
ಪ್ರಶಸ್ತಿಗಳ ವಿಷಯದಲ್ಲಿ ಕೇಂದ್ರ ಸರಕಾರವು ತಾರತಮ್ಯ ಮಾಡುತ್ತಿದೆ ಎಂದು ದಕ್ಷಿಣದ ಖ್ಯಾತ ಹಿರಿಯ ನಟಿ ಜಯಸುಧಾ ಗಂಭೀರ ಆರೋಪ ಮಾಡಿದ್ದಾರೆ. ನೇರವಾಗಿ ಅವರು ಕಂಗನಾ ರಣಾವತ್ ಅವರ ಹೆಸರನ್ನೇ ಪ್ರಸ್ತಾಪಿಸಿ, ‘ಕಂಗನಾ ಹತ್ತು ಸಿನಿಮಾಗಳಲ್ಲೂ ನಟಿಸಿಲ್ಲ. ಅವರ ಯಾವ ಸಾಧನೆಯನ್ನು ಪರಿಗಣಿಸಿ ಪದ್ಮಶ್ರೀ ಪ್ರಶಸ್ತಿ ನೀಡಿದ್ದಾರೆ. ನೂರಾರು ಚಿತ್ರಗಳಲ್ಲಿ ನಟಿಸಿರುವ ದಕ್ಷಿಣದ ಕಲಾವಿದರಿಗೆ ಯಾಕೆ ಪದ್ಮಶ್ರೀ’ ಇಲ್ಲವೆಂದು ಹೇಳಿದ್ದಾರೆ.
ಬಾಲಕೃಷ್ಣ ಅವರು ನಡೆಸಿಕೊಡುವ ‘ಅನ್ ಸ್ಟಾಪಬಲ್ ಸೀಸನ್ 2’ನಲ್ಲಿ ಮಾತನಾಡಿದ ಜಯಸುಧಾ ದಕ್ಷಿಣದವರಿಗೆ ಮತ್ತು ಉತ್ತರದವರಿಗೆ ತಾರತಮ್ಯ ಮಾಡಲಾಗುತ್ತಿದೆ ಎಂದು ಕೇಂದ್ರ ಸರಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ‘ಐದತ್ತು ಸಿನಿಮಾಗಳನ್ನ ಮಾಡಿರುವವರಿಗೇ ಪದ್ಮ ಪ್ರಶಸ್ತಿಗಳು ದೊರೆಯುತ್ತವೆ ಅಂತಾದರೆ, ನಾವು ಲೆಕ್ಕಕ್ಕೆ ಇಲ್ಲ ಅವರಿಗೆ’ ಎಂದು ಕೇಂದ್ರ ಸರಕಾರವನ್ನು ತರಾಟೆಗೆ ತಗೆದುಕೊಂಡಿದ್ದಾರೆ.
ಮಹಿಳಾ ನಿರ್ದೇಶಕಿಯರ ಪರವಾಗಿಯೂ ಮಾತನಾಡಿರುವ ಅವರು, ‘ವಿಜಯ ನಿರ್ಮಲಾ ಗಿನ್ನಿಸ್ ದಾಖಲೆ ಬರೆದ ನಿರ್ದೇಶಕಿ. ಈವರೆಗೂ ಅವರಿಗೆ ಸಿಗಬೇಕಾದ ಗೌರವ ಸಿಕ್ಕಿಲ್ಲ. ಹಾಗಾದರೆ ನಾವು ಏನು ಅಂದುಕೊಳ್ಳಬೇಕು?’ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಈ ತಾರತಮ್ಯದ ವಿರುದ್ಧ ಧ್ವನಿ ಎತ್ತಲೇಬೇಕು. ಇಲ್ಲವಾದರೆ, ಇದು ಆಗುತ್ತಲೇ ಇರುತ್ತದೆ ಎಂದು ಟಾಕ್ ಶೋ ನಲ್ಲಿ ನೇರವಾಗಿಯೇ ಮಾತನಾಡಿದ್ದಾರೆ ಜಯಸುಧಾ.
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist