27 ವರ್ಷದ ಜೇಮಿಸನ್ ನ್ಯೂಜಿಲೆಂಡ್ ಪರ ಆಡುವ ಆಲ್ರೌಂಡರ್ ಆಟಗಾರ. 2022ರ ಹರಾಜಿನಲ್ಲಿ ಭಾರೀ ಬೇಡಿಕೆ ಹೊಂದಿದ್ದ ಜೇಮಿಸನ್ರನ್ನು 15 ಕೋಟಿ ರೂ. ನೀಡಿ ಆರ್ಸಿಬಿ ಖರೀದಿತ್ತು. ಆದರೆ ಜೇಮಿಸನ್ ಆರ್ಸಿಬಿ ಪರ ಪ್ಲಾಫ್ ಆದರು. ಹಾಗಾಗಿ ಈ ಬಾರಿ ಮಿನಿ ಹರಾಜಿಗೆ ಬಿಟ್ಟುಕೊಟ್ಟಿತು. ನಿನ್ನೆ ನಡೆದ ಹರಾಜಿನಲ್ಲಿ ಜೇಮಿಸನ್ 1 ಕೋಟಿ ರೂ. ಮೂಲಬೆಲೆ ಹೊಂದಿದ್ದರು. ಈ ಮೂಲಬೆಲೆಗೆ ಚೆನ್ನೈ ಜೇಮಿಸನ್ರನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.
2021ರ ಐಪಿಎಲ್ನಲ್ಲಿ ಜೇಮಿಸನ್ ಆರ್ಸಿಬಿ ಪರ 9 ಪಂದ್ಯವಾಡಿದ್ದು, ಕೇವಲ 9 ವಿಕೆಟ್ ಮತ್ತು 65 ರನ್ ಬಾರಿಸಿ ನಿರಾಸೆ ಮೂಡಿಸಿದ್ದರು. ಇದೀಗ ಚೆನ್ನೈ ಪಡೆ ಸೇರಿಕೊಂಡಿರುವ ಜೇಮಿಸನ್ ಪ್ರದರ್ಶನ ಯಾವ ರೀತಿ ಇರಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಮಿನಿ ಹರಾಜಿನಲ್ಲಿ ಚೆನ್ನೈ ಫ್ರಾಂಚೈಸಿ ಬೆನ್ಸ್ಟೋಕ್ಟ್ರನ್ನು 16.25 ಕೋಟಿ ರೂ. ನೀಡಿ ಖರೀದಿಸಿದರೆ, ಆ ಬಳಿಕ ಜೇಮಿಸಿನ್ಗೆ 1 ಕೋಟಿ ರೂ. ಮತ್ತು ಅಜಿಂಕ್ಯಾ ರಹಾನೆಗೆ 50 ಲಕ್ಷ ರೂ. ನೀಡಿ ಖರೀದಿಸಿರುವುದು ಹೆಚ್ಚಿನ ಮೊತ್ತವಾಗಿದೆ.
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?