ಏರಿಕೆಯಾಗುತ್ತಿರುವ ಡೆಂಗ್ಯೂ ಪ್ರಕರಣ. ಇಂದು ಸಾಗರದಲ್ಲಿ ಒಬ್ಬ ವ್ಯಕ್ತಿ ಬಲಿ!
ಮಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ದಿನೇ ದಿನೇ ಏರಿಕೆ ಆಗುತ್ತಿವೆ. ಇಂದು ಸಾಗರದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಡೆಂಗಿಗೆ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.
ಮಳೆಗಾಲದಲ್ಲಿ ಡೆಂಗ್ಯೂ ಪ್ರಕರಣಗಳು ಅದರಲ್ಲೂ ಹೆಚ್ಚಾಗಿ ನಗರ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿದೆ. ಸೊಳ್ಳೆಯಿಂದ ಕಾಣಿಸಿಕೊಳ್ಳುವುದರಿಂದ ಆರೋಗ್ಯ ಇಲಾಖೆ ಈ ನೆಲೆಯಲ್ಲಿ ಮುನ್ನೆಚ್ಚರಿಕೆವಹಿಸಬೇಕಾದ ಅಗತ್ಯವಿದೆ.
ಮಹಿಳೆಯ ದೂರಿಗೆ ಸಂಬಂಧಿಸಿದಂತೆ ಬಿಎಸ್ ಯಡಿಯೂರಪ್ಪಗೆ ನೋಟಿಸ್ ಜಾರಿಗೊಳಿಸಿದ್ದ ಪೊಲೀಸರು ನಿನ್ನೆ ತನಿಖೆಗೆ ಹಾಜರಾಗುವಂತೆ ಸೂಚಿಸಿದ್ದರು. ಆದರೆ ಅಪಾಯ ಮನಗಂಡ ಬಿಎಸ್ ವೈ ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಪ್ರಕರಣಕ್ಕೆ ತಡೆಯಾಜ್ಞೆ ನೀಡುವಂತೆ ಮನವಿ ಮಾಡಿದ್ದಾರೆ. ಇನ್ನು ವಿಚಾರಣೆಗೆ ಹಾಜರಾಗುವಂತೆ ನೀಡಿರುವ ನೋಟಿಸ್ ಗೂ ಉತ್ತರ ನೀಡಿರುವ ಬಿಎಸ್‌ವೈ ಸೋಮವಾರ ಜೂನ್ 17 ರಂದು ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ.
ಡೆಂಗ್ಯೂ ಜ್ವರದ ಲಕ್ಷಣಗಳೇನು? ಡೆಂಗ್ಯೂ ಸೊಳ್ಳೆ ಯಾವಾಗ ಕಚ್ಚುತ್ತದೆ?
ಡೆಂಗ್ಯೂ ಜ್ವರವು ಸೊಳ್ಳೆ ಕಡಿತದಿಂದ ಹರಡುವಂತಹ ಗಂಭೀರ ಕಾಯಿಲೆಯಾಗಿದೆ. ಭಾರತದಲ್ಲಿ, ಡೆಂಗ್ಯೂಗೆ ಸಾಮಾನ್ಯ ಕಾರಣವೆಂದರೆ ಈಡಿಸ್ ಎಂಬ ಸೊಳ್ಳೆ. ಈಡಿಸ್ ಸೊಳ್ಳೆ ಡೆಂಗ್ಯೂ ವೈರಸ್ ಅನ್ನು ಒಬ್ಬರಿಂದ ಇನ್ನೊಬ್ಬರಿಗೆ ವರ್ಗಾಯಿಸುತ್ತದೆ.
ಈಡಿಸ್ ಸೊಳ್ಳೆ ಡೆಂಗ್ಯೂನಿಂದ ಬಳಲುತ್ತಿರುವ ವ್ಯಕ್ತಿಯ ರಕ್ತವನ್ನು ಹೀರಿಕೊಂಡಾಗಲೆಲ್ಲ ಅದು ತನ್ನ ದೇಹದಲ್ಲಿ ಡೆಂಗ್ಯೂ ವೈರಸ್ ಅನ್ನು ಸಂಗ್ರಹಿಸುತ್ತದೆ. ನಂತರ ಅದು ಇನ್ನೊಬ್ಬ ಆರೋಗ್ಯವಂತ ವ್ಯಕ್ತಿಯನ್ನು ಕಚ್ಚಿದಾಗ ಡೆಂಗ್ಯೂ ವೈರಸ್ ಆ ವ್ಯಕ್ತಿಯ ದೇಹವನ್ನು ಪ್ರವೇಶಿಸುತ್ತದೆ.
ಡೆಂಗ್ಯೂ ಕಾಣಿಸಿಕೊಂಡ 3 ರಿಂದ 10 ದಿನಗಳ ನಂತರ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ಸಮಯದಲ್ಲಿ ರೋಗಲಕ್ಷಣಗಳನ್ನು ಅರ್ಥಮಾಡಿಕೊಂಡು ವೈದ್ಯರಿಂದ ಚಿಕಿತ್ಸೆ ಪಡೆದರೆ ರೋಗ ಗಂಭೀರವಾಗುವುದನ್ನು ತಡೆಯಬಹುದು. ಆದರೆ ಡೆಂಗ್ಯೂ ಚಿಕಿತ್ಸೆ ಪಡೆಯದಿದ್ದರೆ ಅಪಾಯಕಾರಿ ರೂಪ ತಳೆಯಬಹುದು. ರಕ್ತಸ್ರಾವ, ರಕ್ತದೊತ್ತಡ ಕಡಿಮೆಯಾಗಿ ಸಾವು ಸಂಭವಿಸಬಹುದು.
ಡೆಂಗ್ಯೂ ಹಠಾತ್ ಜ್ವರವನ್ನು ಉಂಟುಮಾಡುತ್ತದೆ. ಇದು 104 ° F ವರೆಗೆ ಏರುತ್ತದೆ. ಸಾಮಾನ್ಯ ಜ್ವರದಲ್ಲಿ ಜ್ವರ ನಿಧಾನವಾಗಿ ಹೆಚ್ಚಾಗುತ್ತದೆ.
ಡೆಂಗ್ಯೂ ಜ್ವರದಿಂದ ತಲೆನೋವು, ಬೆನ್ನು ನೋವು, ಸ್ನಾಯು ನೋವು ಮತ್ತು ಕೀಲು ನೋವು ಇರುತ್ತದೆ, ಸಾಮಾನ್ಯ ಜ್ವರದಲ್ಲಿ ಈ ನೋವುಗಳು ಇರುವುದಿಲ್ಲ.
ಡೆಂಗ್ಯೂನಲ್ಲಿ, ಚರ್ಮದ ಮೇಲೆ ಕೆಂಪು ದದ್ದುಗಳು ಕಾಣಿಸಿಕೊಳ್ಳುತ್ತವೆ, ಇದು ಈ ರೋಗವನ್ನು ಗುರುತಿಸುವ ಮುಖ್ಯ ಲಕ್ಷಣವಾಗಿದೆ.
ಡೆಂಗ್ಯೂನಲ್ಲಿ ರಕ್ತಸ್ರಾವದ ಸಮಸ್ಯೆ ಇರಬಹುದು, ಇದರಿಂದಾಗಿ ರೋಗಿಯ ಮೂಗು ಮತ್ತು ಬಾಯಿಯಿಂದ ರಕ್ತಸ್ರಾವವಾಗಬಹುದು.
ಡೆಂಗ್ಯೂನಿಂದ ಪ್ಲೇಟ್ಲೆಟ್ಗಳು ಮತ್ತು ಬಿಳಿ ರಕ್ತ ಕಣಗಳ ಸಂಖ್ಯೆ ವೇಗವಾಗಿ ಕುಸಿಯಬಹುದು.
ಡೆಂಗ್ಯೂ ಅಪಾಯಕಾರಿಯಾಗಬಹುದು, ಸಾಮಾನ್ಯ ಜ್ವರ ಸೌಮ್ಯವಾಗಿರುತ್ತದೆ.
ಡೆಂಗ್ಯೂ ಸೊಳ್ಳೆಗಳ ಬಗ್ಗೆ ಸಾಮಾನ್ಯ ತಪ್ಪು ಕಲ್ಪನೆಯೆಂದರೆ ಅವು ಹಗಲಿನಲ್ಲಿ ಮಾತ್ರ ಕಚ್ಚುತ್ತವೆ ಎನ್ನುವುದು, ಆದರೆ ಇದು ನಿಜವಲ್ಲ. ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಕಾರ, ಡೆಂಗ್ಯೂಗೆ ಕಾರಣವಾಗುವ ಈಡಿಸ್ ಸೊಳ್ಳೆಗಳು ಹಗಲು ರಾತ್ರಿ ಕಚ್ಚುತ್ತವೆ. ಈಡಿಸ್ ಸೊಳ್ಳೆಗಳು ಬೆಳಿಗ್ಗೆ ಮತ್ತು ಸಂಜೆ ಹೆಚ್ಚು ಸಕ್ರಿಯವಾಗಿರುತ್ತವೆ. ಆದರೆ ಈ ಸೊಳ್ಳೆಗಳು ರಾತ್ರಿಯಲ್ಲಿ ವಿಶೇಷವಾಗಿ ಕತ್ತಲೆ ಕೋಣೆಗಳಲ್ಲಿ ಕಚ್ಚುತ್ತವೆ.