ಕನ್ನಡದಲ್ಲಿ ಹವಾ ಎಬ್ಬಿಸಿದೆ ಸಾಂಕೇತ್ ಚಿತ್ರದ ಟೀಸರ್. ಸೂಪರ್ ಅಂದ್ರು ವೀಕ್ಷಕರು!
Twitter
Facebook
LinkedIn
WhatsApp
ಮಂಗಳೂರು: ಮಂಗಳೂರಿನ ಪ್ರತಿಭಾವಂತ ಕಥೆ ರಚನೆಗಾರ, ಸಂಗೀತ ನಿರ್ದೇಶಕ ಕಾರ್ತಿಕ್ ರಾಜ್ ಹಾಗೂ ನಿರ್ದೇಶಕಿ ಜೋಶ್ನಾ ರಾಜ್ ನಿರ್ದೇಶನದ ಸಸ್ಪೆನ್ಸ್ ಥ್ರಿಲ್ಲರ್ ಸಾ೦ಕೇತ್ ಈಗ ಯೂಟ್ಯೂಬ್ ನಲ್ಲಿ ಹವಾ ಎಬ್ಬಿಸಿದೆ.
ಈ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಲಕ್ಷಾಂತರ ವೀಕ್ಷಕರಿಂದ ಮೆಚ್ಚುಗೆ ಗಳಿಸಿಕೊಂಡಿದೆ. ಕ್ಷಣ ಕ್ಷಣಕ್ಕೂ ಕುತೂಹಲ ಹಾಗೂ ರೋಚಕತೆಯನ್ನು ಉಳಿಸಿಕೊಂಡಿರುವ ಟೀಸರ್ ಚಿತ್ರ ರಸಿಕರಲ್ಲಿ ಹೊಸ ಕುತೂಹಲವನ್ನು ಮೂಡಿಸಿದೆ.
ಟೀಸರ್ ನಲ್ಲಿರುವ ಹಿನ್ನೆಲೆ ಸಂಗೀತ ಅತ್ಯುತ್ತಮ ದರ್ಜೆಯ ಹಿನ್ನಲೆ ಸಂಗೀತವಾಗಿ ವ್ಯಕ್ತವಾಗಿದ್ದು, ಚಿತ್ರದ ಬಗೆಗಿನ ನೀರಿಕ್ಷೆಗಳನ್ನು ಇನ್ನಷ್ಟು ಹೆಚ್ಚು ಮಾಡಿದೆ. ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಚೈತ್ರ ಶೆಟ್ಟಿ, ವಿಕ್ಕಿ ರಾವ್, ರೂಪ ಶ್ರೀ ವಾರ್ಕಡಿ , ಮೋಹನ್ ಶೇಣೆ ಪ್ರಮುಖ ಪಾತ್ರದಲ್ಲಿದೆ.
ಜುಲೈ ತಿಂಗಳ 26ರಂದು ಚಿತ್ರ ತೆರೆಗೆ ಅಪ್ಪಳಿಸಲಿದೆ. ಇದು ಒಂದು ಕನ್ನಡ ಚಿತ್ರರಂಗದ ಪ್ರಮುಖ ಚಿತ್ರವಾಗುವುದರಲ್ಲಿ ಸಂಶಯವಿಲ್ಲ ಎಂಬುದಾಗಿ ವೀಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.