ಶನಿವಾರ, ಮೇ 18, 2024
ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!-ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ-Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕಬ್ಬಿಣ, ಗೋಧಿಹಿಟ್ಟನ್ನು ಬಳಸಿ KKRTC ಕಂಡಕ್ಟರ್ ಆಗಲು ಅಭ್ಯರ್ಥಿಗಳ ಖತರ್ನಾಕ್ ಐಡಿಯಾ!

Twitter
Facebook
LinkedIn
WhatsApp
ಕಬ್ಬಿಣ, ಗೋಧಿಹಿಟ್ಟನ್ನು ಬಳಸಿ KKRTC ಕಂಡಕ್ಟರ್ ಆಗಲು ಅಭ್ಯರ್ಥಿಗಳ ಖತರ್ನಾಕ್ ಐಡಿಯಾ!

ಕಲಬುರಗಿ: ಕಾಲಿನಲ್ಲಿ ಕಬ್ಬಿಣದ ಪೀಸ್​ಗಳು, ಒಳ ಉಡುಪಲ್ಲಿ ಕೆಜಿ ಕಲ್ಲು, ಶರ್ಟ್​ ಜೇಬು ಒಳಗೆ ಐರನ್ ಪೀಸ್​ಗಳನ್ನು ಇಟ್ಟುಕೊಂಡು ಬಂದು ಸರ್ಕಾರಿ ಹುದ್ದೆ ಪಡೆಯಬೇಕೆಂದು ಕೊಂಡಿದ್ದ ಖತರ್ನಾಕ್ ಕಿಲಾಡಿಗಳು ನಿನ್ನೆ ಸಿಕ್ಕಿಬಿದ್ದಿದ್ದರು. ಈಗ ಇದೇ ರೀತಿಯ ಮತ್ತೊಂದು ಐಡಿಯಾ ನೋಡಿ ಕೆಲಸ ಪಡೆಯಲೇ ಬೇಕು ಎಂದು ಬಂದಿದ್ದ ಮತ್ತೊಬ್ಬ ಕಿಲಾಡಿ ಸಿಕ್ಕಿಬಿದ್ದಿದ್ದಾನೆ. ಅಕ್ರಮವಾಗಿ ದೈಹಿಕ ಪರೀಕ್ಷೆ ಪಾಸಾಗಲು ತೊಡೆಗೆ ಗೋದಿ ಹಿಟ್ಟನ್ನು ಮೆತ್ತಿಕೊಂಡು ಬಂದಿದ್ದ ಓರ್ವ ಅಭ್ಯರ್ಥಿ ಕಳ್ಳಾಟ ಬಯಲಾಗಿದೆ.

ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ 1619 ಚಾಲಕ ಕಂ ನಿರ್ವಾಹಕ ಹುದ್ದೆಗಳ ನೇಮಕಾತಿ ಮಾಡಿಕೊಳ್ತಿದೆ. ಇದಕ್ಕೆ 38 ಸಾವಿರ ಅಭ್ಯರ್ಥಿಗಳು ಅರ್ಜಿ ಹಾಕಿದ್ದಾರೆ. ಮೊದಲ ಹಂತದಲ್ಲಿ, ದಾಖಲಾತಿ ಪರಿಶೀಲನೆ, ದೇಹದಾರ್ಡ್ಯ ಪರೀಕ್ಷೆ ನಡೆಸಲಾಗುತ್ತಿದೆ. ಚಾಲಕ ಕಂ ನಿರ್ವಾಹಕನಾಗಲು 55 ಕೆಜಿ ತೂಕ, 163 ಸೆಂಟಿ ಮೀಟರ್ ಎತ್ತರವಿರಬೇಕು. ಆದ್ರೆ, ಟೆಸ್ಟ್​ಗೆ ಬಂದಿದ್ದ ನಾಲ್ವರು ಖದೀಮರು ತೂಕ ಹೆಚ್ಚಳಕ್ಕಾಗಿ ಒಳ ಉಡುಪಲ್ಲಿ ಕೆಜಿ ಕಲ್ಲು, ಕಾಲುಗಳಿಗೆ, ಸೊಂಟಕ್ಕೆ ಕಬ್ಬಿಣದ ಪೀಸ್​ಗಳನ್ನು ಕಟ್ಟಿಕೊಂಡಿದ್ರು. ಅಲ್ಲದೇ ಶರ್ಟ್​​ ಒಳಗೆ ಜೇಬುಗಳನ್ನ ಮಾಡಿಸಿಕೊಂಡು ಕಬ್ಬಿಣದ ಪೀಸ್​ಗಳನ್ನು ಹುದುಗಿಸಿಟ್ಟಿದ್ರು. ಈ ಖದೀಮರ ಕಳ್ಳಾಟ ಕಂಡು ಅಧಿಕಾರಿಗಳೇ ಶಾಕ್ ಆಗಿದ್ದರು. ಇದೇ ರೀತಿಯ ಖತರ್ನಾಕ್ ಐಡಿಯಾ ಮಾಡಿಕೊಂಡು ಬಂದಿದ್ದ ಮತ್ತೋರ್ವ ಅಭ್ಯರ್ಥಿ ಸಿಕ್ಕಿಬಿದ್ದಿದ್ದಾನೆ.

ಅಕ್ರಮವಾಗಿ ದೈಹಿಕ ಪರೀಕ್ಷೆ ಪಾಸಾಗಲು ಯತ್ನಿಸಿದ ಓರ್ವ ಅಭ್ಯರ್ಥಿ ತನ್ನ ತೊಡೆಗೆ ಗೋದಿ ಹಿಟ್ಟನ್ನು ಮೆತ್ತಿಕೊಂಡು ಬಂದ್ದಿದ್ದಾನೆ. ಇಲಾಖೆಯ ಸಿಬ್ಬಂದಿ ಪರಿಶೀಲನೆ ವೇಳೆ ಅಭ್ಯರ್ಥಿ ಕಳ್ಳಾಟ ಬಯಲಾಗಿದೆ. ಸದ್ಯ ಅಭ್ಯರ್ಥಿಯನ್ನು ನೇಮಕಾತಿ ಪ್ರಕ್ರಿಯೆಯಿಂದಲೇ ಕೈಬಿಡಲಾಗಿದೆ. ಮಾನವೀಯತೆ ದೃಷ್ಟಿಯಿಂದ ಕೇಸ್​​ ದಾಖಲಿಸದೆ ಬಿಟ್ಟು ಕಳಿಸಲಾಗಿದೆ. ಹೆಚ್ಚು ತೂಕವನ್ನು ತೋರಿಸಲು ಅಭ್ಯರ್ಥಿಗಳು ವಾಮಮಾರ್ಗ ಹಿಡಿದಿರುವುದು ಇಲಾಖೆ ಅಧಿಕಾರಿಗಳಿಗೆ ತಲೆ ನೋವಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ