ಏಪ್ರಿಲ್ 14ರಂದು ಮಂಗಳೂರಿಗೆ ನರೇಂದ್ರ ಮೋದಿ ಆಗಮನ. ನಂತರ ಯೋಗಿ ಮಂಗಳೂರಿಗೆ ಆಗಮಿಸುವುದು ಬಹುತೇಕ ಫಿಕ್ಸ್!

ಮಂಗಳೂರು: ಚುನಾವಣಾ ಪ್ರಚಾರಕ್ಕೆ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಂಗಳೂರಿಗೆ ಬರುವ ಕಾರ್ಯಕ್ರಮ ಬಹುತೇಕ ಫಿಕ್ಸ್ ಆಗಿದ್ದು, ಆದರೆ ಯಾವಾಗ ಬರುತ್ತಾರೆ ಎಂಬುದು ಮಾಹಿತಿ ಇನ್ನು ಲಭ್ಯವಾಗಿಲ್ಲ. ಈ ಬಗ್ಗೆ ವಿಡಿಯೋವನ್ನು ಹಂಚಿಕೊಂಡಿರುವ ಬಿಜೆಪಿ ದಿನಾಂಕದ ಬಗ್ಗೆ ಯಾವುದೇ ಮಾಹಿತಿಯನ್ನು ಹೊರಗೆ ಹಾಕಿಲ್ಲ.
ಈ ನಡುವೆ ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರಿಗೆ ಮೋದಿ ಬರುವ ಕಾರ್ಯಕ್ರಮದ ಅಧಿಕೃತ ಮಾಹಿತಿ ಹೊರ ಬಂದಿದೆ.
ಪ್ರಧಾನಿಯಿಂದ ಜನರಿಗೆ ‘ಶಾಶ್ವತ ಗ್ಯಾರೆಂಟಿ’: ಬಸವರಾಜ ಬೊಮ್ಮಾಯಿ
ಪ್ರಸ್ತುತ ಲೋಕಸಭಾ ಚುನಾವಣೆಯಲ್ಲೂ ಸಹ ಗ್ಯಾರೆಂಟಿಗಳದ್ದೆ ಕಾರುಬಾರು ಎನ್ನುವಂತಾಗಿದೆ. ಇತ್ತೀಚೆಗಷ್ಟೇ ಕಾಂಗ್ರೆಸ್ 25 ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸುವುದಾಗಿ ತಿಳಿಸಿದೆ. ಇದರ ಬೆನ್ನಲ್ಲೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ಮೋದಿಯವರು ದೇಶದ ಜನರಿಗೆ ನೀಡಿ ಗ್ಯಾರೆಂಟಿಗಳ ಲೆಕ್ಕ ಬಿಚ್ಚಿಟ್ಟಿದ್ದಾರೆ.
ಹೌದು, ಹಾವೇರಿ ಲೋಕಸಭಾ ಚುನಾವಣೆ ಅಭ್ಯರ್ಥಿಯಾಗಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಗದಗ ಜಿಲ್ಲೆಯ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಬಸಾಪುರ, ರಾಮಗಿರಿ ಗ್ರಾಮಗಳಲ್ಲಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಯವರು ಭಾರತ ದೇಶದ ಗ್ರಾಮೀಣ ಮಹಿಳೆಯರಿಗೆ, ಬಡವರಿಗೆ ಮನೆ, ಕುಡಿಯಲು ನೀರು, ಶೌಚಾಲಯ, ಉಜ್ವಲ ಗ್ಯಾಸ್, ಅಕ್ಕಿ ಸೇರಿದಂತೆ ಶಾಸ್ವತ ಗ್ಯಾರೆಂಟಿಗಳನ್ನು ನೀಡಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಗ್ಯಾರೆಂಟಿಗಳು ಎಂದು ಅವರು ವಿವರಿಸಿದರು.
8 ಲಕ್ಷ ಮನೆ ಮನೆ ನಿರ್ಮಾಣ ದೇಶ ಕಂಡ ದಿಟ್ಟ ಧಿಮಂತ ನಾಯಕ ನರೇಂದ್ರ ಮೋದಿಯವರು, ಅವರು ದೇಶದ ಎಲ್ಲರಿಗೂ ಶಾಸ್ವತ ಗ್ಯಾರೆಂಟಿಗಳನ್ನು ನೀಡಿದ್ದಾರೆ. ರಾಜ್ಯದಲ್ಲಿ ‘ಪಿಎಂ ಆವಾಸ ಯೊಜನೆ’ ಅಡಿಯಲ್ಲಿ 8 ಲಕ್ಷ ಮನೆ, 12 ಲಕ್ಷ ಶೌಚಾಲಯ ನಿರ್ಮಿಸಿಕೊಟ್ಟಿದ್ದಾರೆ.ಜಲ ಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆ ಮನೆಗೆ ನಲ್ಲಿ ಮೂಲಕ ನೀರು ನೀಡುತ್ತಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ 1300 ಕೊಟಿ ರೂ. ವೆಚ್ಚದಲ್ಲಿ ಜಲ ಜೀವನ್ ಮಿಷನ್ ಯೋಜನೆ ಜಾರಿಯಾಗುತ್ತಿದೆ. ಶಿರಹಟ್ಟಿ ಭಾಗದಲ್ಲಿಯೂ ಯೋಜನೆ ಅನಷ್ಠಾನವಾಗಲಿದೆ. ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ಸ್ವಲ್ಪ ವಿಳಂಬವಾಗಿದೆ. ಮಳೆಗಾಲಕ್ಕೆ ಯೋಜನೆ ಜಾರಿ ಆಗಲಿದೆ ಎಂದು ಅವರು ತಿಳಿಸಿದರು.