕಸಕ್ಕೆ ಗಮನವೇ ಕೊಡದೆ ದಿವ್ಯ ನಿರ್ಲಕ್ಷ್ಯ ತೋರಿಸುತ್ತಿರುವುದು ಆಡಳಿತದ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಹಾಗಾಗೀ ಈ ರಸ್ತೆ ಬದಿ ಕಸದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಅದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಲು ಸ್ಥಳೀಯಾಡಳಿತಗಳು ಶೀಘ್ರವಾಗಿ ಕಾರ್ಯಚರಿಸಬೇಕಾಗಿದೆ.

ಇನ್ನೆನು ಕೆಲವೇ ದಿನಗಳಲ್ಲಿ ಮಳೆಗಾಲ ಪ್ರಾರಂಭವಾಗಲಿದ್ದು ಮಳೆನೀರು ಹರಿದು ಹೋಗುವ ಚರಂಡಿಗಳಲ್ಲಿ ಕಸ ತುಂಬಿ ನೀರು ರಸ್ತೆ ಮೇಲೆ‌ ಹರಿದು ಕೃತಕ ನೆರೆ ಸೃಷ್ಟಿಯಾಗುವ ಮೊದಲು ನಾವೆಲ್ಲಾ ಶಿಕ್ಷಿತ ನಾಗರಿಕರು ಎಚ್ಚೆತ್ತುಕೊಂಡು ಸ್ಥಳೀಯಾಡಳಿತವನ್ನು ಎಚ್ಚರಿಸಿ ಕಸ ಬಿಸಾಡುವವರ ಮೇಲೆ ಕಠಿಣ ಕ್ರಮ ಕೈಗೊಂಡು ಈ ಸಮಸ್ಯೆಯಿಂದ‌ ಪರಿಸರವನ್ನು ಸಂರಕ್ಷಿಸಿ ಮುಂದಿನ‌ ಪೀಳಿಗೆಗೆ ಉಳಿಸುವ ಪಣತೊಡೋಣ.

ವಿಶೇಷ ಅಂಕಣ- ಅವಿಲ್ 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ