ಐಪಿಎಲ್ ವೇದಿಕೆಯಲ್ಲಿ ಮೋಡಿ ಮಾಡಿದ ರಶ್ಮಿಕಾ ಮಂದಣ್ಣ, ತಮನ್ನ
ಅಹಮ್ಮದಾಬಾದ್(ಮಾ.31): ವಿಶ್ವದ ಅತೀ ದೊಡ್ಡ ಚುಟುಕು ಕ್ರಿಕೆಟ್ ಹಬ್ಬ ಐಪಿಎಲ್ 2023ಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ಅಹಮ್ಮದಾಬಾದ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ವರ್ಣರಂಜಿತ ಕಾರ್ಯಕ್ರಮ ಅಭಿಮಾನಿಗಳನ್ನು ಕುಣಿಸಿತು. ಆರಂಭದಲ್ಲಿ ಬಾಲಿವುಡ್ ಪ್ಲೇ ಬ್ಯಾಕ್ ಸಿಂಗ್ ಅರ್ಜಿತ್ ಹಾಡಿನೊಂದಿಗೆ ಒಪನಿಂಗ್ ಸೆರೆಮನಿ ಆರಂಭಗೊಂಡಿತು. ಒಂದರ ಮೇಲೊಂದರಂತೆ ಜನಪ್ರಿಯ ಹಾಡುಗಳು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು. ಪಠಾಣ್ ಚಿತ್ರದ ಹಾಡು ಝೂಮೇ ಜೋ ಹಾಡು, ಬಳಿಕ ಕೇಸರಿಯಾ, ಕಬೀರಾ ಹಾಡು ನೆರೆದಿದ್ದ ಅಭಿಮಾನಿಗಳ ಮನ ತಣಿಸಿತು.
ವೇದಿಕೆಯಲ್ಲಿ ಅರ್ಜಿತ್ ಒಂದೊಂದೆ ಹಾಡಿನ ಮೂಲಕ ಜನರನ್ನು ರಂಜಿಸುತ್ತಿದ್ದರೆ, ಇತ್ತ ಕ್ರೀಡಾಂಗಣದಲ್ಲಿ ಅಭಿಮಾನಿಗಳ ಚಪ್ಪಾಳೆ, ಶಿಳ್ಳೆ ಜೋರಾಯಿತು. ಅಂತಿಮ ಹಾಡಿನಲ್ಲಿ ಅರ್ಜಿತ್ ಸಿಂಗ್, ತೆರೆದ ವಾಹನದ ಮೂಲಕ ಕ್ರೀಡಾಂಗಣ ಸುತ್ತು ಹಾಕಿದರು. ಹಾಡಿನ ಮೂಲಕ ಅಭಿಮಾನಿಗಳತ್ತ ಕೈಬೀಸುತ್ತಾ ಅರ್ಜಿತ್ ಸಿಂಗ್ ಎಲ್ಲರನ್ನು ರಂಜಿಸಿದರು.
Sound ?@iamRashmika gets the crowd going with an energetic performance ?
— IndianPremierLeague (@IPL) March 31, 2023
Drop an emoji to describe this special #TATAIPL 2023 opening ceremony ? pic.twitter.com/EY9yVAnSMN
ಅರ್ಜಿತ್ ಸಿಂಗ್ ಬಳಿಕ ನಟಿ ತಮನ್ನ ಭಾಟಿಯಾ ಅದ್ಭುತ ಡ್ಯಾನ್ಸ್ ಮನಸೂರೆಗೊಂಡಿತು. ಇನ್ನು ನಟಿ ರಶ್ಮಿಕಾ ಮಂದಣ್ಣ ಪುಷ್ಪಾ ಚಿತ್ರದ ಸಾಮಿ ಸಾಮಿ ಡ್ಯಾನ್ಸ್ನೊಂಂದಿಗೆ ಮತ್ತೆ ಅಭಿಮಾನಿಗಳಿಗಳ ಮೋಡಿ ಮಾಡಿದರು. ಅದ್ಧೂರಿ ಕಾರ್ಯಕ್ರಮದ ಮೂಲಕ ದೇಶದಲ್ಲಿ ಕ್ರಿಕೆಟ್ ಕಿಚ್ಚು ಆರಂಭಗೊಂಂಡಿತು.
ಕಾರ್ಯಕ್ರಮದಲ್ಲಿ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ರಾಜೀವ್ ಶುಕ್ಲಾ ಸೇರಿದಂತೆ ಬಿಸಿಸಿಐ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಐಪಿಎಲ್ ಟೂರ್ನಿ 50ಕ್ಕೂ ಹೆಚ್ಚು ದಿನಗಳ ಕಾಲ 10 ತಂಡಗಳ ನಡುವೆ ಟ್ರೋಫಿಗಾಗಿ ಕಾದಾಟ ನಡೆಯಲಿದೆ. 16ನೇ ಆವೃತ್ತಿಯು ಹಲವು ಹೊಸತುಗಳೊಂದಿಗೆ ಪ್ರೇಕ್ಷಕರ ಮುಂದೆ ಬರಲಿದೆ. ‘ಇಂಪ್ಯಾಕ್ಟ್’ ಆಟಗಾರ ನಿಯಮ, ಟಾಸ್ ಬಳಿಕ ಆಡುವ ಹನ್ನೊಂದರ ಬಳಗದ ನಿರ್ಧಾರ, ವೈಡ್, ನೋಬಾಲ್ಗೂ ಡಿಆರ್ಎಸ್ ಬಳಕೆ ಆಯ್ಕೆ ಹೀಗೆ ಕೆಲ ಹೊಸ ನಿಯಮಗಳು ರೋಚಕತೆ ಹೆಚ್ಚಿಸಲಿವೆ. ಜೊತೆಗೆ ಈ ಬಾರಿ ಟೀವಿ ವರ್ಸಸ್ ಡಿಜಿಟಲ್ ‘ಯುದ್ಧಕ್ಕೂ’ ಐಪಿಎಲ್ ಸಾಕ್ಷಿಯಾಗಲಿದೆ.