ಗುರುವಾರ, ನವೆಂಬರ್ 21, 2024
ಟೆಸ್ಲಾ ಕಾರು ಅಪಘಾತ, ಗುಜರಾತ್ ಮೂಲದ ನಾಲ್ವರ ದುರ್ಮರಣ!-ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!-ಸ್ನೇಹಿತೆಯರ ಜತೆ ಸೆಲ್ಫಿ: ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ರಕ್ಷಣೆ-ದಾಖಲೆ ಬರೆದ ತೇಜಸ್ವಿ ಸೂರ್ಯ, 'ಐರನ್‌ ಮ್ಯಾನ್‌ 70.3 ರೇಸ್‌' ಪೂರ್ಣಗೊಳಿಸಿದ ಮೊದಲ ಸಂಸದ-ಟೆಕ್ನಾಲಜಿ ಬದಲಾದ್ರೆ ಸಾಕಾ? ರಾಜಕೀಯ, ರಾಜಕಾರಣಿಗಳು ಬದಲಾಗಬಾರದಾ? ಸಂಚಲನ ಸೃಷ್ಟಿಸಿದ ದಳಪತಿ ವಿಜಯ್-ಉಪ ಚುನಾವಣೆಯಲ್ಲಿ ಗೆದ್ದರೆ ಡಿಕೆಶಿ ಸಿಎಂ, ಸಂಚಲನ ಮೂಡಿಸಿದ ಕೈ ಶಾಸಕನ ಹೇಳಿಕೆ!-ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ: ಕಾಂಗ್ರೆಸ್ ಬಂಡಾಯ ಶಮನ; ಅಕ್ಟೋಬರ್ 30ರಂದು ನಾಮಪತ್ರ ವಾಪಸ್ ಪಡೆದುಕೊಳ್ಳುತ್ತಾರಾ ಖಾದ್ರಿ?-19 ವರ್ಷದ ಗೆಳತಿಯನ್ನು ಕೊಂದು ಹೂತಿಟ್ಟ ಪ್ರಿಯಕರ, ಸಹಚರನ ಬಂಧನ-ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!-ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಕರಾವಳಿ ಕಾಂಗ್ರೆಸ್ನಲ್ಲಿ ಇರುವವರು ಬಹುತೇಕರು ರಾಜ್ಯ, ರಾಷ್ಟ್ರಮಟ್ಟದ ನಾಯಕರು. ಆದರೆ ಕರಾವಳಿಯಲ್ಲಿ ಬಿಜೆಪಿ ಎದುರು ಅವರ ನಾಯಕತ್ವ ಏನಾಗುತ್ತಿದೆ?

Twitter
Facebook
LinkedIn
WhatsApp
ಕರಾವಳಿ ಕಾಂಗ್ರೆಸ್ನಲ್ಲಿ ಇರುವವರು ಬಹುತೇಕರು ರಾಜ್ಯ, ರಾಷ್ಟ್ರಮಟ್ಟದ ನಾಯಕರು. ಆದರೆ ಕರಾವಳಿಯಲ್ಲಿ ಬಿಜೆಪಿ ಎದುರು ಅವರ ನಾಯಕತ್ವ ಏನಾಗುತ್ತಿದೆ?

ಕರಾವಳಿಯಲ್ಲಿ ಬಹುತೇಕ ಕಾಂಗ್ರೆಸ್ ನಾಯಕರುಗಳು ರಾಜ್ಯ, ರಾಷ್ಟ್ರಮಟ್ಟದ ನಾಯಕರುಗಳು ಎಂದು ತಿರುಗಾಡುತ್ತಿರುವವರು. ಆದರೆ ಕರಾವಳಿಯಲ್ಲಿ ಅವರ ನಾಯಕತ್ವದಿಂದ ಬಿಜೆಪಿ ಎದುರು ಸತತ ಸೋಲಿನಿಂದ ಕರಾವಳಿ ಕಾಂಗ್ರೆಸ್ಸನ್ನು ಪಾರುಮಾಡಲು ಸಾಧ್ಯವಾಗುತ್ತಿಲ್ಲವೇ? ಎಂದು ಕಾಂಗ್ರೆಸ್ನ ಸಾಮಾನ್ಯ ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ.

ಕರಾವಳಿ ಕಾಂಗ್ರೆಸ್ ಸತತ ಸೋಲುಗಳನ್ನು ಬಿಜೆಪಿಯ ಎದುರು ಕಾಣುತ್ತಿದೆ. ಕಾಂಗ್ರೆಸ್ಸಿನ ರಾಜ್ಯ ಹಾಗೂ ರಾಷ್ಟ್ರಮಟ್ಟದ ನಾಯಕರುಗಳಾದ ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜಾ, ಪಿವಿ ಮೋಹನ್, ರಾಷ್ಟ್ರೀಯ ವಕ್ತಾರೆ ಲಾವಣ್ಯ ಬಳ್ಳಾಳ್, ಮಹಿಳಾ ಕಾಂಗ್ರೆಸ್ನ ರಾಷ್ಟ್ರೀಯ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ಶರೀಲ್, ಯುವ ಕಾಂಗ್ರೆಸ್ ರಾಜ್ಯ ನಾಯಕರುಗಳಾದ ಮಿಥುನ್ ರೈ, ಮೆರಿಲ್ ರೇಗೊ, ಈಗ ರಾಜ್ಯದ ವೇದಿಕೆಯಲ್ಲಿ ಮಿಂಚುತ್ತಿರುವ ಯುವ ಕಾಂಗ್ರೆಸ್ ಅಧ್ಯಕ್ಷ ಲುಕಾನ್ ಇವರೆಲ್ಲ ಯುವ ರಾಷ್ಟ್ರ, ರಾಜ್ಯ ಮಟ್ಟದ ಕಾಂಗ್ರೆಸ್ ನಾಯಕರುಗಳು.

ಇನ್ನು ರಾಜ್ಯ ನಾಯಕರುಗಳಾದ ಯು ಟಿ ಖಾದರ್, ವಿನಯ್ ಕುಮಾರ್ ಸೊರಕೆ ಕರಾವಳಿ ಕಾಂಗ್ರೆಸ್ಸಿನಲ್ಲಿ ಇದ್ದಾರೆ. ರಾಷ್ಟ್ರ ರಾಜ್ಯ ಮಟ್ಟದಲ್ಲಿ ಓಡಾಡುತ್ತಿರುವ ಈ ನಾಯಕರುಗಳಿಗೆ ಕರಾವಳಿಯಲ್ಲಿ ಕಾಂಗ್ರೆಸ್ಸನ್ನು ಸತತ ಸೋಲಿನಿಂದ ಹೇಗೆ ಪಾರುಮಾಡುವುದು ಎಂಬ ಅಂಶ ಅರಿಯದೆ ಇದ್ದದ್ದು ಆಶ್ಚರ್ಯ ಎಂದು ಪ್ರಶ್ನಿಸುತ್ತಾರೆ ಪಕ್ಷದ ಕಾರ್ಯಕರ್ತರುಗಳು.

ರಾಷ್ಟ್ರ, ರಾಜ್ಯ ಮಟ್ಟದ ಈ ನಾಯಕರುಗಳಿಗೆ ತಮ್ಮ ಸ್ವಕ್ಷೇತ್ರ ಕರಾವಳಿಯನ್ನು ಬಲಿಷ್ಠ ಮಾಡಲು ಸಾಧ್ಯವಾಗದ್ದು ಸಾರ್ವಜನಿಕರಲ್ಲಿ ಆಶ್ಚರ್ಯ ಉಂಟುಮಾಡಿದೆ ಎನ್ನುತ್ತಾರೆ ವಿಶ್ಲೇಷಕರು.

ಆದರೆ ಆಶ್ಚರ್ಯವೆಂಬಂತೆ ಕರಾವಳಿ ಇಬ್ಬರು ಮಾಜಿ ಮಂತ್ರಿಗಳು ರಾಷ್ಟ್ರ ರಾಜ್ಯ ಮಟ್ಟದ ನಾಯಕರುಗಳಾಗದೆ ಹಲವಾರು ವರ್ಷಗಳಿಂದ ಸ್ಥಳೀಯ ನಾಯಕರು ಗಳಾಗಿದ್ದಾರೆ. ಮಾಜಿ ಸಚಿವ ರಮನಾಥ ರೈ ಹಾಗೂ ಅಭಯ ಚಂದ್ರಜೈನ್ ಸ್ಥಳೀಯ ಮಟ್ಟದಲ್ಲಿ ಇದ್ದಾರೆ. ಅವರು ತಮ್ಮ ಕ್ಷೇತ್ರದಲ್ಲಿ ಪಕ್ಷದ ವಿಷಯದಲ್ಲಿ ನಿರತವಾಗಿದ್ದರು. ಎಲ್ಲಿಯೂ ರಾಜ್ಯ ರಾಷ್ಟ್ರಮಟ್ಟದ ವಿಷಯಕ್ಕೆ ಹೋಗಿಲ್ಲ, ಆ ಕಾರಣದಿಂದ ಸತತವಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ರಾಷ್ಟ್ರ , ರಾಜ್ಯಮಟ್ಟದ ನಾಯಕರುಗಳು ಎಂದು ಹೇಳುವ ಮೊದಲು ಕರಾವಳಿ ಕಾಂಗ್ರೆಸನ್ನು ಗಟ್ಟಿ ಮಾಡಲಿ ಎನ್ನುತ್ತಾರೆ ಆಕ್ರೋಶ ತುಂಬಿದ ಕಾರ್ಯಕರ್ತರೊಬ್ಬರು..
ಬಿಜೆಪಿ ಕರಾವಳಿಯಲ್ಲಿ ನಳಿನ್ ಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ಸಿಗೆ ಸತತ ಸೋಲುಗಳನ್ನು ನೀಡಿದೆ. ಕಾಂಗ್ರೆಸ್ ಸೋಲಿಗೆ ಈಗ ಇನ್ನೊಂದು ಸೇರ್ಪಡೆ ವಿಟ್ಲ, ಕೋಟೆಕಾರು, ಕಾಪು ಪಟ್ಟಣ ಪಂಚಾಯಿತಿ ಚುನಾವಣೆ.

ಮುಂದೆ ತಾಲೂಕು ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆ ಸದ್ಯದಲ್ಲಿ ನಡೆಯಲಿದೆ. ಆ ಸಂದರ್ಭದಲ್ಲಿ ಕಾಂಗ್ರೆಸ್ ಏನು ಮಾಡುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

Adhvithi Shetty ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!

ರೂಪೇಶ್ ಶೆಟ್ಟಿಯ ‘ಜೈ’ ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!

ರೂಪೇಶ್ ಶೆಟ್ಟಿಯ ‘ಜೈ’ ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ! Twitter Facebook LinkedIn WhatsApp ಮಂಗಳೂರು: ರಾಕ್ ಸ್ಟಾರ್ (Rock Star)  ರೂಪೇಶ್ ಶೆಟ್ಟಿ (Rupesh Shetty) ಅಭಿನಯ ಮತ್ತು ನಿರ್ದೇಶನದ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು