ಕಬಡ್ಡಿ ಮ್ಯಾಚ್ ಆಡುತ್ತಿರುವಾಗಲೇ ಕುಸಿದು ಬಿದ್ದು ಮೃತಪಟ್ಟ 20 ವರ್ಷದ ಯುವಕ

ಮುಂಬಯಿ: ಕಬಡ್ಡಿ ಆಡುತ್ತಿರುವಾಗಲೇ ಕುಸಿದು ಬಿದ್ದು ಯುವಕನೋರ್ವ ಮೃತಪಟ್ಟಿರುವ ಘಟನೆ ಮುಂಬಯಿಯ ಮಲಾಡ್ ನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.ಕೀರ್ತಿರಾಜ ಮಲ್ಲನ್ (20) ಮೃತ ಯುವಕ. ಕಾಲೇಜಿನಲ್ಲಿ ಆಯೋಜಿಸಿದ ಕಬಡ್ಡಿ ಪಂದ್ಯಾವಳಿಯಲ್ಲಿ ಆಡುವಾಗ, ಎದುರಾಳಿ ತಂಡದ ಸದಸ್ಯರನ್ನು ಸ್ಪರ್ಶಿಸಿ ವಾಪಾಸು ಆಗುವ ವೇಳೆ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ, ಆದಾಗಲೇ ಕೀರ್ತಿರಾಜ್ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಕೀರ್ತಿರಾಜ್ ಮಲ್ಲನ್ ಮುಂಬೈನ ಸಂತೋಷ್ ನಗರದ ನಿವಾಸಿಯಾಗಿದ್ದು, ಗೋರೆಗಾಂವ್‌ನ ವಿವೇಕ್ ಕಾಲೇಜಿನಲ್ಲಿ ಬಿ.ಕಾಮ್ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದರು.ಪಂದ್ಯದ ವೇಳೆ ಮೊಬೈಲ್ ನಲ್ಲಿ ವಿಡಿಯೋವನ್ನು ಚಿತ್ರೀಕರಣ ಮಾಡುತ್ತಿದ್ದರು, ಇದನ್ನೇ ಆಧಾರವಾಗಿಟ್ಟು ಪ್ರಕರಣದ ಹೆಚ್ಚಿನ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ
ಇತ್ತೀಚಗಷ್ಟೇ ಕಬಡ್ಡಿ ಆಡುತ್ತಿದ್ದ ವೇಳೆಯೇ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತಗೊಂಡು ಮೃತಪಟ್ಟ ಘಟನೆ ಬೆಂಗಳೂರು ಗ್ರಾಮಾಂತರದ ಆನೇಕಲ್ ನಲ್ಲಿ ನಡೆದಿತ್ತು.