ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಒಂಟಿ ಸಲಗ ದಾಳಿ, ಮಹಿಳೆ ಸ್ಥಳದಲ್ಲಿಯೇ ಸಾವು

Twitter
Facebook
LinkedIn
WhatsApp
Its difficult to look away from MalaikaArora in Hanas green sheer dress in Aap Jesa Koi song from film Action Hero 5 4

ಹೇಳಿ ಕೇಳಿ ಅದು ಒಂಟಿ ಸಲಗ ತಿರುಗಾಡೋ ಜಾಗ,‌ ಆದ್ರೂ ಆ ತಾಯಿ ತನ್ನ ಮಗನಿಗೆ ಹಸಿವಾಗಿದೆ ಅಂತ ಊಟ ಕೊಡಲು ಹೊರಟೇ ಬಿಟ್ಳು,‌ ಇನ್ನೇನು ಮಗನಿಗೆ ಬುತ್ತಿ ಕೈ ಸೇರಬೇಕು,‌ ಅದಕ್ಕೂ ಮಂಚೆ ಆ ತಾಯಿ ಕಾಡಾನೆ ದಾಳಿಗೆ (Wild Elephant Attack) ಸಿಲುಕಿ ದುರ್ಮಣಕ್ಕಿಡಾಗಿದ್ದಾಳೆ. ಹೌದು, ಇಂತಹ ದಾರುಣ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಸಮೀಪದ ಹಕ್ಕಿಪಿಕ್ಕಿ ಕಾಲೋನಿಯ ಸಮೀಪ ಭಾನುವಾರ ಮಧ್ಯಾಹ್ನ ನಡೆದಿದೆ. ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ (Bannerghatta National Park) ಸಮೀಪ ಇರುವ ಈ ಹಳ್ಳಿಗೆ ಮೊದಲಿ‌ನಿಂದಲೂ ಚಿರತೆ, ಹುಲಿ, ಆನೆಗಳ ಕಾಟ ಇದ್ದಿದ್ದೇ. ಆದರೆ ಕಾಡು ಪ್ರಾಣಿಗಳಿಂದ ಅಷ್ಟಾಗಿ ಸಾವು ನೋವು ಸಂಭವಿಸಿರಲಿಲ್ಲ, ಕೆಲ ದಿನಗಳ‌‌ ಹಿಂದೆ ಕಾಣಿಸಿಕೊಂಡಿರುವ ಒಂಟಿ ಸಲಗ ಹಲವಾರು ಬಾರಿ ಮನುಷ್ಯರ ಮೇಲೆ ಅಟ್ಯಾಕ್ ಮಾಡಿದೆ.‌ ಮಗನಿಗಾಗಿ ಬುತ್ತಿ ಕೊಡಲು ಹೊರಟಿದ್ದ 48 ವರ್ಷದ ನಾಗಮ್ಮ ಕಾಡಾನೆ ದಾಳಿಗೆ ಸಾವನ್ನಪ್ಪಿದ್ದಾಳೆ. ಆನೆ ದಾಳಿಗೆ ತುತ್ತಾಗಿ ಮೃತಪಟ್ಟಿದ್ದ (Death) ತನ್ನ ತಾಯಿಯ (Mother) ಸ್ಥಿತಿ ನೋಡಿ ಮಗನ ಆಕ್ರಂದನ ಮುಗಿಲು ಮುಟ್ಟಿತ್ತು.

ಕೆಲ ದಿನಗಳ ಹಿಂದಷ್ಟೇ ವಾಕಿಂಗ್ ಮಾಡಲು ತೆರಳಿದ್ದವರ ಮೇಲೆ ಅಟ್ಯಾಕ್ ಮಾಡಿದ್ದ ಈ ಒಂಟಿ ಸಲಗ ಅವರನ್ನು ತನ್ನ ಕಾಲ ಕೆಳಗೆ ತುಳಿಯಲು ಹವಣಿಸಿತ್ತು. ಹೀಗಾಗಿ ಹಳ್ಳಿಗರು ಸಂಜೆಯಾದರೇ ಸಾಕು ಹೊರ ಬರುತ್ತಿರಲಿಲ್ಲ, ಹಾಗೆಯೇ ಒಂಟಿಯಾಗಿ ಓಡಾಡಲೂ ಹೆದರುತ್ತಿದ್ರು, ಇದರ ಮಧ್ಯೆ ನಾಗಮ್ಮ ಅದ್ಯಾವುದನ್ನೂ ಲೆಕ್ಕಿಸದೇ ತನ್ನ ಮಗನಿಗೆ ಹಸಿವಾಗಿದೆ, ಬೇಗ ಟಿಫೀನ್ ಕೊಡಬೇಕು ಅಂತ ಹೊರಟಿದ್ದಾಳೆ.

ಧರಣಿ ಮಂಡಲ ಮಧ್ಯದೊಳಗೆ ಒಂದು ಬಿನ್ನಹ… ಒಂದು ನಿಮಿಷದಿ ತುತ್ತು ಕೊಟ್ಟು ಬಂದು ನಾನಿಲ್ಲಿ ನಿಲ್ಲುವೆ ಎಂದರೂ ಕೇಳಲಿಲ್ಲ ಗಜರಾಜ!

ಬನ್ನೇರುಘಟ್ಟ ಬಯಲಾಜಿಕಲ್ ಪಾರ್ಕ್ ಹಿಂಭಾಗ ಹೋಗುತ್ತಿದ್ದಂತೆ ಗಿಡ ಮರಗಳ ಮಧ್ಯೆಯಿಂದ ಬಂದ ಕಾಡಾನೆ ಸೊಂಡಿಲಿನಿಂದ ಅಟ್ಯಾಕ್ ಮಾಡಿದೆ. ಆನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ನಾಗಮ್ಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಬಹಳ ಹೊತ್ತಾದ್ರೂ ತಾಯಿ ಬರಲಿಲ್ಲ ಅಂತ ಹುಡುಕುತ್ತಿದ್ದ ಕುಟುಂಬಸ್ಥರಿಗೆ ಕಾಡಿನ‌ ಸಮೀಪ ನಾಗಮ್ಮ ಶವ ಸಿಕ್ಕಾಗ ನಡೆದಿರುವ ಘಟನೆ ಗೊತ್ತಾಗಿದೆ.

ಘಟನೆ ಬಳಿಕ ಗ್ರಾಮಸ್ಥರೆಲ್ಲರೂ ಬನ್ನೇರುಘಟ್ಟ ಅರಣ್ಯಾಧಿಕಾರಿಗಳ‌ ಕಚೇರಿಗೆ‌ ಮುತ್ತಿಗೆ ಹಾಕಿದ್ದಾರೆ. ಪ್ರಾಣಿಗಳಿಂದಾಗಿ ಜನರ ಪ್ರಾಣ ಹೋಗ್ತಾ ಇದ್ರೂ ಅಧಿಕಾರಿಗಳು ಯಾಕೆ ತಲೆ ಕೆಡಿಸಿಕೊಳ್ತಿಲ್ಲ, ಇನ್ನೆಷ್ಟು ಗ್ರಾಮಸ್ಥರ ಪ್ರಾಣಗಳು ಹೋಗಬೇಕು ಅಂತ ಪ್ರಶ್ನೆ ಮಾಡಿ, ಕೂಡಲೇ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ. ಪರಿಹಾರಕ್ಕೆ ಒಪ್ಪಿಕೊಂಡಿರುವ ಬನ್ನೇರುಘಟ್ಟ ಪಾರ್ಕ್ ಆಡಳಿತ ಮಂಡಳಿ 15 ಲಕ್ಷ ರೂಪಾಯಿ ಪರಿಹಾರ ಕೊಡುವುದಾಗಿ ವಾಗ್ದಾನ ಮಾಡಿದ್ದಾರೆ. ಸದ್ಯ ಪ್ರಕರಣ‌ ದಾಖಲಿಸಿಕೊಂಡಿರುವ ಬನ್ನೇರುಘಟ್ಟ ಪೊಲೀಸರು, ಕಾಡಾನೆ ಸ್ತಳಾಂತರಕ್ಕೆ ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist