ಕನಸನ್ನು ಬೆನ್ನಟ್ಟಲು ಲಿಂಕ್ಡ್ಇನ್ನಲ್ಲಿ ಕೆಲಸ ಬಿಟ್ಟ ಯುವತಿ ಆಕಾಂಕ್ಷಾ ಮೊಂಗಾ
ಜೀವಿಸುವುದಕ್ಕೊಂದು ಕೆಲಸವನ್ನು ಹೇಗೋ ಹುಡುಕೊಳ್ಳಬಹುದು. ಆದರೆ ಬದುಕುವುದಕ್ಕಾಗಿ ಕನಸು ಬಹಳ ಮುಖ್ಯ. ಹಾಗೆಂದು ಕನಸು ಕಂಡವರೆಲ್ಲರೂ ನನಸನ್ನಾಗಿಸಿಕೊಳ್ಳುತ್ತಾರೆ ಎಂದು ಹೇಳಲಾಗದು. ಕೆಲವೇ ಕೆಲವರಿಗೆ ಇದು ಸಾಧ್ಯವಾಗುತ್ತದೆ. ಇದೀಗ ವೈರಲ್ ಆಗಿರುವ ಈ ಲಿಂಕ್ಡ್ಇನ್ ಪೋಸ್ಟ್ ಗಮನಿಸಿ. ದೆಹಲಿ ಮೂಲದ ಯುವತಿಯೊಬ್ಬಳು ತನ್ನ ಕನಸಿಗಾಗಿ ಒಂದು ವರ್ಷದ ಹಿಂದೆ ಕೆಲಸವನ್ನು ತೊರೆದಳು. ಮುಂದೇನಾಯಿತೆಂದು ಓದಿ.
I quit my job at LinkedIn.
— Aakanksha Monga (@Aakanksha_99) May 17, 2023
Last year, on this very date.
When I left, I promised to give myself 1 year to focus on my passion and travel the world full time.
When I left I was burnt out,had 250k followers on IG, worked alone.
Want to know how it’s going now? ? pic.twitter.com/NJzNgKrOjQ
ಪ್ರತಿಯೊಬ್ಬರೂ ತಮ್ಮ ಆಸಕ್ತಿಗೆ ಅನುಗುಣವಾಗಿ ಉತ್ಸಾಹದಿಂದ ಕೆಲಸ ಮಾಡಲು ಬಯಸುತ್ತಾರೆ. ಆ ಪ್ರಕಾರ ಕೆಲಸವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಏಕೆಂದರೆ ತಮ್ಮ ಆಯ್ಕೆಯಲ್ಲಿ ಸಮರ್ಥವಾಗಿ ಕೆಲಸ ಮಾಡಿ ಯಶಸ್ಸು ಗಳಿಸಬಹುದು ಎಂಬ ವಿಶ್ವಾಸ ಅವರಿಗಿರುತ್ತದೆ. ಆಕಾಂಕ್ಷಾ ಮೊಂಗಾ ಎಂಬ ಕಂಟೆಂಟ್ ಕ್ರಿಯೇಟರ್ ಲಿಂಕ್ಡ್ಇನ್ನಲ್ಲಿ ಕೆಲಸ ಮಾಡುತ್ತಿದ್ದರು. ನಂತರ 2022ರಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದರು. ‘ಇಂದಿಗೆ ಸರಿಯಾಗಿ ಒಂದು ವರ್ಷದ ಹಿಂದೆ ಕೆಲಸವನ್ನು ಬಿಟ್ಟಿದ್ದೆ. ನನ್ನ ಹಂಬಲವನ್ನು ಆಗುಮಾಡಿಕೊಳ್ಳುವುದಕ್ಕೋಸ್ಕರ ಜಗತ್ತನ್ನು ಪೂರ್ಣ ಮನಸ್ಸು ಕೊಟ್ಟು ಪ್ರಯಾಣಿಸಬೇಕೆಂದು ನಿರ್ಧರಿಸಿದ್ದೆ. ಅದು ಸಾಧ್ಯವಾಯಿತು’ ಎಂದಿದ್ದಾರೆ.
The BIGGEST problem while travelling- finding VEGETARIAN or VEGAN food!?
— Aakanksha Monga (@Aakanksha_99) May 17, 2023
If you planning to travel across Indonesia, China, France, Japan, and places that do NOT have vegetarian options, this one’s for YOU! pic.twitter.com/p8SMLjTODy
ಆರುಜನರ ತಂಡವನ್ನು ಕಟ್ಟಿಕೊಂಡು ಈತನಕ 12 ದೇಶಗಳಲ್ಲಿ ಈಕೆ ಪ್ರಯಾಣಿಸಿದ್ದಾರೆ. 300ಕ್ಕೂ ಹೆಚ್ಚು ವಿಡಿಯೋ ಕಂಟೆಂಟ್ ಸೃಷ್ಟಿಸಿದ್ದಾರೆ. ಸಾಕಷ್ಟು ವಿಡಿಯೋಗಳು ವೈರಲ್ ಆಗಿವೆ. ಇವರು ಸಾಮಾಜಿಕ ಜಾಲತಾಣದಲ್ಲಿ 2,50,000 ಫಾಲೋವರ್ಗಳನ್ನು ಹೊಂದಿದ್ದಾರೆ. ಈಗ ವೈರಲ್ ಆಗಿರುವ ಈ ಪೋಸ್ಟ್ ಅನ್ನು ಸುಮಾರು 2 ಲಕ್ಷಕ್ಕಿಂತ ಹೆಚ್ಚು ಜನರು ನೋಡಿದ್ದಾರೆ. ನೆಟ್ಟಿಗರು ಈಕೆಯ ಪೋಸ್ಟ್ನಿಂದ ಪ್ರಭಾವಿತರಾಗಿದ್ದಾರೆ.
ನಿಮಗೆ ಖುಷಿ ಕೊಡುವುದನ್ನೇ ನೀವು ವೃತ್ತಿಯಾಗಿಸಿಕೊಳ್ಳಿ. ಆಗ ನಿಮ್ಮ ಜೀವನ ಇನ್ನೂ ಎತ್ತರಕ್ಕೇರುತ್ತದೆ ಎಂದು ಅಭಿನಂದಿಸಿದ್ದಾರೆ ಅನೇಕರು. ನೀವು ನಿಮ್ಮ ಪ್ರಯಾಣದ ವೆಚ್ಚವನ್ನು ಹೇಗೆ ನಿರ್ವಹಿಸಿದಿರಿ ಎಂದು ಕೇಳಿದ್ದಾರೆ ಕೆಲವರು.
No matter where I go, I always make sure to find a waterfall! This one was in Phong Nha, Vietnam.
— Aakanksha Monga (@Aakanksha_99) May 15, 2023
Got any recommendations for me? pic.twitter.com/QQ6GCQ4oLi