ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಮಲೆನಾಡಿನ ಕುವರಿ
ಕನ್ನಡ ಚಿತ್ರಕ್ಕೆ ಮಲೆನಾಡಿನ ಮತ್ತೊಬ್ಬಳು ಕುವರಿ ಪ್ರವೇಶ ವಾಗಿದೆ. ಕನ್ನಡದ ‘ರೆಡ್ರಮ್’ ಚಿತ್ರದಲ್ಲಿ ಕುಶಾಲನಗರದ ಮಧುರಾ ಗೌಡ ನಟಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅಲ್ಲದೇ, ಈ ಚಿತ್ರ ಚಿತ್ರೀಕರಣದಲ್ಲಿರುವಾಗಲೇ ಇನ್ನೊಂದು ಹೆಸರಿಡದ ಬಹು ತಾರಾಗಣದ ಭಾರಿ ಬಜೆಟ್ ಚಿತ್ರಕ್ಕೆ ಆಯ್ಕೆ ಆಗಿದ್ದಾರೆ. ಹಾಗೆ ಹಲವು ಚಿತ್ರಗಳಿಗೆ ಮಾತುಕತೆ ನಡೆಯುತ್ತಿದೆ ಎಂದು ಮಧುರಾ ತಿಳಿಸಿದ್ದಾರೆ.
ಹಲವು ಹೊಸ ನಟಿಯರು ಚಿತ್ರ ರಂಗಕ್ಕೆ ಬರುತಿರುವ ಈ ಸಮಯದಲ್ಲಿ ಮಧುರಾ ತಮ್ಮ ನಟನಾ ಕೌಶಲ್ಯದಿಂದ ಕನ್ನಡ ಸಿನಿ ರಸಿಕರ ಮನೆ ಮನದಲ್ಲಿ ನೆಲೆಸುವಂತಾಗಲಿ. ಮಾಡೆಲಿಂಗ್ ಹಾಗೂ ಅಭಿನಯ ಕ್ಷೇತ್ರದಲ್ಲಿ ತರಬೇತಿ ಪಡೆದಿರುವ ಮಧುರಾ ಕೌಟಿಲ್ಯ ಸಿನಿಮಾಸ್ ಹಾಗೂ ಹನಿ ಚೌಧರಿ ಫಿಲಂಸ್ ಲಾಂಛನದ ದಡಿಯಲ್ಲಿ ಪ್ರಾರಂಭವಾದ ‘ರೆಡ್ರಮ್’ ಕನ್ನಡ ಚಿತ್ರದಲ್ಲಿ ಯು.ಪಿ.ಯಲ್ಲಿ ನಡೆದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.
ಪಕ್ಕಾ ತಯಾರಿಯೊಂದಿಗೆ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿರುವುದಾಗಿ ಅವರು ತಿಳಿಸಿದ್ದಾರೆ. ಮಾಡೆಲಿಂಗ್ ನಲ್ಲಿ ಹೆಚ್ಚು ಆಸಕ್ತಿಯಿದ್ದರೂ, ಅಭಿನಯದಲ್ಲೂ ಪಳಗಬೇಕು ಎನ್ನುವ ಕಾರಣಕ್ಕಾಗಿ ಸೂಕ್ತ ತರಬೇತಿಯನ್ನೂ ಮಧುರಾ ಪಡೆದಿದ್ದಾರಂತೆ. ಪಾತ್ರವನ್ನು ಸರಿಯಾಗಿ ಅರ್ಥಮಾಡಿಕೊಂಡು ನಟಿಸಲು ಇದೆಲ್ಲವೂ ನನಗೆ ಸಹಾಯ ಆಗಲಿದೆ ಎಂದು ಅವರು ತಿಳಿಸಿದ್ದಾರೆ.