ಬುಧವಾರ, ಮೇ 1, 2024
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇನ್ಮುಂದೆ ಶಬ್ದರಹಿತ ಕಾರ್ಯಾಚರಣೆ-ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಪ್ರಕಟ ಮಾಡದಂತೆ ಕೋರ್ಟ್‌ನಿಂದ ನಿರ್ಬಂಧಕಾಜ್ಞೆ ತಂದ ಕೆ.ಎಸ್‌. ಈಶ್ವರಪ್ಪ ಪುತ್ರ ಕೆ.ಇ .ಕಾಂತೇಶ್‌!-ದಾರಿ ತಪ್ಪಿದ್ದು ಮಹಿಳೆಯರಲ್ಲ, ನಿಮ್ಮ ಮಗ - ಪ್ರಕಾಶ್ ರೈ-ಪೆನ್ ಡ್ರೈವ್ ಪ್ರಕರಣ: ಅಪ್ಪ- ಮಗನಿಗೆ ನೋಟಿಸ್!-ತೆಲಂಗಾಣದ ನಿಜಾಮಾಬಾದ್ ಕ್ಷೇತ್ರದ ಚುನಾವಣಾ AICC ಉಸ್ತುವಾರಿಯಾಗಿ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ನೇಮಕ-ಅನೈತಿಕ ಸಂಬಂಧ ಶಂಕೆ ಕಾರಿಗೆ ಬೆಂಕಿ ಹಚ್ಚಿ ವ್ಯಕ್ತಿಯ ಬರ್ಬರ ಕೊಲೆ!-Commercial LPG ಗ್ಯಾಸ್‌ ಸಿಲಿಂಡರ್‌ ದರದಲ್ಲಿ19 ರೂ. ಇಳಿಕೆ-ಮಂಗಳೂರು ಲೋಕಸಭಾ ಚುನಾವಣೆ 2024: ಹಳ್ಳಿ ಗಲ್ಲಿಗಳಲ್ಲಿ ಕಾಂಗ್ರೆಸ್- ಬಿಜೆಪಿ ಸಮೀಕ್ಷೆಯ ಬಗ್ಗೆ ಮಾತುಕತೆ. ಮೂಡಬಿದ್ರಿ-ಬೆಳ್ತಂಗಡಿಯ ಬಿಲ್ಲವ ಮತ, ನೋಟಾದ ಬಗ್ಗೆ ವ್ಯಾಪಕ ಚರ್ಚೆ ಬಗ್ಗೆ !!-ನಮ್ಮದು ಮತ್ತು ರೇವಣ್ಣಕುಟುಂಬವೇ ಬೇರೆ ಬೇರೆ; ಕುಮಾರಸ್ವಾಮಿ-ಹೆತ್ತ ತಂದೆಯನ್ನೇ ಹಿಗ್ಗಾಮುಗ್ಗಾ ಮುಖಕ್ಕೆ ಜಾಡಿಸಿ ಮಗನಿಂದ ಕ್ರೂರ ಕೃತ್ಯ ; ಇಲ್ಲಿದೆ ವಿಡಿಯೋ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕರ್ನಾಟಕದ ಪುಟ್ಟ ಬಾಲಕಿ ಪಿಯಾನೋ ನುಡಿಸುವ ಪರಿಗೆ ಮನಸೋತ ಪ್ರಧಾನಿ ಮೋದಿ

Twitter
Facebook
LinkedIn
WhatsApp
pooja hegde on salman khan bhaijaan main 1

ಪಲ್ಲವಗಳ ಪಲ್ಲವಿಯಲಿ ಗರಿಗೆದರಿದೆ ಗೀತಾ, ತಂಬೆಲರಲಿ ಹಬ್ಬುತ್ತಿದೆ ಕೋಕಿಲ ಸಂಗೀತಾ ಎಂಬ ಕನ್ನಡ ಹಾಡಿಗೆ ಪಿಯಾನೋ ನುಡಿಸಿದ ಪುಟ್ಟ ಬಾಲಕಿಯ ಪ್ರತಿಭೆಗೆ ಪ್ರಧಾನಿ ನರೇಂದ್ರ ಮೋದಿ(Narendra Modi) ಮನಸೋತಿದ್ದಾರೆ. ಅಷ್ಟೇ ಅಲ್ಲದೆ, ಕನ್ನಡದಲ್ಲೇ ಟ್ವೀಟ್ ಮಾಡಿದ್ದು, ಈ ವಿಡಿಯೋ ಪ್ರತಿಯೊಬ್ಬರ ಮುಖದ ಮೇಲೆ ಮುಗುಳುನಗೆ ತರಿಸಬಹುದು. ಅನನ್ಯ ಪ್ರತಿಭೆ ಹಾಗೂ ಸೃಜನಶೀಲತೆ. ಶಾಲ್ಮಲಿಗೆ ಶುಭಹಾರೈಕೆಗಳು ಎಂದು ಬರೆದಿದ್ದಾರೆ.

ಆಕೆಯ ತಾಯಿ ಹಾಡಿನ ಸಾಲುಗಳನ್ನು ಹೇಳುತ್ತಿದ್ದಂತೆ ಬಾಲಕಿ ಕೂಡ ಪಿಯಾನೋದಲ್ಲಿ ಅದೇ ಹಾಡನ್ನು ನುಡಿಸುವ ಮೂಲಕ ಲಕ್ಷಾಂತರ ಮಂದಿಯ ಶ್ಲಾಘನೆಗೆ ಪಾತ್ರವಾಗಿದ್ದಾಳೆ. ಈ ಹಾಡನ್ನು ಕವಿ ಕೆಎಸ್​ ನರಸಿಂಹಸ್ವಾಮಿಯವರು ಬರೆದಿದ್ದಾರೆ.

ಈ ವಿಡಿಯೋದಲ್ಲಿರುವ ಬಾಲಕಿಯ ಹೆಸರು ಶಾಲ್ಮಲಿ. ಈ ವಿಡಿಯೋವನ್ನು ಟ್ವಿಟ್ಟರ್​ನಲ್ಲಿ ಅನಂತ್​ ಕುಮಾರ್ ಎಂಬುವವರು ಹಂಚಿಕೊಂಡಿದ್ದರು. ಇದನ್ನು ಪ್ರಧಾನಿ ನರೇಂದ್ರ ಮೋದಿಯವರು ಗಮನಿಸಿ ಮಗುವ ಪ್ರತಿಭೆಯನ್ನು ಶ್ಲಾಘಿಸಿ ಟ್ವೀಟ್ ಮಾಡಿದ್ದಾರೆ.

ಈ ಪುಟ್ಟ ಬಾಲಕಿಯ ಪ್ರತಿಭೆ ನಾಡಿನ ಜನತೆಯನ್ನು ಮಂತ್ರಮುಗ್ಧಗೊಳಿಸಿದೆ, ಕಾಮೆಂಟ್ ವಿಭಾಗವು ಹಾರ್ಟ್​ ಎಮೋಜಿಯಿಂದ ತುಂಬಿ ಹೋಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ