ಭಾನುವಾರ, ಮೇ 19, 2024
ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!-ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ-Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕತ್ತಲಲ್ಲಿ ಸ್ಮಾರ್ಟ್ ಫೋನ್ ಬಳಸಿ ದೃಷ್ಟಿ ಕಳೆದುಕೊಂಡ ಮಹಿಳೆ

Twitter
Facebook
LinkedIn
WhatsApp
ಹೈದರಾಬಾದ್: ಅತಿಯಾದ ಸ್ಮಾರ್ಟ್ ಫೋನ್ (Smartphone) ಬಳಕೆಯಿಂದ ಮಹಿಳೆಯೊಬ್ಬಳು ಕಣ್ಣು ಕಳೆದುಕೊಂಡಿದ್ದ ಘಟನೆ ಹೈದರಾಬಾದ್‍ನಲ್ಲಿ (Hyderabad) ನಡೆದಿದೆ.

ಹೈದರಾಬಾದ್: ಅತಿಯಾದ ಸ್ಮಾರ್ಟ್ ಫೋನ್ (Smartphone) ಬಳಕೆಯಿಂದ ಮಹಿಳೆಯೊಬ್ಬಳು ಕಣ್ಣು ಕಳೆದುಕೊಂಡಿದ್ದ ಘಟನೆ ಹೈದರಾಬಾದ್‍ನಲ್ಲಿ (Hyderabad) ನಡೆದಿದೆ.

30 ವರ್ಷದ ಮಂಜು ಒಂದೂವರೆ ವರ್ಷಗಳಿಂದ ದೃಷ್ಟಿ ದೋಷದ ಲಕ್ಷಣಗಳನ್ನು ಹೊಂದಿದ್ದರು. ಮಂಜು ಕತ್ತಲೆಯಲ್ಲಿ ತನ್ನ ಸ್ಮಾರ್ಟ್‍ಫೋನ್ ಅನ್ನು ಅತಿಯಾಗಿ ಬಳಸುತ್ತಿದ್ದಳು. ಇದರಿಂದಾಗಿ ಆಕೆ ದೃಷ್ಟಿ ಕಳೆದುಕೊಂಡಿದ್ದಳು.

ತನ್ನ ಮಗುವನ್ನು ನೋಡಿಕೊಳ್ಳುವ ಸಲುವಾಗಿ ಆಕೆ ಬ್ಯೂಟಿಷಿಯನ್ ಕೆಲಸವನ್ನು ತೊರೆದಿದ್ದಾಳೆ. ನಂತರ ತನ್ನ ಮೊಬೈಲ್‍ನಲ್ಲೇ ಗಂಟೆಗಟ್ಟಲೆ ಕಳೆಯಲು ಪ್ರಾರಂಭಿಸಿದಳು. ಅದಾದ ಬಳಿಕ ಆಕೆಗೆ ಈ ರೋಗಲಕ್ಷಣಗಳು ಪ್ರಾರಂಭವಾದವು.

ಅದಾದ ಬಳಿಕ ಆಕೆ ವೈದ್ಯರನ್ನು ಸಂಪರ್ಕಿಸಿದಳು. ಅ ಸಂದರ್ಭದಲ್ಲಿ ಆ ವೈದ್ಯರು (Doctor) ಯಾವುದೇ ಮಾತ್ರೆಯನ್ನು ನೀಡಿಲ್ಲ. ಜೊತೆಗೆ ಚಿಕಿತ್ಸೆಯನ್ನು ನೀಡಲಿಲ್ಲ. ಬದಲಾಗಿ ಮೊಬೈಲ್ ಬಳಕೆ ಕಡಿಮೆ ಮಾಡಲು ತಿಳಿಸಿದರು. ಇದಾದ ಬಳಿಕ ಆಕೆ ಸಂಪೂರ್ಣವಾಗಿ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿದ್ದರಿಂದ ಒಂದೂವರೆ ವರ್ಷದ ಬಳಿಕ ಆಕೆಯ ಕಣ್ಣು ಸಹಜ ಸ್ಥಿತಿಗೆ ಮರಳಿತು. 

ಅತಿಯಾದ ಸ್ಮಾರ್ಟ್‍ಫೋನ್ ಬಳಕೆಯಿಂದ ಕೆಲವರು ದೃಷ್ಟಿದೋಷದ ಸಮಸ್ಯೆಗೆ ಒಳಗಾಗುತ್ತಾರೆ. ಇದನ್ನು ಸ್ಮಾರ್ಟ್‍ಫೋನ್ ಮಿಷನ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಅದರಲ್ಲೂ ರಾತ್ರಿ ಹೊತ್ತು ಲೈಟ್ ಆಫ್ ಮಾಡಿಕೊಂಡು ಸ್ಮಾರ್ಟ್‍ಫೊನ್ ನೋಡುವುದರಿಂದ ಈ ರೋಗ ಹೆಚ್ಚಾಗಿ ಬರುತ್ತದೆ. ಈ ಬಗ್ಗೆ ಹೈದರಾಬಾದ್ ಮೂಲದ ಡಾ. ಸುಧೀರ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ