ಕಟಪಾಡಿ: ಬೈಕ್‌ಗೆ ಟೆಂಪೋ ಢಿಕ್ಕಿ ಸವಾರ ಸ್ಥಳದಲ್ಲೇ ಸಾವು
Twitter
Facebook
LinkedIn
WhatsApp
ಕಾಪು: ಪೌರೋಹಿತ್ಯ ಕೆಲಸಕ್ಕಾಗಿ ಇನ್ನಂಜೆಯಿಂದ ಕಟಪಾಡಿ ಕಡೆಗೆ ತೆರಳುತ್ತಿದ್ದ ಬೈಕ್‌ಗೆ ಟೆಂಪೋ ಢಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕಟಪಾಡಿ ಸುಭಾಸ್ ನಗರದ ಬಳಿ ಮಂಗಳವಾರ ಬೆಳಗ್ಗೆ ನಡೆದಿದೆ.
ಇನ್ನಂಜೆ ಮಡುಂಬು ನಿವಾಸಿ ಶ್ರೀನಿವಾಸ ರಾವ್ (58) ಮೃತ ಬೈಕ್ ಸವಾರ. ಮಂಗಳವಾರ ಬೆಳಗ್ಗೆ ಕಟಪಾಡಿ – ಶಿರ್ವ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ.
ಟೆಂಪೋ ಢಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಶ್ರೀನಿವಾಸ ರಾವ್ ರಸ್ತೆಗೆ ಬಿದ್ದಿದ್ದು ತಲೆಗೆ ಗಂಭೀರ ಏಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತಕ್ಕೆ ಕಾರಣನಾದ ಟೆಂಪೋ ಚಾಲಕ ರವಿ ಮಡಿವಾಳನನ್ನು ಕಾಪು ಪೊಲೀಸರು ವಶಕ್ಕೆ ತೆಗೆದುಕೊಂಡು ತನಿಖೆ ಮುಂದುವರಿಸಿದ್ದಾರೆ.
ಮೃತರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.