ಶನಿವಾರ, ಮೇ 18, 2024
ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!-ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ-Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಎನ್‌ಸಿಪಿ ಮುಖ್ಯಸ್ಥ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ವಾಪಸ್ ಪಡೆದ ಶರದ್ ಪವಾರ್

Twitter
Facebook
LinkedIn
WhatsApp
Untitled 2

ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ಮುಖ್ಯಸ್ಥ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ಶರದ್ ಪವಾರ್ (Sharad Pawar) ಅವರು ತಮ್ಮ ರಾಜೀನಾಮೆಯನ್ನು ಹಿಂಪಡೆದಿದ್ದಾರೆ. ಶರದ್ ಪವಾರ್ ನೀಡಿದ ರಾಜೀನಾಮೆಯನ್ನು ತಿರಸ್ಕರಿಸಿದ ಪಕ್ಷದ ಸಮಿತಿ, ಪಕ್ಷದ ನಾಯಕತ್ವವನ್ನು  ಮುಂದುವರಿಸಲು ಪವಾರ್    ಅವರನ್ನು ವಿನಂತಿಸುವ  ಪ್ರಸ್ತಾಪವನ್ನು  ಅಂಗೀಕರಿಸಿತ್ತು.

ಶರದ್ ಪವಾರ್ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆ ಕಣ್ಣೀರಾದ ಕಾರ್ಯಕರ್ತರು, ಭಾರೀ ಪ್ರತಿಭಟನೆ ನಡೆಸಿ ರಾಜೀನಾಮೆ ಹಿಂಪಡೆಯುವಂತೆ ಒತ್ತಾಯಿಸಿದ್ದರು. ಸ್ಥಳಕ್ಕೆ ಭೇಟಿ ನೀಡಿದ್ದ ಶರದ್ ಪವಾರ್, ಪಕ್ಷದ ಭವಿಷ್ಯಕ್ಕಾಗಿ ಮತ್ತು ಹೊಸ ನಾಯಕತ್ವವನ್ನು ರಚಿಸಲು ತಮ್ಮ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿ ಕಾರ್ಯಕರ್ತರ ಮನವೋಲಿಸುವ ಯತ್ನ ನಡೆಸಿದ್ದರು. ಆದರೆ ಪಕ್ಷ ಸಮಿತಿಯು ಪವಾರ್ ಅವರ ರಾಜೀನಾಮೆಯನ್ನು ತಿರಸ್ಕರಿಸಿ ಅವರದ್ದೇ ನಾಯಕತ್ವದಲ್ಲಿ ಮುನ್ನಡೆಯಲು ನಿರ್ಧಿರಿಸಿತು. ಪರಿಣಾಮ ಪವಾರ್ ಅವರು ತಮ್ಮ ರಾಜೀನಾಮೆಯನ್ನು ಹಿಂಪಡೆದಿದ್ದಾರೆ.

ರಾಜೀನಾಮೆ ಹಿಂಪಡೆದ ನಂತರ ಮಾತನಾಡಿದ ಶರದ್ ಪವಾರ್, “ನಾನು ಪಕ್ಷದ ಅಧ್ಯಕ್ಷನಾಗಿ ಮುಂದುವರಿಯುತ್ತೇನೆ. ನನ್ನ ಹಿಂದಿನ ನಿರ್ಧಾರವನ್ನು ನಾನು ಹಿಂತೆಗೆದುಕೊಳ್ಳುತ್ತೇನೆ” ಎಂದರು. ಶರದ್ ಪವಾರ್ ಅವರು ತಮ್ಮ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಅವರ ಪುತ್ರಿ ಸುಪ್ರಿಯಾ ಸುಳೆ ಅವರು ಪಕ್ಷದ ಮುಖ್ಯಸ್ಥೆಯಾಗಲಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿಬಂದಿದ್ದವು. ಸದ್ಯ ರಾಜೀನಾಮೆ ಹಿಂಪಡೆತದಿಂದಾಗಿ ಈ ಊಹಾಪೋಹಕ್ಕೆ ತೆರೆಬಿದ್ದಿದೆ.

“ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿದರೂ ಸಂಘಟನೆಯಲ್ಲಿ ಯಾವುದೇ ಹುದ್ದೆ ಅಥವಾ ಜವಾಬ್ದಾರಿಗೆ ಉತ್ತರಾಧಿಕಾರಿ ರೂಪಿಸಬೇಕು ಎಂಬ ಸ್ಪಷ್ಟ ಅಭಿಪ್ರಾಯ ಹೊಂದಿದ್ದು, ಮುಂದೆ ಪಕ್ಷದಲ್ಲಿ ಸಂಘಟನಾ ಬದಲಾವಣೆ, ನಿಯೋಜನೆಗೆ ಒತ್ತು ನೀಡುತ್ತೇನೆ. ಹೊಸ ಜವಾಬ್ದಾರಿಗಳು, ಹೊಸ ನಾಯಕತ್ವವನ್ನು ರಚಿಸಲಾಗುವುದು. ಸಂಘಟನೆಯ ಬೆಳವಣಿಗೆಗೆ ನಾನು ಶಕ್ತಿಯುತವಾಗಿ ಕೆಲಸ ಮಾಡುತ್ತೇನೆ ಮತ್ತು ಪಕ್ಷದ ಸಿದ್ಧಾಂತ ಮತ್ತು ಪಕ್ಷದ ಗುರಿಗಳನ್ನು ಜನರ ಬಳಿಗೆ ಕೊಂಡೊಯ್ಯುತ್ತೇನೆ” ಎಂದು ಪವಾರ್ ಹೇಳಿದ್ದಾರೆ.

ಪವಾರ್ ಅವರು 1999 ರಿಂದ ಸ್ಥಾಪಿಸಿದ ಮತ್ತು ತಮ್ಮ ನೇತೃತ್ವದ ರಾಜಕೀಯ ಸಂಘಟನೆಯಾದ ಎನ್‌ಸಿಪಿಯ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯುತ್ತಿರುವುದಾಗಿ ಮಂಗಳವಾರ ತಿಳಿಸಿದ್ದರು. ನನಗೆ ಮೂರು ವರ್ಷಗಳ ರಾಜ್ಯಸಭಾ ಸದಸ್ಯತ್ವ ಉಳಿದಿದೆ, ಈ ಅವಧಿಯಲ್ಲಿ ನಾನು ಮಹಾರಾಷ್ಟ್ರ ಮತ್ತು ಭಾರತಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಕೇಂದ್ರೀಕರಿಸುತ್ತೇನೆ, ಯಾವುದೇ ಜವಾಬ್ದಾರಿಯನ್ನು (ಪಕ್ಷದ ಹುದ್ದೆಯ) ಸ್ವೀಕರಿಸುವುದಿಲ್ಲ. 1960ಮೇ 1 ರಿಂದ ಸುದೀರ್ಘ ಸಾರ್ವಜನಿಕ ಜೀವನದ ನಂತರ ಮೇ 1, 2023 ರವರೆಗೆ ಒಂದು ಹೆಜ್ಜೆ ಹಿಂದೆ ತೆಗೆದುಕೊಳ್ಳುವುದು ಅಗತ್ಯವಾಗಿದೆ. ಆದ್ದರಿಂದ, ನಾನು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದೇನೆ ಎಂದು ಪವಾರ್ ಹೇಳಿದ್ದರು.

 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ