ಕಾಂಗ್ರೆಸ್ ನ ಚುನಾವಣಾ ಪ್ರಣಾಳಿಕೆ ಬಿಡುಗಡೆ; ಯಾವೆಲ್ಲಾ ಗ್ಯಾರಂಟಿ ಘೋಷಣೆ

ನವದೆಹಲಿ: 2024 ರ ಲೋಕಸಭಾ ಚುನಾವಣೆಗೆ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಗೆ ಪ್ರತಿಷ್ಠೆಯ ಕಣವಾಗಿದೆ. ಕಾಂಗ್ರೆಸ್ ಈಗಾಗಲೇ ಹಲವು ಗ್ಯಾರಂಟಿ ಘೋಷಣೆಯ ಮೂಲಕ ಹಲವು ಭರವಸೆಯನ್ನ ದೇಶದ ಜನರಿಗೆ ನೀಡಿದ್ದು, ಚುನಾವಣಾ ಪ್ರಣಾಳಿಕೆಯನ್ನ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಮಲ್ಲಿಕಾರ್ಜುನ್ ಖರ್ಗೆ ಬಿಡುಗಡೆ ಮಾಡಿದ್ದಾರೆ.
ದೆಹಲಿಯ ಎಐಸಿಸಿ ಕಚೇರಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಇಂದು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಕಾಂಗ್ರೆಸ್ ಪಕ್ಷ ಈಗಾಗಲೇ ಮಹಿಳೆಯರಿಗೆ, ಯುವಕರ ಹಾಗೂ ರೈತರ ಸಮುದಾಯಕ್ಕೆ ಗ್ಯಾರಂಟಿ ಘೋಷಣೆ ಮಾಡಿದ್ದು, ಇದೀಗ ಬಿಜೆಪಿಗೆ ಠಕ್ಕರ್ ಕೊಡಲು ಮತಾರರ ಓಲೈಸಲು ಭರಪೂರ ಯೋಜನೆಗಳನ್ನು ಘೋಷಿಸಿದೆ. ಕಾಂಗ್ರೆಸ್ ಕೂಡ ಚುನಾವಣಾ ರ್ಯಾಲಿಗಳಲ್ಲಿ ಜನರಿಗೆ ಹಲವು ಭರವಸೆಗಳನ್ನು ನೀಡಿದೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪಕ್ಷವು ಪಂಚ ನ್ಯಾಯ ಮತ್ತು 25 ಭರವಸೆಗಳನ್ನು ಭರವಸೆ ನೀಡಿದೆ. ‘ಯುವ ನ್ಯಾಯ’, ‘ನಾರಿ ನ್ಯಾಯ’, ‘ಕಿಸಾನ್ ನ್ಯಾಯ’, ‘ಶ್ರಮಿಕ್ ನ್ಯಾಯ’ ಮತ್ತು ‘ಹಿಸ್ಸೆದಾರಿ ನ್ಯಾಯ’ ಹಾಗೂ ಖಾತರಿಗಳು ಸೇರಿದಂತೆ ಪಂಚ ನ್ಯಾಯವನ್ನ ಒತ್ತಿ ಹೇಳಿದೆ. ಈಗಾಗಲೇ ಚುನಾವಣಾ ಪ್ರಚಾರದ ವೇಳೆ ಹಲವು ಗ್ಯಾರಂಟಿಗಳನ್ನ ನೀಡಿದ್ದ ಕಾಂಗ್ರೆಸ್, ಇಂದು ಬಿಡುಗಡೆ ಮಾಡಿದ್ದ ಪ್ರಣಾಳಿಕೆಯಲ್ಲಿ ಒಟ್ಟು 25 ಗ್ಯಾರಂಟಿಗಳ ಭರವಸೆಯನ್ನ ನೀಡಿದೆ. ಇನ್ನೂ ಉದ್ಯೋಗ ಸೃಷ್ಟಿಯ ಭರವಸೆಯನ್ನು ನೀಡಿದ್ದು, ಕಾಂಗ್ರೆಸ್ ಪಕ್ಷವು ದೇಶಾದ್ಯಂತ ಜಾತಿ ಆಧಾರಿತ ಜನಗಣತಿ ನಡೆಸುವುದಾಗಿ ಭರವಸೆ ನೀಡಿದೆ. 2024ರಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದರೆ ಬಡ ಕುಟುಂಬದ ಮಹಿಳೆಯರಿಗೆ ಪ್ರತಿ ವರ್ಷ ಲಕ್ಷ ರೂ.ಗಳ ನೆರವು ಹಾಗೂ ರೈತರ ಸಾಲ ಮನ್ನಾದ ಜೊತೆಗೆ ಬೆಳೆಗಳಿಗೆ ಬೆಂಬಲ ಬೆಲೆ ನೀಡುವ ಭರವಸೆಯನ್ನ ಕೈ ಪಡೆ ನೀಡಿದೆ.
30 ಲಕ್ಷ ಉದ್ಯೋಗ ಸೃಷ್ಟಿ
ಪ್ರಶ್ನೆಪತ್ರಿಕೆ ತಡೆಗೆ ಎಲ್ಲ ರೀತಿಯ ಕ್ರಮ
ಗುತ್ತಿಗೆ ಆಧಾರಿತ ಉದ್ಯೋಗಿಗಳ ರಕ್ಷಣೆ
ಯುವಕರಿಗೆ 5 ಸಾವಿರ ರೂ. ಸ್ಟಾರ್ಟಪ್ ಫಂಡ್
ನಾರಿ ನ್ಯಾಯ ಬಡಕುಟುಂಬದ ಒಬ್ಬ ಮಹಿಳೆಗೆ ವಾರ್ಷಿಕ 1 ಲಕ್ಷ ರೂ. ನೆರವು ಕೇಂದ್ರ ಸರ್ಕಾರದ ಉದ್ಯೋಗಗಳಲ್ಲಿ ಸ್ತ್ರೀಯರಿಗೆ ಶೇ.50ರಷ್ಟು ಮೀಸಲಾತಿ ಆಶಾ, ಬಿಸಿಯೂಟ ಕಾರ್ಯಕರ್ತೆಯರ ಸಂಬಳ ದ್ವಿಗುಣ ಗ್ರಾಮೀಣ ಭಾಗದ ಮಹಿಳಾ ಕಾರ್ಮಿಕರಿಗೆ ಕಾನೂನು ನೆರವು ಮಹಿಳಾ ಕಾರ್ಮಿಕರ ಹಾಸ್ಟೆಲ್‌ಗಳನ್ನು ಎರಡು ಪಟ್ಟು ಹೆಚ್ಚಿಸುವುದು ಕಿಸಾನ್ ನ್ಯಾಯ ಎಂ.ಎಸ್.ಸ್ವಾಮಿನಾಥನ್ ಆಯೋಗದ ಶಿಫಾರಿಸನಂತೆ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಕಾನೂನು ರೈತರ ಸಾಲ ಮನ್ನಾ ಮಾಡಲು ಶಾಶ್ವತ ಆಯೋಗ ರಚನೆ ಬೆಳೆ ವಿಮೆ ಹಣವನ್ನು 30 ದಿನಗಳಲ್ಲಿ ನೇರವಾಗಿ ರೈತರ ಖಾತೆಗಳಿಗೆ ವರ್ಗಾವಣೆ ರೈತರ ಸ್ನೇಹಿಯಾಗಿ ಕೃಷಿ ರಫ್ತು ನೀತಿ ರೂಪಿಸುವುದು ಕೃಷಿ ಸಲಕರಣೆಗಳಿಗೆ ಜಿಎಸ್‌ಟಿಯಿಂದ ಮುಕ್ತಿ
30 ಲಕ್ಷ ಉದ್ಯೋಗ ಸೃಷ್ಟಿ
ಪ್ರಶ್ನೆಪತ್ರಿಕೆ ತಡೆಗೆ ಎಲ್ಲ ರೀತಿಯ ಕ್ರಮ
ಗುತ್ತಿಗೆ ಆಧಾರಿತ ಉದ್ಯೋಗಿಗಳ ರಕ್ಷಣೆ
ಯುವಕರಿಗೆ 5 ಸಾವಿರ ರೂ. ಸ್ಟಾರ್ಟಪ್ ಫಂಡ್
ನಾರಿ ನ್ಯಾಯ
ಬಡಕುಟುಂಬದ ಒಬ್ಬ ಮಹಿಳೆಗೆ ವಾರ್ಷಿಕ 1 ಲಕ್ಷ ರೂ. ನೆರವು
ಕೇಂದ್ರ ಸರ್ಕಾರದ ಉದ್ಯೋಗಗಳಲ್ಲಿ ಸ್ತ್ರೀಯರಿಗೆ ಶೇ.50ರಷ್ಟು ಮೀಸಲಾತಿ
ಆಶಾ, ಬಿಸಿಯೂಟ ಕಾರ್ಯಕರ್ತೆಯರ ಸಂಬಳ ದ್ವಿಗುಣ
ಗ್ರಾಮೀಣ ಭಾಗದ ಮಹಿಳಾ ಕಾರ್ಮಿಕರಿಗೆ ಕಾನೂನು ನೆರವು
ಮಹಿಳಾ ಕಾರ್ಮಿಕರ ಹಾಸ್ಟೆಲ್‌ಗಳನ್ನು ಎರಡು ಪಟ್ಟು ಹೆಚ್ಚಿಸುವುದು.
ಕಿಸಾನ್ ನ್ಯಾಯ ಎಂ.ಎಸ್.ಸ್ವಾಮಿನಾಥನ್ ಆಯೋಗದ ಶಿಫಾರಿಸನಂತೆ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಕಾನೂನು
ರೈತರ ಸಾಲ ಮನ್ನಾ ಮಾಡಲು ಶಾಶ್ವತ ಆಯೋಗ ರಚನೆ
ಬೆಳೆ ವಿಮೆ ಹಣವನ್ನು 30 ದಿನಗಳಲ್ಲಿ ನೇರವಾಗಿ ರೈತರ ಖಾತೆಗಳಿಗೆ ವರ್ಗಾವಣೆ
ರೈತರ ಸ್ನೇಹಿಯಾಗಿ ಕೃಷಿ ರಫ್ತು ನೀತಿ ರೂಪಿಸುವುದು
ಕೃಷಿ ಸಲಕರಣೆಗಳಿಗೆ ಜಿಎಸ್‌ಟಿಯಿಂದ ಮುಕ್ತಿ
ಶ್ರಮಿಕ ನ್ಯಾಯ
ನರೇಗಾ ದಿನಗೂಲಿ ಕಾರ್ಮಕರ ದಿನಗೂಲಿ 400 ರೂ.ಗೆ ಏರಿಕೆ ಪ್ರತಿಯೊಬ್ಬರಿಗೂ 25 ಲಕ್ಷ ರೂ.ವರೆಗೆ ಆರೋಗ್ಯ ವಿಮೆ ನರೇಗಾ ರೀತಿ ನಗರಗಳಲ್ಲೂ ಉದ್ಯೋಗ ಖಾತ್ರಿ ಯೋಜನೆ ಅಸಂಘಟಿತ ಕಾರ್ಮಿಕರಿಗೆ ಜೀವ ವಿಮೆ ಸರ್ಕಾರಿ ನೌಕರರಿಗೆ ರಕ್ಷಣೆ, ಪಾರದರ್ಶಕತೆಗೆ ಆದ್ಯತೆ
ಸಮಾನತೆಯ ನ್ಯಾಯ
ಸಾಮಾಜಿಕ ಹಾಗೂ ಆರ್ಥಿಕ ಸಮಾನತೆಗಾಗಿ ದೇಶಾದ್ಯಂತ ಜಾತಿ ಗಣತಿ
ಎಸ್‌ಸಿ, ಎಸ್‌ಟಿ, ಒಬಿಸಿ ಮೀಸಲಾತಿಯ ಶೇ.50ರ ಮತಿ ತೆಗೆದುಹಾಕಲಾಗುವುದು
ಎಸ್‌ಸಿ, ಎಸ್‌ಟಿಯವರಿಗೆ ವಿಶೇಷ ಬಜೆಟ್ ಮಂಡನೆ
ಅರಣ್ಯ ಹಕ್ಕುಗಳ ಕಾಯ್ದೆಯ ವ್ಯಾಜ್ಯಗಳನ್ನು 1 ವರ್ಷದಲ್ಲಿ ವಿಲೇವಾರಿ