ಬೇಸಿಗೆಯ ಸಮಯದಲ್ಲಿ ಹೆಚ್ಚಾಗಿ ಕಂಡು ಬಂದು ಹಲವರ ಬಾಯಲ್ಲಿ ನೀರೂರಿಸುವಂತಹ ಕರಬೂಜ ಹಣ್ಣು, ದೇಹಕ್ಕೆ ತಂಪನ್ನು ಒದಗಿಸುವುದರ ಜೊತೆಗೆ ಬಹಳಷ್ಟು ಆರೋಗ್ಯ ಪ್ರಯೋಜನಗಳನ್ನು ಮನುಷ್ಯನಿಗೆ ತಂದು ಕೊಡುತ್ತದೆ. ಸೌತೆಕಾಯಿ, ಕಲ್ಲಂಗಡಿ, ಕುಂಬಳಕಾಯಿ ಜಾತಿಗೆ ಸೇರಿದ ಈ ಹಣ್ಣನ್ನು ಕೆಲ ದೇಶಗಳ ಕಡೆ ತರಕಾರಿ ಗುಂಪಿಗೆ ಸೇರಿಸುತ್ತಾರೆ. ಮೊದಲು ಪರ್ಷಿಯಾ ದೇಶದಲ್ಲಿ ರೈತರ ಜೀವನೋಪಾಯಕ್ಕೆ ಎಂದು ಬೆಳೆದ ಈ ಹಣ್ಣುಗಳು ನಂತರ ಕ್ರಮೇಣವಾಗಿ ಬ್ರೆಜಿಲ್, ಅಮೇರಿಕಾ ದೇಶಗಳಿಗೆ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಂಡವು. ಈಗ ನಮ್ಮ ಭಾರತದಲ್ಲೇ ಪಂಜಾಬ್ ಪ್ರಾಂತ್ಯದಲ್ಲಿ, ತಮಿಳುನಾಡು, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಆಂಧ್ರ ಪ್ರದೇಶಗಳಲ್ಲಿ ಹೆಚ್ಚಾಗಿ ಈ ಹಣ್ಣುಗಳನ್ನು ಬೆಳೆಯುತ್ತಾರೆ.
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?
Twitter
Facebook
LinkedIn
WhatsApp
ಅಷ್ಟೇ ಅಲ್ಲ, ಎಲ್ಲರಿಗೂ ಇಷ್ಟವಾಗುವ ಈ ಹಣ್ಣು ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿರುವವರಿಗೂ ಉತ್ತಮ ಆಯ್ಕೆಯಾಗಿದೆ. ನೀರಿನಂಶ ಮತ್ತು ವಿವಿಧ ಪೋಷಕಾಂಶಗಳು ಹೆಚ್ಚಿದ್ದರೂ ಕ್ಯಾಲೋರಿಗಳು ಕಡಿಮೆ ಇರುವ ಕಾರಣ ಕೊಬ್ಬು ಹೆಚ್ಚಿಸದೇ ದೇಹಕ್ಕೆ ಶಕ್ತಿ ಒದಗಿಸುವ ಮೂಲಕ ಆರೋಗ್ಯಕರ ಹಣ್ಣುಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುತ್ತದೆ.
ಇದರ ಸೇವನೆಯಿಂದ ನಮ್ಮ ದೇಹಕ್ಕೆ ಬೇಕಾದ ಶೇ. 20ರಷ್ಟು ವಿಟಮಿನ್ ಎ ಮತ್ತು ಶೇ. 61ರಷ್ಟು ವಿಟಮಿನ್ ಸಿ ಸಿಗುತ್ತದೆ. ಈ ಹಣ್ಣಿನಲ್ಲಿ ಶೇ. 90ರಷ್ಟು ನೀರಿನಂಶ ಇರುತ್ತದೆ. ಹೀಗಾಗಿ, ಈ ಹಣ್ಣು ತಿಂದ ನಂತರ ಹಲವು ಗಂಟೆಗಳ ಕಾಲ ನಿಮ್ಮ ಹಸಿವನ್ನು ನಿಯಂತ್ರಿಸುತ್ತದೆ.
ಅದರಲ್ಲೂ ಬೇಸಿಗೆಯಲ್ಲಿ ಕರ್ಬೂಜ ಹಣ್ಣಿನ ಸೇವನೆಯಿಂದ ದೈಹಿಕ ಆರೋಗ್ಯದ ಜೊತೆಗೆ ಚರ್ಮದ ಆರೋಗ್ಯಕ್ಕೂ ಉತ್ತಮ. ಇದು ಬೇಸಿಗೆಯಲ್ಲಿ ದೇಹಕ್ಕೆ ಚೈತನ್ಯ ನೀಡುತ್ತದೆ. ಪೋಷಕಾಂಶಗಳ ಆಗರವಾಗಿರುವ ಕರ್ಬೂಜದಿಂದ ಯಾವೆಲ್ಲಾ ರೀತಿಯ ಪ್ರಯೋಜನಗಳಿವೆ ನೋಡಿ.
ಕರ್ಬೂಜ ಹಣ್ಣಿನಲ್ಲಿರುವ ವಿಟಮಿನ್ ಸಿ ಪ್ರೋಟಿನ್ ಮೂಳೆಗಳ ಬೆಳವಣಿಗೆ, ರಕ್ತನಾಳದ ಆರೋಗ್ಯ , ಗಾಯ ಗುಣಪಡಿಸುವಿಕೆಗೆ ಗುಣ ಹೊಂದಿದೆ. ಈ ಹಣ್ಣುನ್ನು ಬೇಸಿಗೆಯಲ್ಲಿ ನಿಯಮಿತ್ತವಾಗಿ ಸೇವನೆ ಮಾಡುವುದರಿಂದ ದೇಹವನ್ನು ತಂಪಾಗಿರಿಸುತ್ತದೆ.
ಇದರ ಪ್ರಯೋಜನಗಳು
1.ಮಧುಮೇಹದ ರೋಗಿಗಳು
ಆಗಾಗ್ಗೆ ಹಸಿವು ಎಂದು ಗೊಣಗುತ್ತಿರುತ್ತಾರೆ. ಏಕೆಂದರೆ ಅವರಲ್ಲಿ ಪಥ್ಯದ ಪರಿಣಾಮವಾಗಿ ಸಕ್ಕರೆಯ ಮಟ್ಟ ಮತ್ತು ಶಕ್ತಿಯ ಮಟ್ಟವು ಸಹ ಕುಸಿದಿರುತ್ತದೆ. ಕರ್ಬೂಜ ಹಣ್ಣಿನ ರಸವು ಇಂತಹವರಿಗೆ ಒಳ್ಳೆಯ ಪೂರಕ ಆಹಾರವಾಗಿರುತ್ತದೆ. ಪರಿಣಿತರು ಮಧುಮೇಹಿಗಳಿಗೆ ಸ್ವಲ್ಪ ಕಹಿಯಾದ ಕರ್ಬೂಜ ಹಣ್ಣಿನ ರಸವನ್ನು ತೆಗೆದುಕೊಳ್ಳಲು ಸೂಚಿಸುತ್ತಾರೆ. ಏಕೆಂದರೆ ಇದು ಮಧುಮೇಹಿಗಳ ದೇಹದಲ್ಲಿರುವ ಸಕ್ಕರೆಯಂಶವನ್ನು ಕಡಿಮೆ ಮಾಡಲು ಸಹಕರಿಸುತ್ತದೆ.
2.ಉತ್ತಮ ಜೀರ್ಣಕ್ರಿಯೆಗೆ ಸಹಕಾರಿ
ಜೀರ್ಣತೆ ಹಾಗೂ ಮಲಬದ್ಧತೆಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಕರ್ಬುಜ ಹಣ್ಣು ಒಂದು ಒಳ್ಳೆಯ ಔಷಧಿಯಾಗಿದೆ. ಅದರಲ್ಲಿ ಯಾವುದೇ ಅನುಮಾನ ಇಲ್ಲ. ಇದನ್ನು ನಿಯಮಿತ್ತ ಸೇವನೆಯಿಂದ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ನಿವಾರಿಸಬಹುದಾಗಿದೆ.
ರಕ್ತದ ಒತ್ತಡ ಸಮತೋಲನಕ್ಕೆ ಉತ್ತಮ ಪರಿಹಾರವಾಗಿದೆ. ಕರ್ಬೂಜ ಸೇವನೆಯಿಂದ ರಕ್ತ ಸಮಸ್ಯೆ ಹಾಗೂ ಹೃದಯದ ತೊಂದರೆಯನ್ನು ಕಾಪಾಡಲು ಸಹಕರಿಸುತ್ತದೆ.
3.ಮಲಬದ್ಧತೆಯನ್ನು ದೂರ ಮಾಡುತ್ತದೆ
ದೇಹದಲ್ಲಿ ನಾರಿನ ಅಂಶದ ಕೊರತೆ ಉಂಟಾದಾಗ ಸಹಜವಾಗಿಯೇ ಮನುಷ್ಯನಿಗೆ ಮಲಬದ್ಧತೆಯ ಸಮಸ್ಯೆ ಕಾಡುತ್ತದೆ. ಆದರೆ ಕರ್ಬುಜ ಹಣ್ಣಿನ ಸೇವನೆಯಿಂದ ಅದರಲ್ಲಿರುವ ಯಥೇಚ್ಛವಾದ ನಾರಿನ ಅಂಶಗಳು ನೈಸರ್ಗಿಕ ವಿರೇಚಕಗಳಾಗಿ ಕೆಲಸ ಮಾಡಿ ದೇಹಕ್ಕೆ ಅಗತ್ಯ ಪ್ರಮಾಣದ ನಾರಿನ ಅಂಶಗಳನ್ನು ಒದಗಿಸುವುದರ ಜೊತೆಗೆ ಮಲಬದ್ಧತೆಯ ಗುಣ ಲಕ್ಷಣಗಳನ್ನು ಮಾಯವಾಗಿಸುತ್ತದೆ. ಕೆಲವರು ಮಲ ವಿಸರ್ಜನೆಯ ಸಮಯದಲ್ಲಿ ಬಹಳಷ್ಟು ಕಷ್ಟ ಪಡುತ್ತಾರೆ. ಅದಕ್ಕೆ ಕಾರಣ ಅವರ ಆಹಾರ ತ್ಯಾಜ್ಯ ಬಹಳಷ್ಟು ಗಟ್ಟಿಯಾಗಿರುತ್ತದೆ. ಇಂತಹ ಸಮಸ್ಯೆಯನ್ನು ಕರ್ಬುಜ ಹಣ್ಣು ಸುಲಭವಾಗಿ ನಿವಾರಣೆ ಮಾಡುತ್ತದೆ. ಇದೇ ಕಾರಣದಿಂದ ಹಲವಾರು ಆರೋಗ್ಯ ತಜ್ಞರು ಮತ್ತು ವೈದ್ಯರು ಅಧಿಕ ನೀರಿನಂಶವಿರುವ ಆಹಾರಗಳನ್ನು ಜೊತೆಗೆ ಹೆಚ್ಚಿನ ನಾರಿನಂಶ ಇರುವ ಆಹಾರ ಪದಾರ್ಥಗಳನ್ನು ಸೇವಿಸಲು ಸೂಚನೆ ನೀಡುತ್ತಾರೆ.
4.ಕಿಡ್ನಿ ಸಮಸ್ಯೆ ಇರುವವರಿಗೆ
ಕರ್ಬೂಜ ಹಣ್ಣು ಅತ್ಯುತ್ತಮ ಮೂತ್ರವರ್ಧಕ ಶಕ್ತಿಯನ್ನು ಹೊಂದಿದೆ. ಹಾಗಾಗಿ ಇದು ಮೂತ್ರಕೋಶದ ಸಂಬಂಧಿ ಕಾಯಿಲೆ ಮತ್ತು ಇತರ ಅಪಾಯಕಾರಿ ಕಾಯಿಲೆ ಬರದಂತೆ ತಡೆಯುತ್ತವೆ. ಅಲ್ಲದೆ ಕಜ್ಜಿ ಬರುವುದನ್ನು ಸಹ ತಡೆಯುತ್ತವೆ. ನಿಂಬೆಹಣ್ಣಿನ ಜೊತೆಗೆ ಕರ್ಬೂಜ ಹಣ್ಣನ್ನು ಸೇವಿಸುವುದರಿಂದ ಸಂಧಿವಾತವನ್ನು ಸಹ ಗುಣಪಡಿಸಬಹುದು.
5.ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ
ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರು ಕರ್ಬೂಜ ಹಣ್ಣನ್ನು ನಿಯಮಿತವಾಗಿ ಸೇವಿಸುವುದು ಉತ್ತಮ. ಇದರಿಂದ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರಬಹುದು. ಈ ಹಣ್ಣಿನಲ್ಲಿ ಪೊಟ್ಯಾಶಿಯಂ ಅಂಶ ಸಮೃದ್ಧವಾಗಿದ್ದು, ಇದು ಸೋಡಿಯಂ ಅಂಶಗಳ ದುಷ್ಪರಿಣಾಮದಿಂದ ದೇಹವನ್ನು ರಕ್ಷಿಸುತ್ತದೆ. ರಕ್ತನಾಳಗಳನ್ನು ಸಡಿಲಗೊಳಿಸಿ, ಸುಗಮ ರಕ್ತಸಂಚಾರಕ್ಕೆ ಅನುವು ಮಾಡಿಕೊಡುತ್ತದೆ.
6.ನಿರ್ಜಲೀಕರಣವನ್ನು ತಡೆಯುತ್ತದೆ
ಈ ಹಣ್ಣು ಶೇಕಡಾ 90ರಷ್ಟು ನೀರಿನಾಂಶವನ್ನು ಹೊಂದಿದೆ. ಬೇಸಿಗೆಯಲ್ಲಿ ದೇಹಕ್ಕೆ ನಿರ್ಜಲೀಕರಣ ಉಂಟಾಗುವುದನ್ನು ತಡೆಯಲು ಇದರ ನಿಯಮಿತ ಸೇವನೆ ಉತ್ತಮ. ಜೊತೆಗೆ ದೇಹದಲ್ಲಿ ನೀರಿನಾಂಶ ಸಂಗ್ರಹವಾಗಲು ಸಾಕಷ್ಟು ನೀರು ಕುಡಿಯುವುದು, ನೀರಿನಾಂಶ ಇರುವ ಹಣ್ಣು, ತರಕಾರಿ ಸೇವನೆ ಅವಶ್ಯ. ಪ್ರತಿದಿನ ಒಂದು ಕಪ್ ಕರ್ಬೂಜ ಹಣ್ಣಿನ ತಿನ್ನುವುದು ಅಥವಾ ಒಂದು ಗ್ಲಾಸ್ ಕರ್ಬೂಜದ ಜ್ಯೂಸ್ ಕುಡಿಯುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು.