ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ, ಚೆಲ್ಲಾಪಿಲ್ಲಿಯಾಗಿ ಬಿದ್ದ ಶವಗಳು
ಕಾರವಾರ: ಉತ್ತರ ಕನ್ನಡ(Uttara Kannada) ಜಿಲ್ಲೆ ಭಟ್ಕಳ ತಾಲೂಕಿನ ಹಾಡವಳ್ಳಿ(hadavalli Village) ಬಳಿ ನಿನ್ನೆ(ಫೆ.24) ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ(murder) ಮಾಡಲಾಗಿದೆ. ಪತಿ ಶಂಭು ಭಟ್(65) ಪತ್ನಿ ಮಾದೇವಿ ಭಟ್(40) ಮಗ ರಾಜೀವ್ ಭಟ್(34) ಸೊಸೆ ಕುಸುಮಾ ಭಟ್(30) ಎನ್ನುವರನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಅದೃಷ್ಟವಶಾತ್ ಕುಸುಮಾ ದಂಪತಿಯ ಮಗು ಬಚಾವ್ ಆಗಿದೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹಾಡವಳ್ಳಿ ಗ್ರಾಮದ ಸಮೀಪ ಒಂದೇ ಕುಟುಂಬದ ನಾಲ್ವರನ್ನು ಕತ್ತಿಯಲ್ಲಿ ಕಡಿದು ಭೀಕರವಾಗಿ ಕೊಲೆ ಮಾಡಲಾಗಿದೆ. ಶವಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಹಿರಿಯ ಮಗನ ಪತ್ನಿ & ಆಕೆಯ ಕುಟುಂಬಸ್ಥರು ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಶಂಭು ಭಟ್ ಹಿರಿಯ ಮಗ ಕಿಡ್ನಿ ವೈಫಲ್ಯದಿಂದ ಮೃತಪಟ್ಟಿದ್ದರು. ಪತಿ ಸಾವಿನ ಬಳಿಕ ವಿದ್ಯಾ ಭಟ್ ತವರು ಮನೆ ಸೇರಿದ್ದಳು. ಬಳಿಕ ಜೀವನಾಂಶ ಹಾಗೂ ಆಸ್ತಿ ವಿಚಾರದಲ್ಲಿ ಶಂಭು ಭಟ್ ಹಾಗೂ ವಿದ್ಯಾ ಭಟ್ ತವರು ಮನೆಯವರ ನಡುವೆ ಗಲಾಟೆ ನಡೆದಿತ್ತು. ಜೀವನಾಂಶ ಕೊಡಲು ನಿರಾಕರಿಸಿದ್ದರಿಂದ ಕೊಲೆ ಮಾಡಲಾಗಿದೆ. ಸದ್ಯ ಶ್ರೀಧರ್ ಭಟ್ನನ್ನು ಭಟ್ಕಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.