ಬುಧವಾರ, ನವೆಂಬರ್ 20, 2024
ಟೆಸ್ಲಾ ಕಾರು ಅಪಘಾತ, ಗುಜರಾತ್ ಮೂಲದ ನಾಲ್ವರ ದುರ್ಮರಣ!-ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!-ಸ್ನೇಹಿತೆಯರ ಜತೆ ಸೆಲ್ಫಿ: ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ರಕ್ಷಣೆ-ದಾಖಲೆ ಬರೆದ ತೇಜಸ್ವಿ ಸೂರ್ಯ, 'ಐರನ್‌ ಮ್ಯಾನ್‌ 70.3 ರೇಸ್‌' ಪೂರ್ಣಗೊಳಿಸಿದ ಮೊದಲ ಸಂಸದ-ಟೆಕ್ನಾಲಜಿ ಬದಲಾದ್ರೆ ಸಾಕಾ? ರಾಜಕೀಯ, ರಾಜಕಾರಣಿಗಳು ಬದಲಾಗಬಾರದಾ? ಸಂಚಲನ ಸೃಷ್ಟಿಸಿದ ದಳಪತಿ ವಿಜಯ್-ಉಪ ಚುನಾವಣೆಯಲ್ಲಿ ಗೆದ್ದರೆ ಡಿಕೆಶಿ ಸಿಎಂ, ಸಂಚಲನ ಮೂಡಿಸಿದ ಕೈ ಶಾಸಕನ ಹೇಳಿಕೆ!-ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ: ಕಾಂಗ್ರೆಸ್ ಬಂಡಾಯ ಶಮನ; ಅಕ್ಟೋಬರ್ 30ರಂದು ನಾಮಪತ್ರ ವಾಪಸ್ ಪಡೆದುಕೊಳ್ಳುತ್ತಾರಾ ಖಾದ್ರಿ?-19 ವರ್ಷದ ಗೆಳತಿಯನ್ನು ಕೊಂದು ಹೂತಿಟ್ಟ ಪ್ರಿಯಕರ, ಸಹಚರನ ಬಂಧನ-ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!-ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಉರುಳಿಬಿದ್ದ ಬಂಡೆ, ಮಕ್ಕಳಿಬ್ಬರು ಸೇರಿ ಮೂವರು ಸಾವು

Twitter
Facebook
LinkedIn
WhatsApp
ಉರುಳಿಬಿದ್ದ ಬಂಡೆ, ಮಕ್ಕಳಿಬ್ಬರು ಸೇರಿ ಮೂವರು ಸಾವು

ಉರುಳಿಬಿದ್ದ ಬಂಡೆ, ಮಕ್ಕಳಿಬ್ಬರು ಸೇರಿ ಮೂವರು ಸಾವು

ರಾಯಚೂರು: ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗೌಡೂರು ತಾಂಡಾದಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಹೊಲದ ಬದುವಿಗೆ ಹಾಕಿದ್ದ ಬೃಹತ್ ಗಾತ್ರದ ಬಂಡೆಯೊಂದು ಉರುಳಿಬಿದ್ದು ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಮೃತರನ್ನು 8 ವರ್ಷದ ವೈಶಾಲಿ, 9 ವರ್ಷದ ಮಂಜುನಾಥ್​​ ಎಂದು ಗುರುತಿಸಲಾಗಿದೆ. ಮತ್ತೋರ್ವನಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ರಘು ಎಂಬಾತ ಮೃತಪಟ್ಟಿದ್ದಾನೆ.

ದಸರಾ ರಜೆ ಹಿನ್ನೆಲೆಯಲ್ಲಿ ಮಕ್ಕಳು ಪೋಷಕರ ಜೊತೆಗೆ ಜಮೀನಿಗೆ ಹೋಗಿದ್ದರು. ಇದೇ ವೇಳೆ ಜಮೀನಿನ ಬದುವಿನಲ್ಲಿ ಹಾಕಲಾಗಿದ್ದ ಕಲ್ಲು ಬಂಡೆಗಳ ಸುತ್ತಮುತ್ತ ಮಕ್ಕಳು ಆಟವಾಡುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಡಿವೈಡರ್‌ಗೆ ಡಿಕ್ಕಿ ಹೊಡೆದು ಆಟೋ ಮೇಲೆ ಬಿದ್ದ ಕಾರು – ಇಬ್ಬರು ಸ್ಥಳದಲ್ಲೇ ಸಾವು:

 

ಹಾವೇರಿ: ಡಿವೈಡರ್‌ಗೆ ಕಾರೊಂದು ಡಿಕ್ಕಿ ಹೊಡೆದು ಪಕ್ಕದ ರಸ್ತೆಯಲ್ಲಿ ಹೋಗುತ್ತಿದ್ದ ಆಟೋ ಮೇಲೆ ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹಾವೇರಿ: ಡಿವೈಡರ್‌ಗೆ ಕಾರೊಂದು ಡಿಕ್ಕಿ ಹೊಡೆದು ಪಕ್ಕದ ರಸ್ತೆಯಲ್ಲಿ ಹೋಗುತ್ತಿದ್ದ ಆಟೋ ಮೇಲೆ ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹಾವೇರಿ ನಗರ ಹೊರವಲಯದ ತೋಟದಯಲ್ಲಾಪುರ (Totadayallapur) ಗ್ರಾಮದ ಬಳಿಯ ಪುಣೆ-ಬೆಂಗಳೂರು (Pune-Bengaluru) ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಈ ಘಟನೆ ನಡೆದಿದೆ.

ಆಟೋದಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮೃತರ ಹೆಸರು ಪತ್ತೆಯಾಗಿಲ್ಲ. ಮೃತರು ದಾವಣಗೆರೆ (Davanagere) ಮೂಲದವರು ಎನ್ನಲಾಗಿದೆ. ಕಾರು ಚಾಲಕನ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ರೋಡ್ ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದು ಆಟೋ ಮೇಲೆ ಬಿದ್ದ ರಭಸಕ್ಕೆ ಆಟೋದಲ್ಲಿದ್ದ ಪೇರಳೆ ಮತ್ತು ಚಿಕ್ಕು ಹಣ್ಣುಗಳು ಚೆಲ್ಲಾಪಿಲ್ಲಿಯಾಗಿವೆ. 

ಆಟೋ ಹುಬ್ಬಳ್ಳಿಯಿಂದ (Hubballi) ರಾಣೆಬೆನ್ನೂರು ಕಡೆಗೆ ತೆರಳುತ್ತಿತ್ತು. ಕಾರು ದಾವಣಗೆರೆ ಕಡೆಯಿಂದ ಹುಬ್ಬಳ್ಳಿಯತ್ತ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಸ್ಥಳಕ್ಕೆ ಹಾವೇರಿ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾವೇರಿ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಕೊಡಗಿನಲ್ಲಿ ಕಾಡಾನೆ ದಾಳಿಗೆ ವ್ಯಕ್ತಿ ಬಲಿ

ಕೊಡಗು: ಜಿಲ್ಲೆಯ ಮಡಿಕೇರಿ ತಾಲೂಕಿನ ಭಾಗಮಂಡಲ- ಸಮೀಪದ‌ ಚೇರಂಗಾಲ ಗ್ರಾಮದಲ್ಲಿ ಕಾಡಾನೆ ದಾಳಿಗೆ ವ್ಯಕ್ತಿಯೋರ್ವ ಸಾವನ್ನಪ್ಪಿದ್ದಾನೆ. ಕರುಣಾಕರ ಬಲಿ(34) ಮೃತ ರ್ದುದೈವಿ. ಕಾಡಿಗೆ ತೆರಳಿದ್ದಾಗ ಕರುಣಾಕರ ಮೇಲೆ ಕಾಡಾನೆ ದಾಳಿ‌ ಮಾಡಿದ್ದು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸಧ್ಯ ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದ್ದು, ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ತಾನೇ ಜನ್ಮ ನೀಡಿದ ಮಕ್ಕಳ ಜೀವ ತೆಗೆದು ತಾಯಿ ..!

ರಾಮನಗರ: ಬೆಂಗಳೂರಿನಲ್ಲಿ ವಾಸವಿದ್ದ ಗಂಡನನ್ನು ಬಿಟ್ಟು ಎರಡು ಮಕ್ಕಳೊಂದಿಗೆ ಪ್ರಿಯಕರನೊಂದಿಗೆ ಓಡಿ ಹೋಗಿ ರಾಮನಗರದಲ್ಲಿ ವಾಸವಾಗಿದ್ದ ತಾಯಿ ತನ್ನ ಅಕ್ರಮ ಸಂಬಂಧಕ್ಕೆ ಈ ಮಕ್ಕಳು ಅಡ್ಡಿಯಾಗುತ್ತವೆ ಎಂದು ತಲೆದಿಂಬಿನಿಂದ ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಮನಕಲಕುವ ಘಟನೆ ಬೆಳಕಿಗೆ ಬಂದಿದೆ. 

 ಹೆತ್ತ ತಾಯಿಯೇ ಅಕ್ರಮ ಸಂಬಂಧಕ್ಕಾಗಿ ಪ್ರಿಯಕರನ ಜೊತೆ ಸೇರಿಕೊಂಡು ತನ್ನ ಹೊಟ್ಟೆಯಲ್ಲಿಯೇ ಹುಟ್ಟಿದ ಇಬ್ಬರು ಪುಟ್ಟ ಕಂದಮ್ಮಗಳನ್ನು ಸಾಯಿಸಿದ್ದಾಳೆ. ಈ ಮಕ್ಕಳು ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತವೆ, ಎಂದು ಕೊಲೆ ಮಾಡಿದ್ದಾಗಿ ಬಾಯಿ ಬಿಟ್ಟಿದ್ದಾಳೆ. 

ಹೀಗೆ ಕೊಲೆ ಮಾಡಿದ ಮಹಿಳೆಯ ಹೆಸರು ಸ್ವೀಟಿ (24). ತಾಯಿಯಿಂದಲೇ ಕೊಲೆಯಾದ ಮಕ್ಕಳು ಕಬೀಲಾ (2) ಹಾಗೂ ಕಬೀಲನ್ (11) ಆಗಿದ್ದಾರೆ. ತಾನೇ ಜನ್ಮ ನೀಡಿದ ಮಕ್ಕಳ ಜೀವ ತೆಗೆದು ರಾಮನಗರದ ಸ್ಮಶಾನದಲ್ಲಿ ದಫನ್ ಮಾಡಿ ಬಂದಿದ್ದಾರೆ. ಈ ಘಟನೆ ತಾಯಿ ಕುಲಕ್ಕೆ ಅವಮಾನ ಮಾಡಿದ ಕೃತ್ಯವಾಗಿದೆ ಎಂದು ಸ್ಥಳೀಯರು ಆ ತಾಯಿಗೆ ಹಿಡಿಶಾಪ ಹಾಕಿದ್ದಾರೆ. 

ಈಕೆ ಮೂಲತಃ ಬೆಂಗಳೂರು ನಗರದ ಎ.ಕೆ. ಕಾಲೋನಿ ನಿವಾಸಿಯಾಗಿದ್ದಳು. ಆದರೆ, ಪ್ರಿಯಕರನ ಮೋಹಕ್ಕೆ ಒಳಗಾಗಿದ್ದ ಈಕೆ ಗಂಡನನ್ನು ಬಿಟ್ಟು ತನ್ನ ಎರಡು ಮಕ್ಕಳೊಂದಿಗೆ ಪ್ರಿಯಕರ ಗ್ರೆಗೋರಿ ಫ್ರಾನ್ಸಿಸ್ (27) ನೊಂದಿಗೆ ರಾಮನಗರಕ್ಕೆ ಬಂದು ಮಂಜುನಾಥ ನಗರದಲ್ಲಿ ವಾಸವಿದ್ದರು.

ಇಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದರು. ಆದರೆ, ದಿನ ಕಳೆಯುತ್ತಿದ್ದಂತೆ ಬೇರೆಯವನ ಮಕ್ಕಳನ್ನು ಪ್ರೀತಿಯಿಂದ ಕಾಣದೇ ಪ್ರಿಯಕರ ಗ್ರೆಗೋರಿ ಫ್ರಾನ್ಸಿಸ್ ಮಕ್ಕಳ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಇದರ ಮದ್ಯದಲ್ಲಿ ಮಕ್ಕಳಿಗೆ ಅನಾರೋಗ್ಯ ಉಂಟಾದಾಗ ಅವುಗಳನ್ನು ಕಾಳಜಿ ಮಾಡದೇ ನಿರ್ಲಕ್ಷ್ಯ ಮಾಡಿದ್ದಾರೆ. ಹೀಗಾದರೆ ನಾವಿಬ್ಬರೂ ಅಕ್ರಮ ಸಂಬಂಧಕ್ಕಾಗಿ ಊರು ಬಿಟ್ಟು ಬಂದರೂ ಏನೂ ಫಲಬವಿಲ್ಲ ಎಂದು ಮೊದಲು ದೊಡ್ಡ ಮಗುವನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಈ ಮಗುವನ್ನು ರಾಮನಗರದ ಸ್ಮಶಾನದಲ್ಲಿ ಹೋಗಿ ದಫನ್ ಮಾಡಿ ಬಂದಿದ್ದಾರೆ.

ಇದಾದ ನಂತರ ತನ್ನ ಕರುಳಬಳ್ಳಿಯ ರಕ್ತ ಹಂಚಿಕೊಂಡು ಹುಟ್ಟಿದ ಮಗುವನ್ನು ಕೊಲೆ ಮಾಡಿದ್ದೇನೆ ಎಂಬ ಕಿಂಚಿತ್ತೂ ಕನಿಕರಪಟ್ಟುಕೊಳ್ಳದೇ ಪ್ರಿಯಕರನೊಂದಿಗೆ ಸಂತಸದಿಂದಿದ್ದಾಳೆ. 

ಇದಾದ ನಂತರ ಇವರ ಸಂಬಂಧಕ್ಕೆ 2 ವರ್ಷದ ಮಗು ಅಳವುದು ಹಾಗೂ ಹಠ ಮಾಡುವುದು ಅಡ್ಡಿಯಾಗಿದೆ. ಆಗ ಒಂದು ಮಗುವನ್ನು ಕೊಲೆ ಮಾಡಿದ ಇವರಿಗೆ ಈ ಮಗುವನ್ನು ಕೊಲೆ ಮಾಡಿದರೆ ತಾವು ಕೂಡ ಪ್ರಣಯ ಪಕ್ಷಿಗಳಾಗಿ ಹೊಸ ಜೀವನ ಆರಂಭಿಸಬಹುದು ಎಂದು ಯೋಜನೆ ರೂಪಿಸಿದ್ದಾರೆ. ಅದರಂತೆ, ಇನ್ನೊಂದು ಚಿಕ್ಕ ಮಗುವನ್ನು ಕೂಡ ಅದೇ ರೀತಿ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ, ಸ್ಮಶಾನದಲ್ಲಿ ಅನಾರೋಗ್ಯದಿಂದ ಸಾವನ್ನಪ್ಪಿದೆ ಎಂದು ಹೇಳಿ ದಫನ್ ಮಾಡಿ ಬಂದಿದ್ದಾರೆ.

ಆದರೆ, 15 ದಿನಗಳ ಅಂತರದಲ್ಲಿ ಎರಡು ಮಕ್ಕಳು ಸಾವನ್ನಪ್ಪಿದ್ದು, ಅದೇ ತಂದೆ ತಾಯಿ ಬಂದು ಮಕ್ಕಳನ್ನು ದಫನ್ ಮಾಡಿದ್ದ ಬಗ್ಗೆ ಸ್ಮಶಾನದ ಸಿಬ್ಬಂದಿಗೆ ಅನುಮಾನ ಬಂದಿದೆ. ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾನೆ.

ಸ್ಮಶಾನದ ಕಾವಲುಗಾರನ ದೂರನ್ನು ಆಧರಿಸಿ ಐಜೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಮಕ್ಕಳನ್ನು ದಫನ್ ಮಾಡಿಹೋದ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ನಂತರ, ಮಕ್ಕಳ ಸಾವಿನ ಬಗ್ಗೆ ವಿಚಾರಣೆ ಮಾಡಿದಾಗ, ಅನಾರೋಗ್ಯದಿಂದ ಸಾವು ಎಂದು ಹೇಳಿದ್ದಾರೆ. ಪೊಲೀಸರ ಸ್ಟೈಲ್‌ನಲ್ಲಿ ವಿಚಾರಣೆ ಮಾಡಿದಾಗ ಸತ್ಯವನ್ನು ಒಪ್ಪಿಕೊಂಡು ತಾನೇ ತನ್ನಿಬ್ಬರು ಮಕ್ಕಳನ್ನು ಪ್ರಿಯಕರನೊಂದಿಗೆ ಸೇರಿಕೊಂಡು ಕೊಲೆ ಮಾಡಿದ್ದಾಗಿ ಹೇಳಿದ್ದಾಳೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ