ಬುಧವಾರ, ಜೂನ್ 26, 2024
ಸಿಬಿಐನಿಂದ ಸಿಎಂ ಅರವಿಂದ್​ ಕೇಜ್ರಿವಾಲ್​ ಬಂಧನ..!-ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆ 27 ಜೂನ್ ರಂದು ಶಾಲಾ ಮಕ್ಕಳಿಗೆ ರಜೆ ಘೋಷಣೆ-Haridwar: 13 ವರ್ಷದ ಬಾಲಕಿ ಸಾಮೂಹಿಕ ಅತ್ಯಾಚಾರ; ಹರಿದ್ವಾರ ಹೆದ್ದಾರಿಯಲ್ಲಿ ಮೃತದೇಹ ಪತ್ತೆ-ಹಾಲಿನ ದರ ಏರಿಕೆ ಬಳಿಕ ಹೋಟೆಲ್ ಗಳಲ್ಲಿ ಟಿ- ಕಾಫಿ ದರವೂ ಏರಿಕೆ ಸಾಧ್ಯತೆ..!-Instagram ಪೋಸ್ಟ್‌ಗಳನ್ನು ಅಳಿಸಿ, ವಿಚ್ಛೇದನದ ವದಂತಿಗಳನ್ನು ಹುಟ್ಟುಹಾಕಿದ ನಟ ಜಯಂ ರವಿ ಪತ್ನಿ?-ಚಿಕನ್ ಕಬಾಬ್ ಗೆ ಕೃತಕ ಕಲರ್ ಬಳಸಿದರೆ 7 ವರ್ಷ ಜೈಲು ಶಿಕ್ಷೆ ಮತ್ತು 10 ಲಕ್ಷದವರೆಗೆ ದಂಡ ಫಿಕ್ಸ್..!-Mangalore : ಉಳ್ಳಾಲದಲ್ಲಿ ಗೋಡೆ ಕುಸಿದು ಮಕ್ಕಳ ಸಹಿತ ನಾಲ್ವರು ಬಲಿ-Tzachi Hanegbi - ಗಾಜಾದಲ್ಲಿ ಹಮಾಸ್ ಸರ್ಕಾರವನ್ನು ಬದಲಿಸುವ ಯೋಜನೆಯನ್ನು ಇಸ್ರೇಲ್ ಹೊರತರಲಿದೆ-ಲೋಕಸಭೆ ವಿರೋಧ ಪಕ್ಷದ ನಾಯಕನಾಗಿ ರಾಹುಲ್ ಗಾಂಧಿ ಆಯ್ಕೆ.!-ಅಯೋಧ್ಯೆಯಲ್ಲಿ ಮೊದಲ ಮಳೆಗೆ ಸೋರಿದ ರಾಮ ಮಂದಿರದ ಗರ್ಭಗುಡಿಯ ಮೇಲ್ಛಾವಣಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಒಂದೇ ದಿನ ಪ್ರಚಾರ- 1 ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದು ಗೆದ್ದ ಡಿಕೆಶಿ

Twitter
Facebook
LinkedIn
WhatsApp
V Sunil Kumar 1200 6

ಬೆಂಗಳೂರು: ಕನಕಪುರ (Kanakapura) ಕ್ಷೇತ್ರದ ಕಾಂಗ್ರೆಸ್ (Congress) ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಿಕೆ ಶಿವಕುಮಾರ್ (DK Shivakumar) 1 ಲಕ್ಷಕ್ಕೂ ಅಧಿಕ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಈ ಬಾರಿ ಡಿಕೆ ಶಿವಕುಮಾರ್ ಅವರನ್ನು ಸೋಲಿಸಲು ಬಿಜೆಪಿ ಸಾಕಷ್ಟು ಪ್ರಯತ್ನ ಮಾಡಿತ್ತು. ಈ ಹಿನ್ನೆಲೆಯಲ್ಲೇ ಬಿಜೆಪಿಯ (BJP) ಪ್ರಮುಖ ನಾಯಕ ಆರ್. ಅಶೋಕ್ (R Ashok) ಅವರನ್ನು ಕನಕಪುರ ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿ ಮಾಡಿತ್ತು. ಆದರೆ ಡಿಕೆ ಶಿವಕುಮಾರ್ ಬಿಜೆಪಿಗೆ ತಿರುಗೇಟು ನೀಡಿ, ನಾಮಪತ್ರ ಸಲ್ಲಿಸಿದ ಬಳಿಕ ಚುನಾವಣಾ ಪ್ರಚಾರಕ್ಕೆ ಬರುವುದಿಲ್ಲ ಎಂದು ಹೇಳಿದ್ದರು.

ಅದಾದ ಬಳಿಕವೂ ಡಿಕೆಶಿ ಮಾತಿನಂತೆ ನಡೆದುಕೊಂಡಿದ್ದು, ಪ್ರಚಾರದ ಕೊನೆಯ ದಿನವಷ್ಟೇ ಕನಕಪುರ ಕ್ಷೇತ್ರಕ್ಕೆ ಬಂದು ಭರ್ಜರಿ ಪ್ರಚಾರ ನಡೆಸಿದ್ದರು. ಇದೀಗ ಕನಕಪುರ ಕ್ಷೇತ್ರದ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಮತದಾರರು ಡಿಕೆಶಿಯ ಕೈಹಿಡಿದಿದ್ದಾರೆ.

ಕನಕಪುರ ಕ್ಷೇತ್ರದಲ್ಲಿ ಬಿಜೆಪಿಯ ಆರ್. ಅಶೋಕ್ ಹಾಗೂ ಜೆಡಿಎಸ್‍ನ (JDS) ಬಿ. ನಾಗರಾಜು ವಿರುದ್ಧ ಡಿಕೆ ಶಿವಕುಮಾರ್ ಸ್ಪರ್ಧಿಸಿದ್ದರು. ಆರ್. ಅಶೋಕ್ 3ನೇ ಸ್ಥಾನ ಪಡೆದಿದ್ದಾರೆ. 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ