ಮಂಗಳವಾರ, ಮಾರ್ಚ್ 19, 2024
ಚಿತ್ರೀಕರಣಕ್ಕೆಂದು 14 ವರ್ಷ ಬಳಿಕ ಕೇರಳಕ್ಕೆ ಬಂದಿದ್ದ ದಳಪತಿ ವಿಜಯ್ ಕಾರು ಗ್ಲಾಸ್ ಪುಡಿ ಪುಡಿ.!-ದೇವಸ್ಥಾನದಲ್ಲಿ ದೀಪ ಹಚ್ಚಲು ಹೋದ ಬಾಲಕಿ ಬೆಂಕಿ ತಗುಲಿ ಸಾವು..!-ಕೇಂದ್ರ ಸಚಿವ ಸ್ಥಾನಕ್ಕೆ ಪಶುಪತಿ ಪಾರಾಸ್ ರಾಜೀನಾಮೆ..!-ನ್ಯಾಯಲಯಕ್ಕೆ ಖುದ್ದಾಗಿ ಹಾಜರಾಗುವಂತೆ ಯೋಗ ಗುರು ಬಾಬಾ ರಾಮದೇವ್ ಗೆ ಸುಪ್ರೀಂ ಕೋರ್ಟ್ ಸೂಚನೆ..!-ಮಂಡ್ಯದಿಂದಲೇ ಸ್ಪರ್ಧಿಸುತ್ತಾರಾ ಹೆಚ್ ಡಿ ಕುಮಾರಸ್ವಾಮಿ? ಉಲ್ಟಾ ಹೊಡೆದ ರಾಜಕೀಯ ಲೆಕ್ಕಾಚಾರ..!-ಪತ್ನಿಗೆ ಅಶ್ಲೀಲ ವಿಡಿಯೋ ಕಳುಹಿಸಿದ ಪತಿಗೆ ಜೈಲು ಶಿಕ್ಷೆ ಸಹಿತ 45 ಸಾವಿರ ದಂಡ ವಿಧಿಸಿದ ನ್ಯಾಯಾಲಯ..!-ಕಾಂಗ್ರೆಸ್ ಟಿಕೆಟ್ ಆಫರ್ ಬೆನ್ನಲ್ಲೇ ಸದಾನಂದ ಗೌಡರ ಮನೆಗೆ ಬಿಜೆಪಿ ನಾಯಕರ ಭೇಟಿ..!-ಚಲಿಸುತ್ತಿದ್ದ ರೈಲಿನಿಂದ ಬಿದ್ದು ವಕೀಲ ಸಾವು..! ; ಟ್ರ್ಯಾಕ್ಟರ್-ಬೈಕ್‌ ಡಿಕ್ಕಿಯಾಗಿ ಬಾಲಕ ಸಾವು..!!-ಮೈಸೂರು, ಬೆಂಗಳೂರು ದಕ್ಷಿಣದ ಟಿಕೆಟ್ ಕಗ್ಗಂಟು-ಕಾಂಗ್ರೆಸ್ ಟಿಕೆಟ್ ಪಟ್ಟಿ ವಿಳಂಬ..!!-ಇನ್ನೂ ಕಗ್ಗಂಟಾಗಿ ಉಳಿದ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ; ಸಿದ್ದರಾಮಯ್ಯ ಇಂದು ದೆಹಲಿಗೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕಟ್ಟಡದ ಅವಶೇಷಗಳಡಿಯೇ ಮಗುವಿಗೆ ಜನ್ಮ ನೀಡಿ ಮಹಿಳೆ ಸಾವು

Twitter
Facebook
LinkedIn
WhatsApp
WhatsApp Image 2023 02 07 at 10.49.28 AM 600x330 2

ಅಂಕಾರ: ಟರ್ಕಿ (Turkey) ಮತ್ತು ಸಿರಿಯಾ (Syria) ಭಾರೀ ಭೂಕಂಪದಿಂದ ನಲುಗಿ ಹೋಗಿದೆ. ಸಾವಿರಾರು ಮಂದಿ ಸಾವನ್ನಪ್ಪಿದ್ದು, ಹಲವರು ಸಾವು- ನೋವಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಈ ಮಧ್ಯೆ ಅಚ್ಚರಿಯ ಪ್ರಸಂಗವೊಂದು ನಡೆದಿದೆ.

WhatsApp Image 2023 02 07 at 10.49.28 AM 600x330 3

ಹೌದು. ಕಟ್ಟಡದ ಅವಶೇಷಗಳಡಿ ಮಹಿಳೆಯೊಬ್ಬರು ಮಗುವಿನ ಜನ್ಮ ನೀಡಿದ್ದಾರೆ. ಮಗುವನ್ನು ರಕ್ಷಿಸಿದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣ (Social Media) ದಲ್ಲಿ ಸಖತ್ ವೈರಲ್ ಆಗುತ್ತಿದೆ. 

ವೀಡಿಯೋದಲ್ಲಿ ವ್ಯಕ್ತಿಯೊಬ್ಬ ನವಜಾತ ಶಿಶುವನ್ನು ಎತ್ತಿಕೊಂಡು ಓಡುತ್ತಿರುವುದನ್ನು ನಾವು ಕಾಣಬಹುದಾಗಿದೆ. ಈ ವೀಡಿಯೊವನ್ನು ಸಿರಿಯಾದ ಅಲೆಪ್ಪೊದಲ್ಲಿ ಚಿತ್ರೀಕರಿಸಲಾಗಿದೆ ಎಂದು ವರದಿಯಾಗಿದೆ. ರಕ್ಷಿಸಲ್ಪಟ್ಟ ನಂತರ ನವಜಾತ ಗಂಡು ಶಿಶು (Boy Baby) ಬದುಕುಳಿದಿದೆ. ಆದರೆ ಅವಶೇಷಗಳ ಅಡಿಯಲ್ಲಿ ಜನ್ಮ ನೀಡಿದ ತಾಯಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

2023 2largeimg 1616750962

ಟರ್ಕಿ ಮತ್ತು ಸಿರಿಯಾದಲ್ಲಿ ಮೂರು ಬಾರಿ ಭೂಕಂಪ ಸಂಭವಿಸಿದ ನಂತರ, ಮಂಗಳವಾರ ಮುಂಜಾನೆ 5.9 ತೀವ್ರತೆಯ ಭೂಕಂಪ ವರದಿಯಾಗಿದೆ. ಯುರೋಪಿಯನ್ ಮೆಡಿಟರೇನಿಯನ್ ಸೀಸ್ಮಾಲಾಜಿಕಲ್ ಸೆಂಟರ್ (EMSC) ಪ್ರಕಾರ ಮಧ್ಯ ಟರ್ಕಿಯಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪವು 2 ಕಿಮೀ ಆಳದಲ್ಲಿದೆ ಎಂದು ಇಎಂಎಸ್‍ಸಿ ತಿಳಿಸಿದೆ. 

ಸೋಮವಾರ ಮುಂಜಾನೆ ದಕ್ಷಿಣ ಟರ್ಕಿ ಮತ್ತು ಉತ್ತರ ಸಿರಿಯಾದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದೆ. ಇದು 2,500ಕ್ಕೂ ಹೆಚ್ಚು ಜನರ ಹತ್ಯೆಗೆ ಕಾರಣವಾಯಿತು. ಟರ್ಕಿ ಸರ್ಕಾರದ ಪ್ರಕಾರ, ಕುಸಿದ ಕಟ್ಟಡಗಳ ಅವಶೇಷಗಳ ನಡುವೆ ರಕ್ಷಕರು ಬದುಕುಳಿದವರನ್ನು ಹುಡುಕುವುದನ್ನು ಮುಂದುವರಿಸಿದ್ದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ದೇಶವು ಏಳು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿತು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

Smriti Mandhana: ಕ್ರಿಕೆಟ್ ಲೋಕದಲ್ಲಿ ಸಖತ್ ಮಿಂಚುತ್ತಿರುವ ಸ್ಮೃತಿ ಮಂಧಾನ ಬಗ್ಗೆ ನಿಮಗೆಷ್ಟು ಗೊತ್ತು ; ಈ ಮಾಹಿತಿ ಒಮ್ಮೆ ಓದಿ

Smriti Mandhana: ಕ್ರಿಕೆಟ್ ಲೋಕದಲ್ಲಿ ಸಖತ್ ಮಿಂಚುತ್ತಿರುವ ಸ್ಮೃತಿ ಮಂಧಾನ ಬಗ್ಗೆ ನಿಮಗೆಷ್ಟು ಗೊತ್ತು ; ಈ ಮಾಹಿತಿ ಒಮ್ಮೆ ಓದಿ

Smriti Mandhana: ಕ್ರಿಕೆಟ್ ಲೋಕದಲ್ಲಿ ಸಖತ್ ಮಿಂಚುತ್ತಿರುವ ಸ್ಮೃತಿ ಮಂಧಾನ ಬಗ್ಗೆ ನಿಮಗೆಷ್ಟು ಗೊತ್ತು ; ಈ ಮಾಹಿತಿ ಒಮ್ಮೆ ಓದಿ