ಶುಕ್ರವಾರ, ಮೇ 3, 2024
ಕೋವಿಶೀಲ್ಡ್ ಆತಂಕದ ನಡುವೆ ಕೋವಾಕ್ಸಿನ್ ಸುರಕ್ಷತೆ ಬಗ್ಗೆ ಭಾರತ್ ಬಯೋಟೆಕ್ ಸ್ಪಷ್ಟನೆ ಏನು?-ಜೆಡಿಎಸ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಮೇಲೆ ಅತ್ಯಾಚಾರ ಆರೋಪ ; ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲು..!-4 ವರ್ಷಗಳ ಪದವಿ ಕೋರ್ಸ್ ನಿಯಮ ಸ್ಥಗಿತ: 3 ವರ್ಷದ ಡಿಗ್ರಿ ವ್ಯಾಸಂಗಕ್ಕೆ ಸರ್ಕಾರ ಸೂಚನೆ..!-ಮೊಬೈಲ್ ನಲ್ಲಿ ಅತ್ತೆಯನ್ನೇ ಹೊಡೆದು ಕೊಂದ ಸೊಸೆ; ಕುಸಿದು ಬಿದ್ದು ಸಾವು ಎಂದು ಕಥೆ..!-ವಿಪರೀತ ಸೆಖೆ ಎಂದು ರಾತ್ರಿ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಕೆಳಗೆ ಬಿದ್ದು ಸಾವು..!-ಅಮೇಥಿಯಲ್ಲಿ ರಾಹುಲ್ ಗಾಂಧಿ ಬದಲಿಗೆ ಸ್ಮೃತಿ ಇರಾನಿ ವಿರುದ್ಧ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ಹಿನ್ನೆಲೆ ಏನು?-ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್‌ ಹೆಬ್ಬಾಳ್ಕರ್‌ ಬೆಂಬಲಿಸುವಂತೆ ನೇಹಾ ತಂದೆ ನಿರಂಜನ ಹಿರೇಮಠ ಮನವಿ..!-ಬಂಟ್ವಾಳ :ನೇತ್ರಾವತಿ ಸೇತುವೆ ಬಳಿ ಟಿಪ್ಪರ್ ಹಾಗೂ ಸ್ಕೂಟರ್ ಮಧ್ಯೆ ಅಪಘಾತ ; ಸವಾರ ಮೃತ್ಯು.!-ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಬ್ರಿಜ್ ಭೂಷಣ್ ಗೆ ಕೈ ತಪ್ಪಿದ ಟಿಕೆಟ್ ; ಆದರೂ ಮಗನಿಗೆ ಬಿಜೆಪಿ ಟಿಕೆಟ್ ಘೋಷಣೆ.!-ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣವು ಚುನಾವಣೆ ಮೇಲೆ ಪರೋಕ್ಷವಾಗಿ ಪ್ರಭಾವ ಬೀರುತ್ತದೆ ; ಸಿ.ಟಿ ರವಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಎಲ್ಐಸಿ ನೀಡ್ತಾ ಇದೆ ವಾಟ್ಸಪ್ ಸೇವೆ: ಈ ನಂಬರ್ ನಲ್ಲಿ ಸಿಗಲಿದೆ ಸಂಪೂರ್ಣ ಸೇವಾ ವಿವರ

Twitter
Facebook
LinkedIn
WhatsApp
ಎಲ್ಐಸಿ ನೀಡ್ತಾ ಇದೆ ವಾಟ್ಸಪ್ ಸೇವೆ: ಈ ನಂಬರ್ ನಲ್ಲಿ ಸಿಗಲಿದೆ ಸಂಪೂರ್ಣ ಸೇವಾ ವಿವರ

ದೇಶದಲ್ಲಿ ಹಲವಾರು ಮಂದಿ ವಾಟ್ಸಾಪ್ ಬಳಕೆ ಮಾಡುತ್ತಾರೆ. ಹೀಗಿರುವಾಗ ಪ್ರಮುಖ ಸಂಸ್ಥೆಗಳು ತಮ್ಮ ಸೇವೆಯನ್ನು ವಾಟ್ಸಾಪ್ ಮೂಲಕ ನೀಡುತ್ತಿದೆ. ಈಗ ದೇಶದ ಪ್ರಮುಖ ವಿಮಾ ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ವಾಟ್ಸಾಪ್ ಸೇವೆಯನ್ನು ಆರಂಭ ಮಾಡಿದೆ.

ಶುಕ್ರವಾರ ಎಲ್‌ಐಸಿ ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಘೋಷಣೆ ಮಾಡಿದೆ. ಎಲ್‌ಐಸಿ ಪಾಲಿಸಿಯನ್ನು ಹೊಂದಿರುವವರು ಎಲ್‌ಐಸಿ ಸೇವೆಯನ್ನು ಎಲ್‌ಐಸಿ ಪೋರ್ಟಲ್‌ ಬದಲಾಗಿ ವಾಟ್ಸಾಪ್ ಮೂಲಕವೇ ಪಡೆಯಬಹುದು. ನೀವು 8976862090 ಸಂಖ್ಯೆಗೆ HI (ಹಾಯ್) ಎಂದು ಕಳುಹಿಸುವ ಮೂಲಕ ವಾಟ್ಸಾಪ್ ಸೇವೆಯನ್ನು ಪಡೆಯಬಹುದು.

ಎಲ್‌ಐಸಿ ಪೋರ್ಟಲ್‌ನಲ್ಲಿ ಎಲ್‌ಐಸಿ ಪಾಲಿಸಿಗೆ ರಿಜಿಸ್ಟರ್ ಮಾಡಿದ ಬಳಿಕ ಪಾಲಿಸಿದಾರರು ವಾಟ್ಸಾಪ್ ಸೇವೆಯನ್ನು ಪಡೆಯಬಹುದು. ಅದಕ್ಕಾಗಿ ನೀವು 8976862090 ಸಂಖ್ಯೆಯನ್ನು ಸೇವ್ ಮಾಡಿಕೊಳ್ಳಬೇಕು. ವಾಟ್ಸಾಪ್ ಮೂಲಕ 8976862090 ಸಂಖ್ಯೆಗೆ HI ಎಂದು ಕಳುಹಿಸುವ ಮೂಲಕ ಸೇವೆಯನ್ನು ಪಡೆಯುವುದನ್ನು ಆರಂಭಿಸಬಹುದು.
ಈ ಸೇವೆಯಲ್ಲಿ ಪಾಲಿಸಿ ಮೊತ್ತ, ಪ್ರೀಮಿಯಂ, ಪಾಲಿಸಿ ಸ್ಟೇಟಸ್, ಬೋನಸ್ ಸೇರಿದಂತೆ ಇನ್ನಿತರ ಸೇವೆಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ