ಕಮಲ ಹುಟ್ಟುವುದು ಕೆಸರಲ್ಲಿ, ಅರಳಿದ ಮೇಲೆ ಮುದುಡಲೇ ಬೇಕು – ಸುರೇಶ್ಗೌಡ
ಮಂಡ್ಯ: ಕಮಲ ಹುಟ್ಟುವುದು ಕೆಸರಲ್ಲಿ, ಅರಳಿದ ಮೇಲೆ ಮುದುಡಲೇ ಬೇಕು ಎನ್ನುವ ಮೂಲಕ ಬಿಜೆಪಿಗೆ ಸಂಸದೆ ಸುಮಲತಾ (Sumalatha Ambareesh) ಬೆಂಬಲ ಘೋಷಣೆ ವಿಚಾರವಾಗಿ ಜೆಡಿಎಸ್ (JDS) ಶಾಸಕ ಸುರೇಶ್ಗೌಡ (Suresh Gowda) ಕುಟುಕಿದರು.
ಮಂಡ್ಯ (Mandya) ಜಿಲ್ಲೆಯ ನಾಗಮಂಗಲದಲ್ಲಿ (Nagamangala) ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಬಿಜೆಪಿಗೆ ಬೆಂಬಲ ನೀಡಿದ್ದು ಅವರ ವೈಯಕ್ತಿಕ ನಿರ್ಧಾರ. ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಒಂದು ಬಿಟ್ಟು ಕಾಂಗ್ರೆಸ್, ಬಿಜೆಪಿ, ರೈತ ಸಂಘ, ಸ್ವಾಭಿಮಾನ ಎಲ್ಲಾ ಒಂದೇ. ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ (Congress) ಮತ್ತು ಬಿಜೆಪಿ (BJP) ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಜಿಲ್ಲೆಯಲ್ಲಿ ಪರಸ್ಪರ ಅವರು ಎಂದಿಗೂ ಬೈದುಕೊಳ್ಳುವುದಿಲ್ಲ. ಎರಡೂ ಪಕ್ಷದವರು ಸೇರಿ ಜೆಡಿಎಸ್ ಪಕ್ಷವನ್ನು ಬೈಯುತ್ತಾರೆ ಎಂದರು.
ಸುಮಲತಾ ದೊಡ್ಡವರಿದ್ದಾರೆ, ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಸುಮಲತಾ ಮೇಲೆ ಹಲ್ಲೆ ನಡೆದಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳಬಹುದು, ಆ ಕೆಲಸ ಮಾಡಲಿ. ನಾವು ಅಭಿವೃದ್ಧಿ ಮಾಡಿದರೆ ಜನ ನಮ್ಮ ಕೈ ಹಿಡಿಯುತ್ತಾರೆ. ಇಲ್ಲದಿದ್ದರೆ ಮನೆಗೆ ಕಳುಹಿಸುತ್ತಾರೆ. ಕಮಲ ಹುಟ್ಟುವುದು ಕೆಸರಲ್ಲಿ, ಅರಳಿದ ಮೇಲೆ ಮುದುಡಲೇ ಬೇಕು. ಮೋದಿ (Narendra Modi) ಅವರಿಗೆ ದೇವೇಗೌಡರ (H.D.Deve Gowda) ಮೇಲೆ ಗೌರವವಿದೆ. ಹಾಗಾಗಿ ಅವರು ಜೆಡಿಎಸ್ ವಿರುದ್ಧ ಮಾತನಾಡುವುದಿಲ್ಲ. ಇದನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದು ಸುಮಲತಾ ಅವರ ಕಾಲೆಳೆದರು.