ಸೋಮವಾರ, ಜೂನ್ 24, 2024
Sports for change Kho Kho ಪಂದ್ಯಾಟ: ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ನಯನಾಡು ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು-T20 ವಿಶ್ವಕಪ್‌: ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದ ಅಫ್ಘಾನಿಸ್ತಾನ-ವಿಧಾನ ಪರಿಷತ್ ಸದಸ್ಯ ಡಾ.ಸೂರಜ್‌ ರೇವಣ್ಣ ಬಂಧನ-ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಗುಡ್ ನ್ಯೂಸ್; ಜಾಮೀನು ಮಂಜೂರು..!-ದರ್ಶನ್ ಸೇರಿದಂತೆ 17 ಆರೋಪಿಗಳ ಕಸ್ಟಡಿ ಅಂತ್ಯ; ಇಂದು ನ್ಯಾಯಾಲಯಕ್ಕೆ ಹಾಜರು.!-ರಾಜ್ಯದಲ್ಲಿ ಮುಂಗಾರು ಚುರುಕು; ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ.!-ಅಶ್ಲೀಲ ವಿಡಿಯೋ ಪ್ರಕರಣ; ಪ್ರಜ್ವಲ್ ರೇವಣ್ಣಗೆ ಮತ್ತೆ ನ್ಯಾಯಾಂಗ ಬಂಧನ.!-4 ಓವರ್ ಗಳಲ್ಲಿ ಒಂದೇ ಒಂದು ರನ್ ನೀಡದೆ 3 ವಿಕೆಟ್ ಕಬಳಿಸಿ ದಾಖಲೆ ಬರೆದ ಲಾಕಿ ಫರ್ಗುಸನ್..!-ದರ್ಶನ್ ಫಾರಂ ಹೌಸ್ ಮ್ಯಾನೇಜರ್ ನಿಗೂಢ ಸಾವು; ಅನುಮಾನಾಸ್ಪದ ಸಾವು ಪ್ರಕರಣ ದಾಖಲು.!-ಶತಕದತ್ತ ಟೊಮೆಟೊ ದರ; ಮತ್ತಷ್ಟು ಏರಿಕೆಯಾಗಲಿದೆಯೇ ಟೊಮೆಟೊ ಬೆಲೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಉಡುಪಿ: ಪ್ರವಾಸಿಗರಿಗೆ ಮಲ್ಪೆ ಬೀಚ್ ಗೆ ಪ್ರವೇಶ ನಿಷೇಧ.!

Twitter
Facebook
LinkedIn
WhatsApp
ಉಡುಪಿ: ಪ್ರವಾಸಿಗರಿಗೆ ಮಲ್ಪೆ ಬೀಚ್ ಗೆ ಪ್ರವೇಶ ನಿಷೇಧ.!

ಉಡುಪಿ, ಜೂನ್​ 11: ಮಳೆಗಾಲದ ಸಮಯದಲ್ಲಿ ಕರಾವಳಿ ಜಿಲ್ಲೆಗಳಿಗೆ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಇಲ್ಲಿನ ವಾತಾವರಣ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ಮಳೆಗಾಲದಲ್ಲಿ ಮಳೆ-ಗಾಳಿಗೆ ಸಮುದ್ರಗಳ ಅಬ್ಬರ ಜೋರಾಗಿರುತ್ತದೆ. ಕಡಲು ತೀರ ಉಡುಪಿ (Udupi) ಜಿಲ್ಲೆಯಲ್ಲಿ ಬಿಟ್ಟು, ಬಿಡದೆ ವರುಣ ಆರ್ಭಟ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಜಿಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಮಲ್ಪೆ ಬೀಚ್​ಗೆ (Malpe Beach) ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ.

ಮಲ್ಪೆ ಬೀಚ್​ಗೆ ಬೇಲಿ ಹಾಕಿ, ಬೀಚ್ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. ಅಲ್ಲದೆ, ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾಡಳಿತ ಮತ್ತು ಸುರಕ್ಷತೆಯ ದೃಷ್ಟಿಯಿಂದ ಉಡುಪಿ ಜಿಲ್ಲಾಡಳಿತ ಮತ್ತು ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ಅನೇಕ ಕ್ರಮಗಳನ್ನು ಕೈಗೊಂಡಿದೆ.

ಸುಮಾರು ಒಂದು ಕಿಲೋಮೀಟರ್ ಉದ್ದಕ್ಕೆ ಏಳು ಅಡಿ ಎತ್ತರದ ಬಲೆ ಅಳವಡಿಸಿ ತಡೆ ಬೇಲಿಯನ್ನು ಸದ್ಯಕ್ಕೆ ನಿರ್ಮಿಸಲಾಗಿದೆ. ಜೊತೆಗೆ ಎಚ್ಚರಿಕೆಯ ಕೆಂಪು ಬಾವುಟ ಹಾಕಲಾಗಿದೆ. ಇದರ ಜೊತೆಗೆ ಆಯಕಟ್ಟಿನ ಜಾಗದಲ್ಲಿ ಬೀಚ್ ಪ್ರವೇಶ ನಿಷೇಧದ ಎಚ್ಚರಿಕೆ ಫಲಕಗಳನ್ನು ಕೂಡ ಅಳವಡಿಸಲಾಗಿದೆ. ಮಲ್ಪೆ ಬೀಚಿನಲ್ಲಿ ತರಬೇತಿ ಪಡೆದ ಜೀವ ರಕ್ಷಕರನ್ನ ನಿಯೋಜನೆ ಮಾಡಲಾಗಿದೆ. ನಿರಂತರವಾಗಿ ಎಟಿಬಿ ಸ್ಯಾಂಡ್ ಬೈಕ್ ಮೂಲಕ ಬೀಚ್​​ನ್ನು ಗಸ್ತು ತಿರುಗುವ ಜೀವ ರಕ್ಷಕ ಪಡೆಯ ಸದಸ್ಯರು ಬೀಚ್ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಮುನ್ನೆಚ್ಚರಿಕೆಗಳನ್ನ ನೀಡುತ್ತಾ, ಅವರನ್ನು ರಕ್ಷಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಮುದ್ರ ಪ್ರಸಿದ್ಧಿ ಆಗಿರುವ ಹಿನ್ನೆಲೆಯಲ್ಲಿ ಪ್ರವಾಸಿಗರು ಈ ಬಲೆಯನ್ನು ದಾಟಿ ಹೋಗದಂತೆ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳಲಾಗಿದೆ.

ಮಳೆಗಾಲದ ಅರಿವೇ ಇಲ್ಲದ ಹೊರ ಜಿಲ್ಲೆ ಮತ್ತು ಹೊರರಾಜ್ಯದ ಪ್ರವಾಸಿಗರು ಮಲ್ಪೆ ಬೀಚ್​ಗೆ ಇನ್ನೂ ಕೂಡ ಭೇಟಿ ನೀಡುತ್ತಿದ್ದು ಬೀಚ್​ನ ನೀರಿನಲ್ಲಿ ಆಟವಾಡಲು ಅವಕಾಶ ಸಿಗದೆ ಇರುವ ಹಿನ್ನೆಲೆಯಲ್ಲಿ ಬೇಸರದಿಂದ ಹಿಂದಿರುಗುತ್ತಿದ್ದಾರೆ. ಇನ್ನು ಕೆಲವು ಪ್ರವಾಸಿಗರು ಬೀಚ್​ನ ಮರಳಿನ ಮೇಲೆ ಆಟವಾಡುತ್ತಾ, ವಿಡಿಯೋ ಚಿತ್ರಿಸಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡು ತೆರುಳುತ್ತಿದ್ದಾರೆ.

ಸೂಚನೆ ಪಾಲಿಸದೆ ಸಮುದ್ರಕ್ಕೆ ಇಳಿಯುವ ಪ್ರವಾಸಿಗರು

ಉಡುಪಿ ಜಿಲ್ಲಾಡಳಿತ ಮತ್ತು ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ಇಷ್ಟೆಲ್ಲ ಕ್ರಮ ಕೈಗೊಂಡಿದ್ದರೂ ಪ್ರವಾಸಿಗರು ಸುರಕ್ಷತಾ ಕ್ರಮಗಳನ್ನು ನಿರ್ಲಕ್ಷಿಸಿ ಭಾನುವಾರ ಪ್ರವಾಸಿಗರು ಸೀ ವಾಕ್ ವೇ ಬಳಿ ನೀರಿಗೆ ಇಳಿದಿದ್ದರು. ಈ ಕುರತಿಯ ಜೀವರಕ್ಷಕರು ಮಾತನಾಡಿ, ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ನಿರ್ಬಂಧಗಳನ್ನು ಜಾರಿಗೊಳಿಸಲು ಮತ್ತು ಅಪಾಯಕಾರಿ ಮಾನ್ಸೂನ್ ಅವಧಿಯಲ್ಲಿ ಪ್ರವಾಸಿಗರು ನೀರಿಗೆ ಇಳಿಯುವುದನ್ನು ತಡೆಯಲು ಸ್ಥಳೀಯ ಪೊಲೀಸರ ಸಹಾಯ ಬೇಕು ಎಂದು ಮನವಿ ಮಾಡಿದ್ದಾರೆ.

ಜಿಲ್ಲಾಡಳಿತ ನೀಡಿದ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ನಿರ್ಲಕ್ಷಿಸಿ ಗಣನೀಯ ಸಂಖ್ಯೆಯಲ್ಲಿ ಪ್ರವಾಸಿಗರು ಮಲ್ಪೆ ಬೀಚ್‌ಗೆ ಆಗಮಿಸಿದ್ದಾರೆ. ಹಲವಾರು ನಿರ್ಬಂಧಗಳು ಮತ್ತು ಸಲಹೆಗಳ ಹೊರತಾಗಿಯೂ, ಅನೇಕ ಪ್ರವಾಸಿಗರು ಜೀವರಕ್ಷಕರ ಎಚ್ಚರಿಕೆಗಳನ್ನು ನಿರ್ಲಕ್ಷಿಸಿ ಕಡಲತೀರದ ದಕ್ಷಿಣ ಭಾಗದಲ್ಲಿ ಸಮುದ್ರಕ್ಕೆ ಇಳಿದಿದ್ದಾರೆ ಎಂದು ಸ್ಥಳೀಯರು ಹೇಳಿದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ