ಶುಕ್ರವಾರ, ಮೇ 17, 2024
ಅಮಿತ್ ಶಾ ಪ್ರಧಾನಿಯಾಗಲು ವೇದಿಕೆ ಸಜ್ಜಾಗಿದೆ; ಹೇಳಿಕೆ ಪುನರುಚ್ಚರಿಸಿದ ಕೇಜ್ರಿವಾಲ್..!-ಮನೆಯ ಬಾತ್ ರೂಂ ನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ.!-ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡಂತೆ ಹೆದರಿಸುವಾಗಲೇ ಪತಿ ಸಾವು..!-ಮೇ 31 ರಂದು ಕೇರಳಕ್ಕೆ ಪ್ರವೇಶಿಸಲಿದೆ ನೈರುತ್ಯ ಮುಂಗಾರು.!-ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದ ಸಚಿನ್ ತೆಂಡೂಲ್ಕರ್ ಸೆಕ್ಯುರಿಟಿ ಗಾರ್ಡ್.!-Gold Price: ಆಭರಣ ಪ್ರಿಯರಿಗೆ ಇಂದಿನ ಚಿನ್ನ - ಬೆಳ್ಳಿಯ ದರ ಹೇಗಿದೆ.!-ನಾನು ಎಂದಿಗೂ ಹಿಂದೂ ಅಥವಾ ಮುಸ್ಲಿಂ ಬಗ್ಗೆ ಮಾತನಾಡಿಲ್ಲ; ಪ್ರಧಾನಿ ಮೋದಿ-ಕಾಲೇಜು ಕಟ್ಟಡದಿಂದ ಹಾರಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ ..!-ಇಂದು ಬೆಂಗಳೂರಿಗೆ ಬರಬೇಕಿದ್ದ ಪ್ರಜ್ವಲ್ ರೇವಣ್ಣ ಪ್ಲೈಟ್ ಹತ್ತದೆ ಮತ್ತೆ ವಿದೇಶದಲ್ಲಿ; ಎಸ್ಐಟಿ ಮುಂದಿನ ನಡೆ ಏನು.?-ನಟಿ ವೈಷ್ಣವಿ ಗೌಡಗೆ ಟ್ರಾಫಿಕ್ ಪೊಲೀಸರಿಂದ ದಂಡ; ಮಂಗಳೂರಿನ ಜಯಪ್ರಕಾಶ್‌ ಎಕ್ಕೂರುರವರಿಂದ ದೂರು.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿ ಪಿಟ್​ಬುಲ್ ಸೇರಿ ಮೂರು ನಾಯಿ ತಳಿಗಳಿಗೆ ನಿಷೇಧ

Twitter
Facebook
LinkedIn
WhatsApp

ಗಾಜಿಯಾಬಾದ್: ಉತ್ತರ ಪ್ರದೇಶದ ಗಾಜಿಯಾಬಾದ್​ ಮುನಿಸಿಪಲ್ ಕಾರ್ಪೊರೇಷನ್​ನಲ್ಲಿ (GMC) ಇತ್ತೀಚೆಗೆ ನಾಯಿಗಳು ದಾಳಿ ಮಾಡುವ, ಕಂಡಕಂಡವರಿಗೆ ಕಚ್ಚುವ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತವು ನಾಯಿಗಳನ್ನು ಸಾಕುವುದಕ್ಕೆ ಸಂಬಂಧಿಸಿದಂತೆ ಹೊಸದಾಗಿ ನಿಯಮಾವಳಿಗಳನ್ನು ರೂಪಿಸಿದೆ. ಅದರಂತೆ ಹೋರಾಟ ಮನೋಭಾವದ ಪಿಟ್​ಬುಲ್, ರೊಟ್​ವೀಲರ್ ಮತ್ತು ಡೊಗೊ ಅರ್ಜಂಟಿನೊ (Pit Bull, Rottweiler and Dogo Argentino) ತಳಿಗಳನ್ನು ಮನೆಗಳಲ್ಲಿ ಮುದ್ದಿನ ನಾಯಿಗಳಾಗಿ ಸಾಕುವುದಕ್ಕೆ ನಿಷೇಧ ಹೇರಲಾಗಿದೆ.

ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿ ಪಿಟ್​ಬುಲ್ ಸೇರಿ ಮೂರು ನಾಯಿ ತಳಿಗಳಿಗೆ ನಿಷೇಧ

ಈ ಮೂರೂ ತಳಿಗಳನ್ನು ನಿಷೇಧಿಸುವ ಕುರಿತು ಸಿಂಗ್ ಅವರು ಮಂಡಿಸಿದ ನಿಲುವಳಿಯನ್ನು ಮಹಾನಗರ ಪಾಲಿಕೆಯು ಅಂಗೀಕರಿಸಿತು. ‘ಹೊಸದಾಗಿ ಈ ತಳಿಗಳನ್ನು ಸಾಕಲು ಅವಕಾಶವಿಲ್ಲ. ಈಗಾಗಲೇ ಸಾಕುತ್ತಿರುವವರು ತಮ್ಮ ನಾಯಿಗಳಿಗೆ ಎರಡು ತಿಂಗಳ ಒಳಗೆ ಸಂತಾನಹರಣ ಚಿಕಿತ್ಸೆ ಮಾಡಿಸಬೇಕು’ ಎಂದು ಗಾಜಿಯಾಬಾದ್ ಮೇಯರ್ ಆಶಾ ಶರ್ಮಾ ಹೇಳಿದ್ದಾರೆ.

‘ನಾಯಿಗಳನ್ನು ಸಾಕಿರುವವರಿಗೆ ಅದು ಮುದ್ದು. ಆದರೆ ನಾಯಿಗಳಿಂದ ಕಡಿಸಿಕೊಂಡು ಗಾಯಗೊಂಡ ಮಕ್ಕಳ ಬಗ್ಗೆಯೂ ನಾವು ಯೋಚಿಸಬೇಕಿದೆ. ಪಿಟ್​ಬುಲ್ ಕಡಿತದಿಂದ ಕುಶ್ ತ್ಯಾಗಿ ಎಂಬ ಮಗುವಿನ ಮುಖಕ್ಕೆ 150 ಹೊಲಿಗೆ ಬಿದ್ದಿದೆ. ಇದಾದ ಕೆಲವೇ ದಿನಗಳಲ್ಲಿ ಇದೇ ತಳಿಯ ಮತ್ತೊಂದು ನಾಯಿ ಇನ್ನೊಂದು ಮಗುವಿನ ಮೇಲೆ ದಾಳಿ ಮಾಡಿತ್ತು. ನಗರ ವ್ಯಾಪ್ತಿಯಲ್ಲಿ 10ಕ್ಕೂ ಹೆಚ್ಚು ಮಕ್ಕಳು ನಾಯಿ ಕಡಿತದಿಂದ ಗಾಯಗೊಂಡಿದ್ದಾರೆ’ ಎಂದು ಅವರು ವಿವರಿಸಿದರು.

ಬೀದಿನಾಯಿಗಳಿಗೆ ಆಹಾರ ಕೊಡುವ ಬಗ್ಗೆ ಗಾಜಿಯಾಬಾದ್ ಮಹಾನಗರ ಪಾಲಿಕೆಯು ಯಾವುದೇ ನಿರ್ಬಂಧ ವಿಧಿಸಿಲ್ಲ. ಅವುಗಳಿಗೆ ಆಹಾರ ಕೊಡಲು ನಿರ್ದಿಷ್ಟ ಸ್ಥಳಗಳನ್ನು ಗುರುತಿಸಲಾಗುವುದು. ಎಲ್ಲೆಂದರಲ್ಲಿ ಆಹಾರ ಕೊಡುವಂತಿಲ್ಲ ಎಂದು ಪಾಲಿಕೆಯು ಸೂಚಿಸಿದೆ. ಸಾಕು ನಾಯಿ ಕಡಿತದಿಂದ ಯಾವುದೇ ವ್ಯಕ್ತಿಗೆ ತೊಂದರೆಯಾದರೆ ನಾಯಿ ಸಾಕಿದವರಿಗೆ ದಂಡ ವಿಧಿಸಲಾಗುವುದು ಎಂದು ಪಾಲಿಕೆಯು ಎಚ್ಚರಿಸಿದೆ.

ವೇಣೂರು ಯುವ ವಾಹಿನಿ ಘಟಕದ ಅತಿಥ್ಯದಲ್ಲಿ ಅಕ್ಟೋಬರ್ 9 ಆದಿತ್ಯವಾರ ನಡೆಯಲಿದೆ ಕೆಸರುಡೊಂಜಿ ದಿನ ಕಾರ್ಯಕ್ರಮ
ಅಂಗಾಂಗ ದಾನ ಮಾಡಿ 9 ಜೀವಗಳನ್ನು ಉಳಿಸಿದ ಮದನ್‌ ಕುಮಾರ್‌

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.! Twitter Facebook LinkedIn WhatsApp ಉಡುಪಿ: ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ

ಅಂಕಣ