ಉಳ್ಳಾಲ : ಚಾಲಕನ ನಿಯಂತ್ರಣ ತಪ್ಪಿ ಅಂಗಡಿಗೆ ನುಗ್ಗಿದ ಕಾರು - ಸರಣಿ ಅಪಘಾತ
Twitter
Facebook
LinkedIn
WhatsApp
ಉಳ್ಳಾಲ: ಇನೋವಾ ಕಾರು ಚಾಲಕನ ನಿಯಂತ್ರ ಣ ತಪ್ಪಿ ರಸ್ತೆಬದಿಯ ಅಂಗಡಿಗೆ ನುಗ್ಗಿ ನಂತರ ಸಮೀಪದಲ್ಲಿ ನಿಲ್ಲಿಸಲಾಗಿದ್ದ ಎಸ್ ಕ್ರಾಸ್ ಕಾರಿಗೆ ಢಿಕ್ಕಿ ಹೊಡೆದು, ಆ ಕಾರು ಸೂಚನ ಫಲಕದ ಕಂಬಕ್ಕೆ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿರುವ ಘಟನೆ ನಾಟೆಕಲ್ ಕಣಚೂರು ಆಸ್ಪತ್ರೆ ಮುಂಭಾಗದಲ್ಲಿ ಸಂಭವಿಸಿದೆ.
ಗುತ್ತಿಗೆದಾರ ನಾಸಿರ್ ಎಂಬವರ ಇನ್ನೋವಾ ಕಾರು ಢಿಕ್ಕಿ ಹೊಡೆದಿದೆ. ಮಂಗಳೂರಿನಿಂದ ಕೊಣಾಜೆ ಕಡೆಗೆ ತೆರಳುವ ಸಂದರ್ಭ ನಿಯಂತ್ರಣ ತಪ್ಪಿ ರಸ್ತೆಬದಿಯಲ್ಲಿ ಹಣ್ಣುಹಂಪಲು ಮಾರುತ್ತಿದ್ದ ಅಂಗಡಿಗೆ ನುಗ್ಗಿದೆ. ಅಲ್ಲಿಗೆ ನಿಲ್ಲದ ಕಾರು ರಸ್ತೆ ಬದಿಯಲ್ಲಿ ನಿಲ್ಲಿಸಿದ ಎಸ್ ಕ್ರಾಸ್ ಕಾರಿಗೆ ಢಿಕ್ಕಿ ಹೊಡೆದಿದೆ.
ಆ ಕಾರು ಎದುರುಗಡೆಯಿರುವ ರಸ್ತೆ ಸೂಚನಫಲಕದ ಕಂಬಕ್ಕೆ ಢಿಕ್ಕಿ ಹೊಡೆದು ಅದಕ್ಕೂ ಹಾನಿಯಾಗಿ ಸರಣಿ ಅಪಘಾತ ಸಂಭವಿಸಿದೆ.