ಕನ್ಯಾಕುಮಾರಿಯಲ್ಲಿ ಮಂಗಳೂರಿನ ಮೀನುಗಾರರ ಮೇಲೆ ಹಲ್ಲೆ
Twitter
Facebook
LinkedIn
WhatsApp

ಮಂಗಳೂರು: ಕನ್ಯಾಕುಮಾರಿ (Kanyakumari) ಸಮುದ್ರದಲ್ಲಿ (Sea) ಮಂಗಳೂರಿನ (Mangaluru) ಮೀನುಗಾರರ ಮೇಲೆ ಕಲ್ಲೆಸೆದು ಹಲ್ಲೆ ನಡೆಸಿದ ಘಟನೆ ನಡೆದಿದೆ.
ಆಳ ಸಮುದ್ರದ ಮೀನುಗಾರಿಕೆಗೆ ಮಂಗಳೂರಿನಿಂದ ಸುಮಾರು ಏಳೆಂಟು ಬೋಟ್‍ಗಳು (Boat) ಕನ್ಯಾಕುಮಾರಿ ಬಳಿ ತೆರಳಿದ್ದರು. ಈ ವೇಳೆ ತಮಿಳುನಾಡಿನ ಕನ್ಯಾಕುಮಾರಿ ಬಳಿ ಮಂಗಳೂರು ಮೀನುಗಾರರು (Fishermen) ಮೀನುಗಾರಿಕೆ ನಡೆಸುತ್ತಿದ್ದಾಗ ತಮಿಳು ಮೀನುಗಾರರು ಅವರನ್ನು ತಡೆದಿದ್ದಾರೆ.
ಅದಾದ ಬಳಿಕ ಸಮುದ್ರದ ಮಧ್ಯೆಯೇ ಹತ್ತಾರು ಬೋಟ್‍ಗಳಿಂದ ಸುತ್ತುವರಿದು ಮಂಗಳೂರಿನ ಮೀನುಗಾರರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಕಲ್ಲುಗಳನ್ನು ಎಸೆಯುತ್ತಿರುವ ವೀಡಿಯೋ ಮೀನುಗಾರರಿಂದ ಲಭ್ಯವಾಗಿದೆ. ಘಟನೆ ವೇಳೆ ಮಂಗಳೂರಿನ ಏಳೆಂಟು ಮೀನುಗಾರರಿಗೆ ಕಲ್ಲೇಟಿನಿಂದಾಗಿ ಗಾಯಗಳಾಗಿದೆ.