ಶನಿವಾರ, ಮೇ 4, 2024
ಚುನಾವಣಾ ಪ್ರಚಾರಕ್ಕೆ ಹಣವಿಲ್ಲವೆಂದು ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿ ಕಾಂಗ್ರೆಸ್​​ ಅಭ್ಯರ್ಥಿ..!-ಕೋವಿಶೀಲ್ಡ್​ ಪಡೆದವರು ಕೋಲ್ಡ್, ಐಸ್​ ಕ್ರೀಮ್ ಸೇವಿಸಬಾರದು ಎನ್ನುವುದು ಸುಳ್ಳು ಸುದ್ದಿ ಎಂದ ಆರೋಗ್ಯ ಇಲಾಖೆ.!-17 ಭಾರತೀಯರು ಸೇರಿದಂತೆ ಒಟ್ಟು 25 ಮಂದಿ ಹಡಗಿನಲ್ಲಿದ್ದ ಸಿಬ್ಬಂದಿಯನ್ನು ಬಿಡುಗಡೆ ಮಾಡಿದ ಇರಾನ್!-ಕಾರ್ಕಳ : ನಾಲ್ಕು ತಿಂಗಳೊಳಗೆ ಪರುಶುರಾಮ ಥೀಂ ಪಾರ್ಕ್ ಕಾಮಗಾರಿ ಮುಗಿಸುವಂತೆ ಹೈಕೋರ್ಟ್ ಆದೇಶ..!-ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!-ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..!-ಕೋವಿಶೀಲ್ಡ್ ಆತಂಕದ ನಡುವೆ ಕೋವಾಕ್ಸಿನ್ ಸುರಕ್ಷತೆ ಬಗ್ಗೆ ಭಾರತ್ ಬಯೋಟೆಕ್ ಸ್ಪಷ್ಟನೆ ಏನು?-ಜೆಡಿಎಸ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಮೇಲೆ ಅತ್ಯಾಚಾರ ಆರೋಪ ; ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲು..!-4 ವರ್ಷಗಳ ಪದವಿ ಕೋರ್ಸ್ ನಿಯಮ ಸ್ಥಗಿತ: 3 ವರ್ಷದ ಡಿಗ್ರಿ ವ್ಯಾಸಂಗಕ್ಕೆ ಸರ್ಕಾರ ಸೂಚನೆ..!-ಮೊಬೈಲ್ ನಲ್ಲಿ ಅತ್ತೆಯನ್ನೇ ಹೊಡೆದು ಕೊಂದ ಸೊಸೆ; ಕುಸಿದು ಬಿದ್ದು ಸಾವು ಎಂದು ಕಥೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕಲ್ಲಡ್ಕ: ಕಾರಿನೊಳಗೆ ಕುಳಿತ ಸ್ಥಿತಿಯಲ್ಲಿಯೇ ಯುವಕ ಮೃತ್ಯು - ಕಾರಣ ನಿಗೂಢ

Twitter
Facebook
LinkedIn
WhatsApp
Facebook
Twitter
LinkedIn
WhatsApp
death 1

ಕಲ್ಲಡ್ಕ, ಮಾ 13 : ಕಾರಿನೊಳಗೆ ವ್ಯಕ್ತಿಯೋರ್ವನು ಕುಳಿತ ಸ್ಥಿತಿಯಲ್ಲಿಯೇ ಮೃತಪಟ್ಟ ಘಟನೆ ಕಲ್ಲಡ್ಕದಲ್ಲಿ ನಡೆದಿದೆ.ಗೋಳ್ತಮಜಲು ಗ್ರಾಮದ ‌ಹೊಸೈಮಾರ್ ನಿವಾಸಿ ಜಗದೀಶ್ ಮೃತಪಟ್ಟ ಯುವಕ.

ಜಗದೀಶ್ ವೃತ್ತಿಯಲ್ಲಿ ಚಾಲಕನಾಗಿದ್ದು , ಕಳೆದ ಕೆಲವು ವರ್ಷಗಳ ಹಿಂದೆ ವಿಡಿಯೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದರು.ಭಾನುವಾರ ಬೆಳಿಗ್ಗೆ ಬಾವನ ಜೊತೆ ಬೆಳಿಗ್ಗೆ ತರವಾಡು ಮನೆಯಲ್ಲಿ ದೈವದ ಕಾರ್ಯಕ್ಕೆ ಮಕ್ಕಳ ಜೊತೆ ಹೋಗಿದ್ದರು. ವಾಪಾಸು ಮನೆಗೆ ಬರುವ ವೇಳೆ ಕಲ್ಲಡ್ಕ ತಲುಪಿದಾಗ ಸುಮಾರು 1.30 ಗಂಟೆಗೆ ಕಾರು ಚಲಾಯಿಸಲು ಕಷ್ಟವಾಗುತ್ತಿದೆ ಎಂದು ಬಾವನಲ್ಲಿ ಹೇಳಿದ್ದು ನಾನು ಮತ್ತೆ ಮನೆಗೆ ಬರುತ್ತೇನೆ ನೀವು ‌‌ಮಕ್ಕಳ ಜೊತೆ ಮನೆಗೆ ಹೋಗಿ ಎಂದು ‌ಕಳುಹಿಸಿ, ಕಾರಿನ ಸೀಟಿನಲ್ಲಿಯೇ ಮಲಗಿದ್ದರು.

ಆದರೆ ರಾತ್ರಿ ‌7 ಗಂಟೆಯಾದರೂ ಈತ ಮನೆಗೆ ಬಾರದ ಹಿನ್ನೆಲೆಯಲ್ಲಿ ಮತ್ತೆ ಬಂದು ನೋಡಿದಾಗ ಕಾರಿನ ಸೀಟಿನಲ್ಲಿ ಕುಳಿತು ಮಲಗಿದ ಸ್ಥಿತಿಯಲ್ಲಿರುವುದು ಹೊರಗಿನಿಂದ ಕಂಡುಬಂದಿದೆ.

ಕಾರಿನ ಗ್ಲಾಸ್ ಹಾಕಿ ಮಲಗಿದ್ದರಿಂದ ಕಾರಿನ ಡೋರ್ ಓಪನ್ ಮಾಡಿದಾಗ ಮಲಗಿದ ಸ್ಥಿತಿಯಲ್ಲಿ ಮೃತಪಟ್ಟಿರುವುದು ಗಮನಕ್ಕೆ ಬಂದಿದೆ.

ಕಾರಿನ ಕಿಟಕಿ ,ಬಾಗಿಲನ್ನು ಮುಚ್ಚಿ ಮಲಗಿದ್ದರಿಂದ ಗಾಳಿ ಇಲ್ಲದೆ ಸಾವನ್ನಪ್ಪಿರುವುದೇ? ಅಥವಾ ಇನ್ನಾವುದೇ ಕಾಯಿಲೆಯಿಂದ ಮೃತಪಟ್ಟಿದ್ದಾನಾ? ಎಂಬುದು ವೈದ್ಯಕೀಯ ರಿಪೋರ್ಟ್ ಹಾಗೂ ಪೊಲೀಸ್ ತನಿಖೆಯ ಬಳಿಕ ತಿಳಿಯಬೇಕಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ